ರಾಜ್ಯದ ಎಲೆಕ್ಷನ್ ಕದನದಲ್ಲಿ ಕೈ ಕಲಿಗಳು ಬಹುತೇಕ ಜಯವನ್ನ ಗಳಿಸುವ ಸಾಧ್ಯತೆಗಳಿಗೆ. ಹೌದು ಬರೋಬ್ಬರಿ 125 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಮುನ್ನಡೆಯನ್ನು ಸಾಧಿಸಿಕೊಂಡಿದೆ. ಸದ್ಯದ ಮಾಹಿತಿಯ ಪ್ರಕಾರ ಭಾರತೀಯ ಜನತಾ ಪಾರ್ಟಿ 69 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, ಇತ್ತ ಕಾಂಗ್ರೆಸ್ 127 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ.
ಈ ಕ್ಷಣದ ಅಪ್‌ಡೇಟ್
ಧಾರವಾಡದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದ ಹಣಾಹಣಿಯಲ್ಲಿ ವಿನಯ್ ಕುಲಕರ್ಣಿ ಜಯಭೇರಿ ಭಾರಿಸಿದ್ದಾರೆ. ಕ್ಷೇತ್ರದಿಂದ ಹೊರಗಿದ್ದೇ ಗೆದ್ದು ಬೀಗಿದ್ದಾರೆ.
ಚಾಮರಾಜ್ ಪೇಟೆಯಲ್ಲಿ ಜಮೀರ್ ಅಹ್ಮದ್ ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಸರ್ವಜ್ಞ ನಗರದಲ್ಲಿ ಕಾಂಗ್ರೆಸ್ ನ ಕೆ ಜೆ ಜಾರ್ಜ್ ಅವರು ಗೆಲುವು
ಶಿವಾಜಿನಗರದಲ್ಲಿ ರಿಜ್ವಾನ್ ಅರ್ಶದ್ ಗೆ ಗೆಲುವು
ಇನ್ನು ಆರ್ ಆರ್ ನಗರದಲ್ಲಿ ಬಿಜೆಪಿಯ ಮುನಿರತ್ನ ಅವರು ಕಾಂಗ್ರೆಸ್‌ನ ಅಭ್ಯರ್ಥಿ ಕುಸುಮಾ ಅವರ ವಿರುದ್ಧ ಭಾರೀ ಹಿನ್ನಡೆಯಲ್ಲಿದ್ದಾರೆ.
ಸೊರಬ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ 11 ಸಾವಿರ ಮತಗಳಿಂದ ಲೀಡ್ ಕಾಯ್ದುಕೊಂಡಿದ್ದಾರೆ
ಚಿಕ್ಕಮಗಳೂರಿನಲ್ಲಿ 5 ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆಯಾಘಿದ್ದು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿಗೆ ಭಾರೀ ಮುಖಭಂಗವಾಗಿದೆ
ನಂಜನಗೂಡಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ ದರ್ಶನ್ ಅವರು ಭಾರೀ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ.
ಬಿಜೆಪಿ ಅಭರ್ಥಿ ಸಿ ಟಿ ರವಿಗೆ ಹಿನ್ನಡೆ