News

ಮನೆಯಲ್ಲಿಯೇ ಕುಳಿತು ಇಷ್ಟವಾದ ರಾಖಿ ಸಹೋದರರಿಗೆ ಕಳುಹಿಸಿ

28 July, 2020 10:53 PM IST By:

ಶ್ರಾವಣ ಮಾಸದ ಹುಣ್ಣಿಮೆ ಬಂತೆಂದರೆ ಎಲ್ಲೆಲ್ಲೂ ರಕ್ಷಾ ಬಂಧನ ಹಬ್ಬದ ಸಡಗರ ಮನೆ ಮಾಡಿರುತ್ತದೆ. ತನ್ನ ಅಣ್ಣನಿಗಾಗಿ ಯಾವ ಬಗೆಯ ರಾಖಿ  ಕೊಳ್ಳುವುದು ಎಂಬ ಕುತೂಹಲ ಅಕ್ಕತಂಗಿಯರಲ್ಲಿ ಕಾಡುತ್ತಿರುತ್ತದೆ. ಈ ಎಲ್ಲದರ ನಡುವೆ ರಾಖಿ ಹಬ್ಬದಂದು ಹಂಚಿಕೆಯಾಗುವುದು ಅಣ್ಣ ತಂಗಿಯರ ನಿರ್ಮಲವಾದ ಪ್ರೀತಿ, ಭಾಂಧವ್ಯ ಮತ್ತು ಸಂತಸ.

ಆದರೆ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಇಂತಹ ಪರಿಸ್ಥಿತಿಯಲ್ಲಿ  ರಾಖಿ (Rakhi) ಖರೀದಿಸಿ ಕಳುಹಿಸುವುದು ಹೇಗೆ ಎಂಬ  ಭಯ ಕಾಡುತ್ತಿದೆಯೆ ? ಮಾರುಕಟ್ಟೆಗೆ ಹೋಗಿ ಹೇಗೆ ಖರೀದಿಸಲಿ ಎಂಬ ಚಿಂತೆ ಕಾಡುತ್ತಿದೆಯೇ? ನಿಮ್ಮ ದುಗುಡ ದೂರ ಮಾಡಲು ಮನೆಯಿಂದಲೇ (Home) ರಾಖಿ ಕಳುಹಿಸಲು ಭಾರತೀಯ ಅಂಚೆ ಇಲಾಖೆ (Karnataka postal department) ರಾಖಿ ಪೋಸ್ಟ್  ಆನ್ ಲೈನ್ (online) ಸೇವೆಯನ್ನು ಆರಂಭಿಸಿದೆ.

ಮನೆಯಲ್ಲಿ ಕುಳಿತು ಮೊಬೈಲ್ (Mobile) ಅಥವಾ ಇಂಟರ್ನೆಟ್ ನೆರವಿನಿಂದ 100 ರೂಪಾಯಿ ಸಂದಾಯ ಮಾಡಿದರೆ ಸಾಕು. ದೇಶದ ಯಾವುದೇ ಮೂಲೆಯಲ್ಲಿರುವ ನಿಮ್ಮ ಸಹೋದರರಿಗೆ ರಕ್ಷಾ ಬಂಧನದ ದಿನ ಅಂಚೆ ಇಲಾಖೆ ರಾಖಿ ತಲುಪಿಸಲಿದೆ.

ಕೋವಿಡ್ ಸೋಂಕಿನ ಕಾರಣದಿಂದ ರಾಖಿ ಕಳುಹಿಸುವುದು ಮತ್ತು ಸ್ವೀಕರಿಸುವುದರಿಂದ ವಂಚಿತರಾಗುವದನ್ನು ತಪ್ಪಿಸಲು ಅಂಚೆ ಇಲಾಖೆ ಈ ವಿನೂತನ ಯೋಜನೆಯನ್ನು ರೂಪಿಸಿದೆ. www.karnatakapost.gov.in  ವೆಬ್ ಸೈಟ್ ಮೂಲಕ ಈ ಯೋಜನೆಯ ಅನುಕೂಲ ಪಡೆಯುವ ಅವಕಾಶವನ್ನು ಒದಗಿಸಿದೆ. ದೇಶದ ಗಡಿಯಲ್ಲಿರುವರ ಯೋಧರಿಗೂ ಈ ಯೋಜನೆಯಡಿ ರಾಖಿಗಳನ್ನು ತಲುಪಿಸಬಹುದು.

www.karnatakapost.gov.in/Rakhi-post ಗೆ ಲಾಗಿನ್ ಆಗಿ ರಾಖಿ ಕಳುಹಿಸುವ ಪೂರ್ಣ ವಿವರಗಳನ್ನು ನೀಡಿ ಮುಂದುವರೆದರೆ ಹನ್ನೊಂದು ವಿಧಧ ಆಕರ್ಷಕ ವಿನ್ಯಾಸವುಳ್ಳ ರಾಖಿಗಳು ಲಭ್ಯವಿರುತ್ತವೆ. ತಮಗೆ ಬೇಕಾದ ರಾಖಿ ಮತ್ತು ಮುದ್ರಿತ ಸಂದೇಶದ ಆಯ್ಕೆಯ ಅವಕಾಶವೂ ಇದೆ. ಸಂದೇಶದ ಫೋಟೋ ಕೂಡ ಸೆರೆಹಿಡಿದು ಕಳುಹಿಸಬಹುದು. ಕೊನೆಯಲ್ಲಿ ರಾಖಿ ಸ್ವೀಕರಿಸುವವರ ಪೂರ್ಣ ವಿವರ ದಾಖಲಿಸಬೇಕು. ಈಗಾಗಲೇ ಇಂಡಿಯಾ ಪೋಸ್ಟ್ ಅಂತರ್ಜಾಲ ಪುಟದಲ್ಲಿ ರಾಖಿ ಪೋಸ್ಟ್ ಆನ್ ಲೈನ್ ಸೇವೆ ಶುರವಾಗಿದ್ದು, ಜುಲೈ 31 ರವರೆಗೆ ಈ ಸೇವೆ ಲಭ್ಯವಿದೆ. ಇಂಟರ್ನೆಟ್ ಬ್ಯಾಂಕಿಂಗ್, ಗೂಗಲ್ ಪೇ ಸೇರಿದಂತೆ ಆನ್ ಲೈನ್ APPಗಳ ಮೂಲಕ ಪಾವತಿಸಬಹದು.