News

Beer | Karnataka Budget 2023 | ಕರ್ನಾಟಕ ಬಜೆಟ್‌ನಲ್ಲಿ ಮದ್ಯ ಪ್ರಿಯರಿಗೆ ಶಾಕ್‌!

07 July, 2023 2:12 PM IST By: Hitesh
Karnataka Budget 2023: Shock for Liquor Lovers in Karnataka Budget!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ 2023-24ನೇ ಸಾಲಿನ ಪೂರಕ ಬಜೆಟ್‌ ಮಂಡನೆ ಮಾಡಿದ್ದು ಮದ್ಯ ಪ್ರಿಯರಿಗೆ ಶಾಕ್‌ ನೀಡಿದ್ದಾರೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ದಾಖಲೆಯ ಹಾಗೂ ಐತಿಹಾಸಿಕ 14ನೇ ಬಜೆಟ್‌ ಮಂಡನೆ ಮಾಡಿದ್ದಾರೆ.

ಈ ಬಾರಿಯ ಬಜೆಟ್‌ ಗಾತ್ರವು ಬರೋಬ್ಬರಿ 3.27 ಲಕ್ಷ ಕೋಟಿ ರೂಪಾಯಿ ಇದೆ.   

ಗ್ಯಾರಂಟಿ ಯೋಜನೆ ಹಾಗೂ ಸಂಪನ್ಮೂಲವನ್ನು ಸರಿದೂಗಿಸಲು ಈ ಬಾರಿಯೂ ಮದ್ಯದ ಮೇಲೆ ಸುಂಕವನ್ನು ಹೆಚ್ಚಳ ಮಾಡಲಾಗಿದೆ.

ಈ ಬಾರಿ ಅಬಕಾರಿ ಸುಂಕದ ಮೊತ್ತದಲ್ಲಿ 20ರಷ್ಟು ಹೆಚ್ಚಳ ಮಾಡುವ ಮೂಲಕ ಮದ್ಯ ಪ್ರಿಯರಿಗೆ ಶಾಕ್‌ ನೀಡಲಾಗಿದೆ.  

ಅಲ್ಲದೇ ಭಾರತೀಯ ನಿರ್ಮಿತ ವಿದೇಶಿ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಬಜೆಟ್‌ನಲ್ಲಿ ಬರೋಬ್ಬರಿ ಶೇ 20ರಷ್ಟು ಹೆಚ್ಚಳ ಮಾಡಲಾಗಿದೆ. 

ಇನ್ನು ಬಿಯರ್‌ಗೆ, ಅಬಕಾರಿ ಸುಂಕವನ್ನು ಶೇಕಡಾ 10 ರಷ್ಟು ಹೆಚ್ಚಿಸಲಾಗಿದ್ದು,   ಅದನ್ನು ಶೇಕಡಾ 175 ರಿಂದ ಶೇಕಡಾ 185ಕ್ಕೆ ಹೆಚ್ಚಳ ಮಾಡಲಾಗಿದೆ.

ಪ್ರಸಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ 2023-24ನೇ ಸಾಲಿನ ಪೂರಕ ಬಜೆಟ್‌ನಲ್ಲಿ ಅಬಕಾರಿಯ ಎಲ್ಲಾ 18 ಸ್ಲ್ಯಾಬ್‌ಗಳಲ್ಲಿ ಶೇ.20 ರಷ್ಟು ತೆರಿಗೆ ವಿಧಿಸಲಾಗಿದೆ.  

ಬಜೆಟ್‌ನಲ್ಲಿ ರಾಜ್ಯ ಸರ್ಕಾರವು ಬಿಯರ್ ದರ ಹೆಚ್ಚಳ ಮಾಡಿರುವುದರಿಂದ ಮದ್ಯದ ದರವೂ ದುಬಾರಿ ಆಗಲಿದೆ.

ಬಿಯರ್ ದರದಲ್ಲಿ 10 ರೂಪಾಯಿಂದ 20 ರೂಪಾಯಿವರೆಗೆ ಹೆಚ್ಚಳವಾಗುವ ಸಾಧ್ಯತೆ ಇದೆ.  

ಕಳೆದ ಬಾರಿ ಬಿಜೆಪಿ ಸರ್ಕಾರವು ಮದ್ಯ ಮಾರಾಟಗಾರರಿಂದ 35 ಸಾವಿರ ಕೋಟಿ ರೂ. ಸಂಗ್ರಹ ಮಾಡುವ ಗುರಿ ಹಾಕಿಕೊಂಡಿತ್ತಾದರೂ,

ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಸಂಗ್ರಹವಾಗಿರಲಿಲ್ಲ. ಕಳೆದ ಬಾರಿ ಅಬಕಾರಿಯಿಂದ  29 ಸಾವಿರ ಕೋಟಿ ರೂಪಾಯಿ ಸಂಗ್ರಹವಾಗಿತ್ತು.

ಅಬಕಾರಿ ಸುಂಕದ ದರಗಳವನ್ನು ಹೆಚ್ಚಿಸಿದ್ದರೂ, ನಮ್ಮ ರಾಜ್ಯದಲ್ಲಿ ಮದ್ಯದ ದರವು ನೆರೆ ರಾಜ್ಯಗಳಿಗಿಂತ ಕಡಿಮೆ ಇರಲಿದೆ.

2023-24ನೇ ಸಾಲಿನಲ್ಲಿ ಅಬಕಾರಿ ಇಲಾಖೆಗೆ 36,000 ಕೋಟಿ ರೂಪಾಯಿ ಮೊತ್ತದ  ರಾಜಸ್ವ ಸಂಗ್ರಹಣೆ ಗುರಿ ಹಾಕಿಕೊಳ್ಳಲಾಗಿದೆ

ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 3,27,747 ಕೋಟಿ ರೂಪಾಯಿ ಮೊತ್ತದ ರಾಜ್ಯ ಬಜೆಟ್ ಘೋಷಿಸಿದ್ದಾರೆ. ಇದರಲ್ಲಿ 2,50,933 ಕೋಟಿ ರೂಪಾಯಿ ರಾಜಸ್ವ ವೆಚ್ಚ,

54,374 ಕೋಟಿ ಬಂಡವಾಳ ವೆಚ್ಚ ಹಾಗೂ 22,441 ಕೋಟಿ ಸಾಲ ಮರುಪಾವತಿಗೆ ಮೀಸಲಿರಿಸಲಾಗಿದೆ.

ಉಳಿದಂತೆ ಶಿಕ್ಷಣ ಕ್ಷೇತ್ರಕ್ಕಾಗಿ ರೂ 37,587 ಕೋಟಿ ರೂಪಾಯಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ

24,166 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ ಎಂದು ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ.