News

ಮಹಿಳಾ ಉದ್ಯೋಗಿಗಳಿಗೆ ಬಂಪರ್..ಹೊರಗುತ್ತಿಗೆ ನೇಮಕಾತಿಗಳಲ್ಲಿ ಶೇ.33 ರಷ್ಟು ಮೀಸಲಾತಿ ಘೋಷಣೆ

21 May, 2022 11:10 AM IST By: Maltesh
ಸಾಂದರ್ಭಿಕ ಚಿತ್ರ

ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ಹೊರಗುತ್ತಿಗೆ (Out Source)ಮಹಿಳಾ ಉದ್ಯೋಗಿಗಳಿಗೆ ಶೇ 33ರಷ್ಟು ಮೀಸಲಾತಿ ನೀಡಿ ಅಧಿಸೂಚನೆ ಹೊರಡಿಸಿದೆ. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಶುಕ್ರವಾರ ಸುತ್ತೋಲೆ ಹೊರಡಿಸಿದ್ದಾರೆ.

ಹೌದು ಪ್ರಸ್ತುತ ರಾಜ್ಯದಲ್ಲಿ 7.2 ಲಕ್ಷ ಮಂಜೂರಾದ ಹೊರ ಗುತ್ತಿಗೆ ಹುದ್ದೆಗಳಿವೆ. ಇದರಲ್ಲೊ 4.6 ಲಕ್ಷ ಉದ್ಯೋಗಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಇದರಲ್ಲಿ 1.5 ಲಕ್ಷ ಹೊರಗುತ್ತಿಗೆ ಸಿಬ್ಬಂದಿಗಳಿದ್ದಾರೆ.  ಈ ನಡುವೆ ಇದೀಗ ಈ ಹುದ್ದೆಗಳಲ್ಲಿ 50 ಸಾವಿರ ಹುದ್ದೆಗಳು ಮಹಿಳೆಯರಿಗೆ ಮೀಸಲಿಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

#Recruitment-ಕೃಷಿ ಸಚಿವಾಲಯ ನೇಮಕಾತಿ; 68,000 ಸಂಬಳ!

ಅತಿದೊಡ್ಡ ಹಾಲು ಸಹಕಾರಿ ಸಂಸ್ಥೆ ಅಮೂಲ್‌ನಲ್ಲಿ ಭಾರೀ ನೇಮಕಾತಿ..ಪದವಿ ಹೊಂದಿದವರಿಗೆ ಭರ್ಜರಿ ಅವಕಾಶ

ರಾಜ್ಯ ಸರ್ಕಾರವು 1996ರಲ್ಲಿಯೇ ರಾಜ್ಯ ಸಿವಿಲ್ ಸೇವೆಗಳಲ್ಲಿ ಶೇ.30ರಷ್ಟು ನೇರ ನೇಮಕಾತಿ ಹುದ್ದೆಗಳನ್ನು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾಗಿರಿಸಿದೆ ಎಂದು ತಿಳಿಸಿದ್ದಾರೆ.  ಮಹಿಳೆಯರ ಸಬಲೀಕರಣ ಮತ್ತು ಸಾಮಾಜಿಕ ನ್ಯಾಯ ಮತ್ತು ಸಮಾನ ಉದ್ಯೋಗಗಳನ್ನು ಸರ್ಕಾರದಿಂದ ಒದಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಹಾಗೂ ಹೊರಗುತ್ತಿಗೆ ಮುಖಾಂತರ ಪಡೆಯಲಾಗುವ ಸೇವೆಗಳನ್ನು ಮಹಿಳೆಯರು ಕೂಡ ಸಮರ್ಥರಾಗಿ ನಿರ್ವಹಿಸಬಲ್ಲವರಾಗಿರುತ್ತಾರೆ.

ಇವೆಲ್ಲ ಕಾರಣ, ರಾಜ್ಯ ಸರ್ಕಾರದ ಕಚೇರಿಗಳಲ್ಲಿ ಹೊರಗುತ್ತಿಗೆ ಮುಖಾಂತರ ಪಡೆಯಲಾಗುವ ಸೇವೆಗಳಲ್ಲಿ ಹಾಗೂ ಹುದ್ದೆಗಳಲ್ಲಿ ಶೇ.33ರಷ್ಟು ಹುದ್ದೆಗಳನ್ನು ಮಹಿಳಾ ಅಭ್ಯರ್ಥಿಗಳಿಂದ ಭರ್ತಿ ಮಾಡಿಕೊಳ್ಳುವಂತೆ ಸರ್ಕಾರದ ಎಲ್ಲಾ ಇಲಾಖೆಗಳಿಗೆ ಸೂಚಿಸಿದ್ದಾರೆ.

ವ್ಯಾಪಾರಿಗಳಿಗೆ ಗುಡ್‌ನ್ಯೂಸ್‌: Paytm ನೀಡ್ತಿದೆ 5 ಲಕ್ಷ ರೂ ಸಾಲ..! ಅರ್ಜಿ ಸಲ್ಲಿಕೆ ಹೇಗೆ

SBI ಅಲರ್ಟ್‌:  ಈ ಸಂಖ್ಯೆಗಳಿಂದ ಕರೆ ಬಂದರೆ, ಯಾವುದೇ ಕಾರಣಕ್ಕೆ ಪ್ರತಿಕ್ರಿಯಿಸ ಬೇಡಿ ಎಂದ SBI

ಈ ಮೇಲಿನ ಸೂಚನೆಗಳನ್ನು ವಿಶ್ವವಿದ್ಯಾಲಯಗಳು,  ಸ್ವಾಯ ತ್ತ ಸಂಸ್ಥೆಗಳು,ಸ್ಥಳೀಯ ಸಂಸ್ಥೆಗಳು ಹಾಗೂ ಇನ್ನಿತರೆ ಸರ್ಕಾರಿ ಆಡಳಿತದ ಅಂಗ ಸಂಸ್ಥೆಗಳು ಕೂಡ ಪಾಲಿಸತಕ್ಕದ್ದು, ಈ ಸಂಬಂಧ ಸರ್ಕಾರದ ಎಲ್ಲಾ ಆಡಳಿತ ಇಲಾಖೆಗಳ ಕಾರ್ಯದರ್ಶಿಗಳು ತಮ್ಮ ವ್ಯಾಪ್ತಿಗೆ ಒಳಪಡುವ ಕ್ಷೇತ್ರ ಇಲಾಖೆಗಳು, ಸರ್ಕಾರದ ಅಂಗಸಂಸ್ಥೆಗಳಿಗೆ ಸೂಚನೆಗಳನ್ನು ನೀಡುವಂತೆ ಸೂಚಿಸಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಹೊರಗುತ್ತಿಗೆ ನೌಕರರನ್ನು ಕೋರುವ ಟೆಂಡರ್ ನಲ್ಲಿ ಇದನ್ನು ನಮೂದಿಸಬೇಕು. ಹೊರಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಳ್ಳುವಾಗ ಖಾಸಗಿ ಏಜೆನ್ಸಿಗಳೊಂದಿಗಿನ ತಿಳುವಳಿಕಾ ಒಡಂಬಡಿಕೆಯಲ್ಲಿಯೂ ಇದನ್ನು ಸೇರಿಸಬೇಕು.

ಈ ಸೂಚನೆಗಳನ್ನು ಕಾರ್ಯಗತಗೊಳಿಸುವಲ್ಲಿ ಯಾವುದೇ ತೊಂದರೆಗಳು ಉದ್ಭವಿಸಿದರೆ ಸಂಬಂಧಪಟ್ಟ ಇಲಾಖೆ ಕಾರ್ಯದರ್ಶಿಗಳು ಅವುಗಳನ್ನು ಪರಿಹರಿಸತಕ್ಕದ್ದು ಎಂದು ಸೂಚಿಸಿದೆ.

ಮಹತ್ವದ ನ್ಯೂಸ್‌: ಕ್ರೆಡಿಟ್‌ ಕಾರ್ಡ್‌ಗಳಿಗೆ ಹೊಸ ನಿಯಮ ತಂದ RBI..ಭಾರೀ ಬದಲಾವಣೆ

ನೌಕರರಿಗೆ Good News! EPFO ಉದ್ಯೋಗಿಗಳ ಖಾತೆಗೆ ಶೀಘ್ರದಲ್ಲೆ ಬರಲಿದೆ ಬಡ್ಡಿ ಹಣ! ಈಗಲೇ ಚೆಕ್‌ ಮಾಡಿ