ಕಳೆದ ಮೂರು ತಿಂಗಳಿಂದ ವಾಕಿಂಗ್, ಜಾಗಿಂಗ್ ಮಾಡದೆ ಮನೆಯಲ್ಲಿಯೇ ಕುಳಿತು ಬೇಸರವಾಗಿದ್ದ ಜನತೆಗೆ ರಾಜ್ಯ ಸರ್ಕಾರ ಖುಷಿ ಸಮಾಚಾರ ನೀಡಿದೆ. ಇನ್ನೂ ಮುಂದೆ ನೀವು ನಿಶ್ಚಿಂತೆಯಿಂದಾಗಿ ವಾಕಿಂಗ್ ಮಾಡಬಹುದು. ವಿಶ್ರಾಂತಿ ಪಡೆಯಬಹುದು.
ಲಾಕ್ಡೌನ್ ನಿರ್ಬಂಧವನ್ನು ಮತ್ತಷ್ಟು ಸಡಿಲಿಸಿರುವ ರಾಜ್ಯ ಸರ್ಕಾರ ರಾಜ್ಯಾದ್ಯಂತ ಕೆಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದೆಡೆಗಳಲ್ಲಿ ಎಲ್ಲಾ ಉದ್ಯಾನವನಗಳನ್ನು ಬೆಳಗ್ಗೆ 5 ರಿಂದ ರಾತ್ರಿ 9 ಗಂಟೆಯವರೆಗೆ ತೆರೆಯಲು ಸ್ಥಳೀಯ ಮಹಾನಗರಪಾಲಿಕೆ, ಪಾಲಿಕೆಗಳು ನಿರ್ಧರಿಸಬಹುದು ಎಂದು ಆದೇಶ ಹೊರಡಿಸಿದೆ.
ಇದಕ್ಕಿಂತ ಮುಂಚೆ ಕೊರೋನಾ ಲಾಕ್‌ಡೌನ್‌ನಿಂದಾಗಿ ಮುಚ್ಚಲ್ಪಟ್ಟಿದ್ದ ಪಾರ್ಕುಗಳನ್ನು ಮೇ 30 ರಂದು ಸಾರ್ವಜನಿಕರಿಗೆ ತೆರಯುವಂತೆ ಆದೇಶಿಲಾಗಿತ್ತು. ಆದೇಶದಂತೆ ಬೆಳಗ್ಗೆ 07 ರಿಂದ 09 ರವರೆಗೆ ಹಾಗೂ ಸಾಯಂಕಾಲ 04 ರಿಂದ 07 ರವರೆಗೆ ತೆರೆಯಲಾಗುತ್ತಿತ್ತು.
ಜೂನ್ 20 ರಂದು ಹೊಸ ಆದೇಶ ಹೊರಡಿಸಿದ ಕರ್ನಾಟಕ ಸಚಿವಾಲಯ ಪಾರ್ಕ್ ತೆರೆಯುವಿಕೆಯ ಅವಧಿಯನ್ನು ವಿಸ್ತರಣೆಗೊಳಿಸಿದೆ. ಆದರೆ ಈಗ ಸಮಯ ಬದಲಾಯಿಸಲು ಆಯಾ ಸ್ಥಳೀಯ ಸಂಸ್ಥೆಗಳು ತೀರ್ಮಾನಿಸಬಹುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಈ ಮಾರ್ಗಸೂಚಿಗಳು ಜೂನ್ 30ರವರೆಗೆ ಜಾರಿಯಲ್ಲಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೊರೋನಾ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ ಸಂಬಂಧ ಹೊರಡಿಸಿದ ಕೇಂದ್ರದ ನಿರ್ದೇಶನಗಳನ್ನು ಮತ್ತು ರಾಜ್ಯ ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.