News

ಲಾಕ್ಡೌನ್ ನ 2ನೇ ಹಂತದಲ್ಲಿ ಮತ್ತೆ ವಿವಿಧ ವಲಯಗಳಿಗೆ 500 ಕೋಟಿ ಪ್ಯಾಕೇಜ್ ಘೋಷಣೆ

03 June, 2021 8:30 PM IST By:
C. M B.S Yadiyurappa

ರಾಜ್ಯದಲ್ಲಿ ಕೊರೋನಾ ಸೋಂಕು ಇನ್ನೂ ಕಡಿಮೆಯಾಗದೇ ಹಿನ್ನೆಲೆಯಲ್ಲಿ ಮೊದಲ ಬಾರಿಗೆ 1000 ಕೋಟಿ ರೂಪಾಯಿಗೂ ಅಧಿಕ ಪ್ಯಾಕೇಜ್ ಘೋಷಿಸಿದ್ದ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಈಗ ಮತ್ತೆ 500 ಕೋಟಿ ರೂಪಾಯಿಗಳ ಮತ್ತೊಂದು ಪ್ಯಾಕೇಜ್ ಘೋಷಿಸಿದ್ದಾರೆ.

ರಾಜ್ಯದಲ್ಲಿ ಜೂನ್ 14 ರವರೆಗೆ ಲಾಕ್ಡೌನ್ ವಿಸ್ತರಣೆ  ಮಾಡಿರುವ ಜೊತೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮತ್ತೇ 500 ಕೋಟಿ ರೂಪಾಯಿಯ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ -19 ಸೋಂಕು ನಿಯಂತ್ರಿಸುವ ಕಾರಣದಿಂದ ಈ ಹಿಂದೆ ಜಾರಿಮಾಡಿದ್ದ ಲಾಕ್ಡೌನ್ ನ್ನು ಜೂನ್ 14ರವರೆಗೆ ಮುಂದುವರೆಸಲು ತೀರ್ಮಾನಿಸಲಾಗಿದೆ. ನೇಕಾರರು, ಚಲನಚಿತ್ರ, ಮೀನುಗಾರರು, ದೂರದರ್ಶನ ನೋಂದಾಯಿತ ಕಾರ್ಮಿಕರಿಗೆ, ಮುಜರಾಯಿ ಇಲಾಖೆಯ ಅರ್ಚಕರು ಮತ್ತು ಅಡುಗೆ ಸಿಬ್ಬಂದಿ, ಮಸೀದಿ ಬೇಸಿಮಾ ಮೌಜಿನ್ ಗಳಿಗೆ, ಆಶಾ ಕಾರ್ಯಕರ್ತೆಯರಿಗೆ ಮೂರು ಸಾವಿರ ರೂಪಾಯಿ, ಅಂಗನವಾಡಿ ಕಾರ್ಯಕರ್ತೆಯರಿಗೆ ತಲಾ 2 ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ.

ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ ತಲಾ ಐದು ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ. ಶಾಲಾ ಮಕ್ಕಳಿಗೆ ಹೆಚ್ಚುವರಿಯಾಗಿ ಜೂನ್ ಮತ್ತು ಜುಲೈನಲ್ಲಿ ಹಾಲಿನ ಪುಡಿ ವಿತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಸದ್ಯ ಜಾರಿಯಲ್ಲಿರುವ ಬಿಗಿ ಕ್ರಮಗಳ ಮುಂದುವರೆಯಲಿದೆ ರಾಜ್ಯದಲ್ಲಿ ಶೇಕಡಾ ಐದಕ್ಕಿಂತ ಕಡಿಮೆ ಮಾಡುವ ಪ್ರಕರಣಗಳು ಬರುವತನಕ ಮಾಡುವ ಬಗ್ಗೆ ತಜ್ಞರು ಸಲಹೆ ನೀಡಿದ್ದಾರೆ ಜೂಮ್ 14 ರ ನಂತರ ಪಾಸಿಟೀವ್ ಪ್ರಕರಣ ಕಡಿಮೆಯಾದರೆ ಲಾಕ್ಡೌನ್ ತೆರವು ಮಾಡಲಾಗುವುದು ಇಲ್ಲದಿದ್ದರೆ ಅನಿವಾರ್ಯವಾಗಿ ಮತ್ತೆ ಮುಂದುವರಿಸುವ ಪ್ರಮೇಯ ಬರಬಹುದು ಎಂದು ತಿಳಿಸಿದ್ದಾರೆ.

ಜನರ ಸಹಕಾರ ಅಗತ್ಯ

ರಾಜ್ಯದಲ್ಲಿ ಕೊರೊನಾ ಸೋಂಕು ಇನ್ನೂ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಜೂನ್ 14ರ ತನಕ ವಿಸ್ತರಣೆ ಮಾಡಲಾಗಿದೆ ಎಂದು ಪ್ರಕಟಿಸಿದ ಅವರು ಜನರ ಸಹಕಾರ ಅಗತ್ಯ ಎಂದು ಯಡಿಯೂರಪ್ಪ ಹೇಳಿದರು.