News

ರಾಜ್ಯದಲ್ಲಿ ಮತ್ತೆ ಸುಮಾರು 47 ಸಾವಿರ ಹೊಸ ಕೊರೊನಾ ಕೇಸ್: ಒಂದೇ ದಿನ 31 ಸಾವಿರ ಮಂದಿ ಗುಣಮುಖ

09 May, 2021 9:24 PM IST By:

ರಾಜ್ಯದಲ್ಲಿ ಭಾನುವಾರವೂ ಕೊರೊನಾರ್ಭಟ ಮುಂದುವರೆದಿದೆ. ರಾಜ್ಯದಲ್ಲಿ ಒಂದೇ ದಿನ ಮತ್ತೆ 47,930 ಹೊಸ ಪ್ರಕರಣಗಳು ವರದಿಯಾಗಿವೆ. ಒಂದೇ ದಿನ 490 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇದರೊಂದಿಗೆ‌ ರಾಜ್ಯದಲ್ಲಿ ಸಾವಿನ ಸಂಖ್ಯೆ 18776 ಏರಿಕೆಯಾಗಿದೆ.

ಇಂದು ಒಂದೇ ದಿನ 31796 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಒಟ್ಟು ಬಿಡುಗಡೆ ಹೊಂದಿದವರ ಸಂಖ್ಯೆ 1351097 ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
564485 ಸಕ್ರಿಯ ಪ್ರಕರಣಗಳಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 1934378 ಕ್ಕೆ ಏರಿಕೆಯಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಇಂದು 281 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ನಗರದಲ್ಲಿ ಮೃತರ ಸಂಖ್ಯೆ 8057ಕ್ಕೆ ಏರಿಕೆಯಾಗಿದೆ.ಒಂದೇ ದಿನ 20897 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 950893ಕ್ಕೆ ಹೆಚ್ಚಳವಾಗಿದೆ‌ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಬಾಗಲಕೋಟೆ 1135, ಬಳ್ಳಾರಿ 2141, ಬೆಳಗಾವಿ 613, ಬೆಂಗಳೂರು ಗ್ರಾಮಾಂತರ 1066, ಬೆಂಗಳೂರು ನಗರ 20987, ಬೀದರ್ 313, ಚಾಮರಾಜನಗರ 930, ಚಿಕ್ಕಬಳ್ಳಾಪುರ 657, ಚಿಕ್ಕಮಗಳೂರು 582, ಚಿತ್ರದುರ್ಗ 111, ದಕ್ಷಿಣ ಕನ್ನಡ 1694, ದಾವಣಗೆರೆ 453, ಧಾರವಾಡ 777, ಗದಗ 368, ಹಾಸನ 2,349, ಹಾವೇರಿ 370, ಕಲಬುರಗಿ 1,062, ಕೊಡಗು 576, ಕೋಲಾರ 424, ಕೊಪ್ಪಳ 291, ಮಂಡ್ಯ 1959, ಮೈಸೂರು 1854, ರಾಯಚೂರು 702, ರಾಮನಗರ 604, ಶಿವಮೊಗ್ಗ 650, ತುಮಕೂರು 2001, ಉಡುಪಿ 962, ಉತ್ತರ ಕನ್ನಡ 917, ವಿಜಯಪುರ 597 ಮತ್ತು ಯಾದಗಿರಿಯಲ್ಲಿ 695 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

ಜಿಲ್ಲೆಗಳ ವಿಚಾರಕ್ಕೆ ಬಂದರೆ ಎಂದಿನಂತೆ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದ್ದು, ಭಾನುವಾರ ಒಂದೇ ದಿನ 20,897 ಹೊಸ ಪ್ರಕರಣಗಳು ವರದಿಯಾಗಿವೆ. ತುಮಕೂರು, ಹಾಸನ ಹಾಗೂ ಬಳ್ಳಾರಿ ಜಿಲ್ಲೆಗಳು 2 ಸಾವಿರದ ಗಡಿ ದಾಟಿವೆ. ಇನ್ನು ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ, ದಕ್ಷಿಣ ಕನ್ನಡ, ಕಲಬುರಗಿ, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳು 1 ಸಾವಿರದ ಗಡಿ ದಾಟಿವೆ. ಉತ್ತರ ಕನ್ನಡ, ಚಾಮರಾಜನಗರ ಜಿಲ್ಲೆಗಳು 1 ಸಾವಿರದ ಸನಿಹದಲ್ಲಿವೆ.