News

ವಿದೇಶದಲ್ಲೂ ಸದ್ದು ಮಾಡ್ತಿದೆ ಕನ್ನಡಿಗನ “ವೀಳ್ಯದೆಲೆ ಟೀ”!

04 April, 2023 2:14 PM IST By: Hitesh

ವೀಳ್ಯದೆಲೆ‌ಯನ್ನು ಪೂಜೆ, ಮದುವೆಯಂತ ಶುಭ ಸಮಾರಂಭಗಳಲ್ಲಿ ಬಳಸುವುದು ಹಾಗೂ ಸಣ್ಣ ಸಣ್ಣ ಅಂಗಡಿಗಳಲ್ಲಿ ವೀಳ್ಯದೆಲೆಯ ಮೂಲಕ ಪಾನ್ ಬೀಡಾ ತಯಾರಿಸುವುದನ್ನು ನೀವು ನೋಡೇ ಇರ್ತೀರಾ... ಆದರೆ, ಈ ಎಲ್ಲದರ ನಡುವೆ  ವೀಳ್ಯದೆಲೆಯ ಗ್ರೀನ್ ಟೀ ಬಗ್ಗೆ ಕೇಳಿದೀರಾ?

ಹೌದು ಮೈಸೂರು ಮೂಲದ ಯುವಕ ಇದೀಗ ವೀಳ್ಯದೆಲೆಗೆ ಗ್ರೀನ್ ಟೀ ರೂಪ ನೀಡಿದ್ದಾರೆ.

ಆ ಮೂಲಕ ಮೈಸೂರಿನ ವೀಳ್ಯದೆಲೆ ರುಚಿಯನ್ನು ಸಹಜವಾಗಿ ಎಲ್ಲರಿಗೂ ದೊರೆಯುವಂತೆ ಮಾಡುವ ಮೂಲಕ ಭಾರತ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವೀಳ್ಯದೆಲೆಗೆ ಪರ್ಯಾಯ ಮಾರುಕಟ್ಟೆ ಸೃಷ್ಠಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.

ಅವರ ಸ್ಟಾರ್ಟ್ ಅಪ್‌ ಯಶಸ್ಸಿನ ಕಥೆ ಇಲ್ಲಿದೆ.

ಕರ್ನಾಟಕದ, ಮೈಸೂರಿನ ಸಂದೀಪ್‌ ಈಶಾನ್ಯ ವೀಳ್ಯದೆಲೆ ಟೀ ಸ್ಟಾರ್ಟ್‌ಅಪ್‌ ರೂವಾರಿ‌.

ಸಾವಿರಾರು ವರ್ಷಗಳಿಂದಲೂ ವೀಳ್ಯದೆಲೆ ಎನ್ನುವುದು ಭಾರತೀಯರ ಜೀವನದಲ್ಲಿ ಹಾಸುಹೊಕ್ಕಾಗಿದ್ದರೂ, ಅದರ ಪ್ರಯೋಜನವನ್ನು ಪಡೆದುಕೊಂಡಿದ್ದು ಅಷ್ಟಕ್ಕಷ್ಟೇ‌ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳಬೇಕು.

ಸಾಮಾನ್ಯವಾಗಿ ವೀಳ್ಯದೆಲೆಯನ್ನು ಮದುವೆ, ಸಮಾರಂಭ ಇಲ್ಲವೇ ತಂಬಾಕಿನೊಂದಿಗಷ್ಟೇ ಸೇವಿಸುವುದು ವಾಡಿಕೆ.

ಆದರೆ,ವೀಳ್ಯೆದೆಲೆಯಲ್ಲಿ ಹಲವು ಆರೋಗ್ಯ ಪೂರಕ ಅಂಶಗಳಿವೆ.

ಇಂತಹ ಆರೋಗ್ಯಕರ ಅಂಶಗಳಿರುವ ವೀಳ್ಯದೆಲೆಯನ್ನು ಭಾರತದಲ್ಲಿ ಹೆಚ್ಚು ಯೋಗ್ಯ ರೀತಿಯಲ್ಲಿ ಬಳಸುತ್ತಿಲ್ಲ. 

ಇದೇ ಪರಿಸ್ಥಿತಿ ಮುಂದುವರಿದರೆ, ಮುಂದೊಂದು ದಿನ ವೀಳ್ಯದೆಲೆ ಎನ್ನುವುದು ಸಂಪೂರ್ಣವಾಗಿ ಕೊನೆಯಾಗಬಹುದು ಎನ್ನುವ ಅಂಶವನ್ನು ಒಳಗೊಂಡಿದ್ದ

ವಿಜ್ಞಾನ ಸಂಬಂಧಿ ಲೇಖನವನ್ನು ಅಂತರ್ಜಾಲದಲ್ಲಿ ಓದಿದ್ದೇ ಸಂದೀಪ್ ಈಶಾನ್ಯ ಅವರಿಗೆ ಈ ಸ್ಟಾರ್ಟ್ಅಪ್ ಆರಂಭಿಸಲು ಪ್ರೇರಣೆಯಾಗಿದೆಯಂತೆ.

ಇದೊಂದು ಆಲೋಚನೆ ಸಂದೀಪ್ ಈಶಾನ್ಯ ಅವರನ್ನು ತೀವ್ರವಾಗಿ ಕಾಡಿದ ನಂತರ ಬೆಂಗಳೂರಿನಲ್ಲಿ ತಮ್ಮ‌ ಉದ್ಯೋಗವನ್ನು ತೊರೆದು ಹುಟ್ಟೂರು ಮೈಸೂರಿಗೆ ಪ್ರಯಾಣ ಬೆಳೆಸಿದ

ಅವರು ಮುಂದಿನ ಎರಡು ವರ್ಷಗಳು ಸತತವಾಗಿ ಇದರ ಸಂಶೋಧನೆ ಹಾಗೂ ಗ್ರೀನ್ ಟೀ ಮಾರುಕಟ್ಟೆಗೆ ಸಂಬಂಧಿಸಿದ ಪೂರಕ ಮಾಹಿತಿಗಳನ್ನು ಕಲೆ ಹಾಕುವುದರಲ್ಲೇ ಕಳೆದಿದ್ದಾರೆ.

ಸುದೀರ್ಘ ಎರಡು ವರ್ಷಗಳ ಸ್ವಯಂ ಪ್ರೇರಿತರಾಗಿ ನಿರುದ್ಯೋಗ ಅನುಭವಿಸಿರುವ ಸಂದೀಪ್ ಈಶಾನ್ಯ ಅವರು ಎಲ್ಲರಿಗೂ ಸಹಜವಾಗಿ ವೀಳ್ಯದೆಲೆಯಲ್ಲಿ ಆರೋಗ್ಯ ಪೂರಕ ಅಂಶಗಳು ದೊರಕಬೇಕು.

ಎಲ್ಲ ವಯೋಮಾನದವರಿಗೂ ಇದರ ಅಗತ್ಯವಿದೆ ಇದೇ ಕಾರಣಕ್ಕೆ ಇದಕ್ಕೆ ಗ್ರೀನ್ ಟೀ ರೂಪ ನೀಡಿದ್ದೇನೆ ಎನ್ನುತ್ತಾರೆ ಅವರ ಮಾತಿನಲ್ಲಿ ಅವರ ಕೆಲಸದ ಬಗ್ಗೆ ತೃಪ್ತಿಯೂ ಕಾಣುತ್ತಿತ್ತು.

ನಿರಂತರ ಓದು,ಆಹಾರ ತಂತ್ರಜ್ಞರ ಒಡನಾಟ,ಲ್ಯಾಬ್‌ಗಳಲ್ಲಿ ನಡೆದ ಸತತ ಪ್ರಯೋಗಗಳು ಇದೀಗ ನಮ್ಮ ಕರ್ನಾಟಕದ ವೀಳ್ಯದೆಲೆ ಗ್ರೀನ್ ಟೀ ಆಗುವ ಮೂಲಕ ಭಾರತ ಸೇರಿದಂತೆ ಅಮೆರಿಕಾ,

ಕೆನಡಾ, ಆಸ್ಟ್ರೇಲಿಯಾ, ಇಂಗ್ಲೆಂಡ್, ಶ್ರೀಲಂಕಾ ಸೇರಿದಂತೆ ಇನ್ನೂ ಹಲವು ರಾಷ್ಟ್ರಗಳ ಮಾರುಕಟ್ಟೆ ತಲುಪಲು ಸಿದ್ಧವಾಗಿ ನಿಂತಿದೆ!   

ಭಾರತದಲ್ಲಿ ಇದೀಗ ಈ ಟೀಗೆ ಬೇಡಿಕೆಯೂ ಸೃಷ್ಠಿಯಾಗಿದೆ. ಎರಡು ವರ್ಷಗಳ ಹಿಂದೆ ಕಂಬಳಿ ಹುಳಿವಿನಂತೆ ತೆವಳುತ್ತಿದ್ದ ಸಂದೀಪ್ ಅವರ ಬೀಟಲ್ ಲೀಫ್ ಆರ್ಗ್ಯಾನಿಕ್ ಟೀ ಪರಿಕಲ್ಪನೆ ಇದೀಗ ಚಿಟ್ಟೆಯಂತೆ ಹಾರಾಡುತ್ತಿದೆ. 

ಇದರ ಸಂಶೋಧನೆಗೆ ನೆರವಾಗಿರುವ ಮಂಗಳೂರು ಮೂಲದ "ನಿಟ್ಟೆ ಯೂನಿವರ್ಸಿಟಿ ಎಜುಕೇಷನ್ ಫಾರ್ ಸೈನ್ಸ್ ಆಂಡ್ ರಿಸರ್ಚ್ ಸಂಸ್ಥೆ ಹಾಗೂ ಇವರ ಸ್ಟಾರ್ಟ್ ಅಪ್

ಕನಸನ್ನು ನನಸಾಗಿಸಲು ಆರಂಭಿಕ ಹಣ ಹೂಡಿದ ಬೆಂಗಳೂರಿನ ಎಂ.ಎಸ್ ರಾಮಯ್ಯ ಸಂಸ್ಥೆಯನ್ನು ಸಂದೀಪ್ ಕೃತಜ್ಞತೆಯಿಂದ ನೆನೆಯುತ್ತಾರೆ.

ಸುಮಾರು ಮೂನ್ನರಕ್ಕೂ ಹೆಚ್ಚು ಸ್ಟಾರ್ಟ್ ಅಪ್‌ಗಳು ದೇಶಾದ್ಯಂತ ಎಂ.ಎಸ್ ರಾಮಯ್ಯ ಸಂಸ್ಥೆಯಲ್ಲಿ ಸ್ಟಾರ್ಟ್ ಅಪ್ ಫಂಡ್‌ಗಾಗಿ ಬಂದಿದ್ದವು.

ಆದರೆ,ರಾಮಯ್ಯ ಸಂಸ್ಥೆ ಆಯ್ಕೆ ಮಾಡಿದ ಕೇವಲ ಎಂಟು ಸ್ಟಾರ್ಟ್ ಅಪ್‌ಗಳಲ್ಲಿ ನಮ್ಮ ಸಂಸ್ಥೆಯೂ ಒಂದು ಎನ್ನುವ ಸಂದೀಪ್ ಅದರ ಹಿಂದಿನ ಹೋರಾಟವನ್ನೂ ಮೆಲಕು ಹಾಕಿದರು.

ಮೈಸೂರಿನ ವೀಳ್ಯದೆಲೆಯ ಮೂಲಕ ತಯಾರಿಸುವ ಗ್ರೀನ್ ಟೀಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಇದೆ ಎನ್ನುವ ಮಾತನ್ನು ಹೇಳುವಾಗ ಎಲ್ಲರೂ ನನ್ನ ಮಾತು ಕೇಳಿ ಅಪಹಾಸ್ಯ ಮಾಡಿದ್ದರು‌.

ಆದರೆ, ಪತ್ನಿ ರಾಣಿ ವಿಶ್ವನಾಥ್, ನನ್ನೊಂದಿಗೆ ಪ್ರೈಮರಿ ಶಾಲೆಯಿಂದಲೂ ಓದಿದ ಗೆಳೆಯರಾದ ಚಾಣಕ್ಯ, ಗಿರೀಶ್ ಹಾಗೂ ಉಮೇಶ್ ಮಾತ್ರ ಎಂದಿಗೂ ನನ್ನ ಮಾತನ್ನು ಹಗುರವಾಗಿ ತೆಗೆದುಕೊಳ್ಳಲಿಲ್ಲ.

ಅವರ ಸಹಕಾರವೂ ನನ್ನ ಈ ಯಶಸ್ಸಿಗೆ ಕಾರಣವಾಗಿದೆ ಎನ್ನುತ್ತಾರೆ ಸಂದೀಪ್.‌ 

ರಾಣಿ ವಿಶ್ವನಾಥ್ ಹಾಗೂ ಸಂದೀಪ್‌ ಈಶಾನ್ಯ

ಬೀಟಲ್ ಲೀಫ್ ಆರ್ಗಾನಿಕ್ ಟೀ ವಿಶ್ವದಲ್ಲಿಯೇ ಮೊದಲ ಪ್ರಯತ್ನ

ವಿಶ್ವದಲ್ಲಿಯೇ ಮೊದಲ ಬಾರಿಗೆ ಕೇವಲ ವೀಳ್ಯದೆಲೆಯಿಂದ ಟೀ ಮಾಡುವುದನ್ನು ನಾವು ಪರಿಚಯಿಸಿದ್ದೇವೆ ಎನ್ನುತ್ತಾರೆ ಸಂದೀಪ್‌ ಈಶಾನ್ಯ.

ಈಗಾಗಲೇ ವಿಶ್ವದಲ್ಲಿ ಹಲವು ಮಾದರಿಯ ಟೀಗಳು ಲಭ್ಯವಿದೆ.ಆದರೆ, ಕೇವಲ ವೀಳ್ಯದೆಲೆಯನ್ನು ಮಾತ್ರ ಬಳಸಿ ಟೀ ಪರಿಚಯಿಸಿರುವುದು ನಾವು ಮಾತ್ರ. ಹೀಗಾಗಿ, ಇದಕ್ಕೆ ಬೇಡಿಕೆಯೂ ಹೆಚ್ಚುತ್ತಿದೆ. 

Kannadiga's Beetle Leaf Organic Tea is Now famous in abroad!

ಮುಂದಿನ ದಿನಗಳಲ್ಲಿ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎನ್ನುತ್ತಾರೆ ಅವರು. ಇದೀಗ ಮಾರುಕಟ್ಟೆಯಲ್ಲಿ ಬೀಟಲ್ ಲೀಫ್ ಆರ್ಗ್ಯಾನಿಕ್ ಟೀ ಲಭ್ಯವಿದೆ. ಸಂಪರ್ಕಕ್ಕೆ www.beteltea.com |

hello@beteltea.com. ಅಥವಾ 80500 72557.

ವೀಳ್ಯದೆಲೆ ಟೀ ಉಪಯೋಗಗಳು

  • ವೀಳ್ಯದೆಲೆಯಲ್ಲಿ ಮಕ್ಕಳಿಂದ ಎಲ್ಲರಿಗೂ ಬೇಕಾಗುವ ಔಷಧಿಯಿ ಗುಣಗಳಿವೆ.
  • ಇದು ದೇಹದಲ್ಲಿ ಮಧುಮೇಹ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
  •  67% ಆರೋಗ್ಯ ಸಮಸ್ಯೆ ಅಜೀರ್ಣದಿಂದ ಬರುತ್ತಿದ್ದು, ವೀಳ್ಯದೆಲೆ ಟೀಯಿಂದ ಅಜೀರ್ಣ ಸಮಸ್ಯೆ ಕಡಿಮೆ ಆಗಲಿದೆ. 
  •  ಫಾಸ್ಟ್‌ಫುಡ್‌ಗಳಿಂದ ಆರೋಗ್ಯ ಸಮಸ್ಯೆ ಎದುರಾಗುತ್ತಿದ್ದು, ವೀಳ್ಯದೆಲೆ ಸೇವೆನಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು.
  •  ಬಾಯಿ ದುರ್ವಾಸನೆ ತಡೆಗೆ ವೀಳ್ಯದೆಲೆ ಟೀ ಸಹಕಾರಿ.     

ಇದನ್ನೂ ಓದಿರಿ: World Idli Day ದಕ್ಷಿಣ ಭಾರತದ ಪ್ರಮುಖ ಆಹಾರ ಇಡ್ಲಿಯ ಮೂಲ ಯಾವುದು ?!

Karnataka Election ಕರ್ನಾಟಕ ಚುನಾವಣೆ ದಿನಾಂಕ ಘೋಷಣೆ, ಮೇ 10ಕ್ಕೆ ಕರ್ನಾಟಕ ಚುನಾವಣೆ!