ರಾಜ್ಯದಲ್ಲಿ ಹೊಸಬರಿಗೆ ಅವಕಾಶ ನೀಡುವ ಉದ್ದೇಶದಿಂದ ಹಾಗೂ ಪಕ್ಷವನ್ನು ಬೆಳೆಸಬೇಕು ಎಂದು ಬಿಜೆಪಿ ಹೈಕಮ್ಯಾಂಡ್ ನಿರ್ಧರಿಸಿದ್ದರಿಂದ
ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ಪಕ್ಷದಲ್ಲಿ ಹೊಸ ನಾಯಕತ್ವವವನ್ನು ಬೆಳೆಸಬೇಕು ಎನ್ನುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದರ ಭಾಗವಾಗಿ ಜಗದೀಶ ಶೆಟ್ಟರ ಅವರಿಗೆ ಟಿಕೆಟ್ ನೀಡಿಲ್ಲ ಎಂದಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಬಿಜೆಪಿ ವಿವಿಧ ರಾಜ್ಯಗಳಲ್ಲಿ ಈ ತೀರ್ಮಾನವನ್ನು ತೆಗೆದುಕೊಂಡಿದೆ.
ಅದನ್ನೇ ಕರ್ನಾಟಕದಲ್ಲಿಯೂ ಮುಂದುವರಿಸಲಾಗಿದೆ. ಇದರಲ್ಲಿ ಯಾರನ್ನೂ ಪಕ್ಷ ವೈಯಕ್ತಿಕವಾಗಿ ಗುರಿಮಾಡಿಕೊಂಡಿಲ್ಲ ಎಂದು ಹೇಳಿದ್ದಾರೆ.
ಇನ್ನು ಬಿಜೆಪಿಯಲ್ಲಿ ಲಿಂಗಾಯತರ ಸಮುದಾಯದ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಇದೆ. ಇದೇ ರೀತಿ ಮುಂದಿನ ದಿನಗಳಲ್ಲಿ ಹಲವರಿಗೆ ಅವಕಶಾವೂ ಇದೆ.
ಶೆಟ್ಟರ ಅವರ ನೇತೃತ್ವದಲ್ಲಿ ಮುಂದುವರಿಸಿಕೊಂಡು ಹೋಗಿದ್ದರೆ ಉತ್ತಮವಾಗಿತ್ತು.
ಆದರೆ, ಬೇರೆ ತೀರ್ಮಾನ ಮಾಡಿದ್ದಾರೆ. ಪಕ್ಷ ಸಂಘಟನೆ, ಚುನಾವಣಾ ರಣನೀತಿಯನ್ನು ನಾವು ಮುಂದುವರಿಸಿಕೊಂಡು ಹೋಗುತ್ತೇವೆ.
ಪಕ್ಷವನ್ನು ಚುನಾವಣೆಯಲ್ಲಿ ಗೆಲ್ಲಿಸುವುದು ನಮ್ಮ ಗುರಿ ಎಂದು ಹೇಳಿದರು.
ಬಿಜೆಪಿ ಈಗಾಗಲೇ ಲಿಂಗಾಯತ ಸಮುದಾಯಕ್ಕೆ ಅತಿ ಹೆಚ್ಚು ಸೀಟು ನೀಡಿದೆ. ಸಮುದಾಯದವರಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸಚಿವ ಸ್ಥಾನ ಸಿಗಲಿದೆ.
ಯಡಿಯೂರಪ್ಪ ನೇತೃತ್ವದಲ್ಲಿ ಮೊದಲ ಹಂತದ ನಾಯಕತ್ವ, ಎರಡನೇ ಹಂತದಲ್ಲಿ ಸಿ.ಸಿ.ಪಾಟೀಲ,
ಮುರುಗೇಶ ನಿರಾಣಿ, ಬಸನಗೌಡ ಪಾಟೀಲ ಯತ್ನಾಳ, ಶಶಿಕಲಾಜೊಲ್ಲೆ, ದತ್ತಾತ್ರೇಯ ಪಾಟೀಲ ರೇವೂರ ಅವರ ಹಂತದಲ್ಲಿ ನಾಯಕತ್ವ ಮುಂದುವರಿದಿದೆ ಎಂದಿದ್ದಾರೆ.
ಬಿಜೆಪಿ ಪಕ್ಷ ಮತ್ತೆ ಪುಟಿದೇಳಲಿದ್ದು, ಎಲ್ಲ ಕಡೆ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇವೆ. ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ ಎಂದರು.
ಡ್ಯಾಮೇಜ್ ಕಂಟ್ರೋಲ್ ಮಾಡ್ತೀವಿ
ಪಕ್ಷದ ಡ್ಯಾಮೇಜ್ ಕಂಟ್ರೋಲ್ ಮಾಡ್ತೀವಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಪಕ್ಷದ ನಿರ್ಧಾರದಲ್ಲಿ ಯಾರ ಪಾತ್ರವೂ ಇಲ್ಲ. ಬಿಜೆಪಿಯಲ್ಲಿ ಹಲವು ಮುಖ್ಯಮಂತ್ರಿ ಆಕಾಂಕ್ಷಿಗಳು ಇದ್ದಾರೆ.
ಜಗದೀಶ ಶೆಟ್ಟರ ಅವರ ಪ್ರಭಾವವನ್ನು ನಾವು ಪ್ರಶ್ನಿಸುವುದಿಲ್ಲ. ಆದರೆ, ಬಿಜೆಪಿ ಶಕ್ತವಾಗಿದೆ.
ಇಂತಹ ಹಲವು ಸವಾಲುಗಳನ್ನು ನಾವು ಈಗಾಗಲೇ ಎದುರಿಸಿದ್ದು, ಡ್ಯಾಮೇಜ್ ಕಂಟ್ರೋಲ್ ಮಾಡುತ್ತೇವೆ ಎಂದರು.
ಇನ್ನು ಪಕ್ಷದ ಆದರ್ಶ ಹೇಳಿಕೊಟ್ಟಿದ್ದು, ಜಗದೀಶ ಶೆಟ್ಟರ ಅವರು ಆದರೆ,
ಅವರು ರಾಜೀನಾಮೆ ನೀಡಿರುವುದು ನನಗೆ ವೈಯಕ್ತಿಕವಾಗಿ ನೋವುಂಟು ಮಾಡಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಚಿಂತನೆ ಹಾಗೂ ಯಡಿಯೂರಪ್ಪ ಅವರ ನಡೆ ನಮಗೆ ಆದರ್ಶವಾಗಿದೆ.
ಜಗದೀಶ ಶೆಟ್ಟರ ಅವರ ಅನುಭವ ಆಧರಿಸಿ ಇದಕ್ಕಿಂತ ದೊಡ್ಡ ಹುದ್ದೆ ನೀಡುತ್ತೇವೆ
ಎಂದು ಅಮಿತ್ ಶಾ, ನಡ್ಡಾ ಅವರು ಹೇಳಿದ್ದರು. ಅಲ್ಲದೇ ಅವರು ಯಾರಿಗೆ ಹೇಳುತ್ತಾರೆ
ಅವರಿಗೆ ಟಿಕೆಟ್ ನೀಡುತ್ತೇವೆ ಎಂದು ಸಹ ಹೇಳಲಾಗಿತ್ತು ಎಂದಿದ್ದಾರೆ.
ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕದ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯವಾಗುತ್ತದೆ.
ನಾವು ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದರು.