ಒಂದು ಫೋನ್ ಅಥವಾ ವ್ಯಾಟ್ಸ್ ಅಪ್ (WhatsApp ) ಸಂದೇಶ ಕಳುಹಿಸಿದರೆ ಸಾಕು ಎಟಿಎಂ ಯಂತ್ರ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ, ಇದು ಹೇಗೆ ಸಾಧ್ಯ ಅಂದುಕೊಂಡಿದ್ದೀರಾ, ಹೌದು ಇದು ನಿಜ, SBI ಬ್ಯಾಂಕ್ ಇಂತಹದನ್ನು ಪ್ರಾಯೋಗಿಕವಾಗಿ ಉತ್ತರಪ್ರದೇಶದಲ್ಲಿ ಜಾರಿಗೊಳಿಸಿದೆ. ಕೇವಲ ಒಂದು ವಾಟ್ಸ್ ಆಪ್ (WhatsApp) ಸಂದೇಶದ ಸಹಾಯದ ಮೂಲಕ ನೀವು ATM ಯಂತ್ರವನ್ನು ನಿಮ್ಮ ಮನೆಬಾಗಿಲಿಗೆ ಕರೆಯಿಸಿಕೊಳ್ಳಬಹುದು.
ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉತ್ತರ ಪ್ರದೇಶದ ಲಖನೌದಲ್ಲಿ ಇಂತಹದೊಂದು ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿದೆ.
70 ವರ್ಷ ಮೇಲ್ಪಟ್ಟವರು (Senior citizens), ದಿವ್ಯಾಂಗರು, ದೃಷ್ಟಿ ದೋಷವುಳ್ಳವರಿಗಾಗಿಯೇ ಈ ಯೋಜನೆಯನ್ನು ಆರಂಭಿಸಲಾಗಿದೆ. ಬ್ಯಾಂಕ್ ಶಾಖೆಯ 5 ಕಿ.ಮೀ ವ್ಯಾಪ್ತಿಯಲ್ಲಿನ ಮೇಲ್ಕಂಡ ವರ್ಗದ ಗ್ರಾಹಕರು ಕರೆ ಮಾಡಿದರೆ ಅಥವಾ ವ್ಯಾಟ್ಸ್ ಅಪ್ ಸಂದೇಶ ಕಳುಹಿಸಿದರೂ ಸಹ ಸಂಚಾರಿ ಎಟಿಎಂ (SBI ATM ) ಯಂತ್ರ ಹೊಂದಿರುವ ವಾಹನ ಗ್ರಾಹಕನ ಮನೆ ಬಾಗಿಲಿಗೆ ಬರುತ್ತದೆ. ಇಲ್ಲಿ ನೀವು ಹಣ ಪಡೆಯಬಹುದು.ಆದರೆ ಇದರಲ್ಲಿ ಗರಿಷ್ಟ 20 ಸಾವಿರ ರುಪಾಯಿಯವರೆಗೆ ಹಣ ಪಡೆಯಬಹುದು. 20 ಸಾವಿರಕ್ಕಿಂತ ಹೆಚ್ಚು ಹಣ ಪಡೆಯಲು ಅವಕಾಶ ನೀಡಿಲ್ಲ. ಹಣಕಾಸೇತರ ವಹಿವಾಟಿಗೆ 60 ರೂಪಾಯಿ ಶುಲ್ಕ ಮತ್ತು GST, ಹಣಕಾಸು ವಹಿವಾಟಿಗೆ 100 ರೂಪಾಯಿ ಶುಲ್ಕ ಮತ್ತು GST ನೀಡಬೇಕಾಗುತ್ತದೆ.