News

HAL ನಲ್ಲಿ Iti, sslc, puc, diploma ವಿದ್ಯಾರ್ಥಿಗಳಿಗೆ ಭರ್ಜರಿ ಅವಕಾಶ

22 November, 2020 6:24 AM IST By:

HAL- ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ವಿವಿಧ ಪೋಸ್ಟ್ ಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಉದ್ಯೋಗ ಅವಕಾಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಡಿಸೆಂಬರ್ 6  ಒಳಗೆ ಆನ್ ಲೈನ್ ನಲ್ಲಿ  ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ಸಂಖ್ಯೆ-17

 ಫಿಟ್ಟರ್-12

 ಏರ್ ಪ್ರೇಮ್ ಫಿಟ್ಟರ್-4

 ಸೆಕ್ಯೂರಿಟಿ ಗಾರ್ಡ್-1

 ಹೆಚ್ಎಎಲ್ ನೇಮಕಾತಿ ಆಯ್ಕೆ ಪ್ರಕ್ರಿಯೆ:

 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ನಂತರ ಅರ್ಹ ಅಭ್ಯರ್ಥಿಗಳನ್ನು ರಿಟರ್ನ್ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.

ಶೈಕ್ಷಣಿಕ ಅರ್ಹತೆ:

 ಫಿಟ್ಟರ್-ಐಟಿಐ

 ಏರ್ ಪ್ರೇಮ್ ಫಿಟ್ಟರ್- ಡಿಪ್ಲೋಮಾ

ಸೆಕ್ಯೂರಿಟಿ ಗಾರ್ಡ್ -sslc/puc

ವಯೋಮಿತಿ:

 ಅಭ್ಯರ್ಥಿಗಳಿಗೆ ವಯಸ್ಸಿನ ವಯೋಮಿತಿ 28 ವರ್ಷ ಹಾಗೂ ಸರ್ಕಾರದ ನಿಯಮಗಳ ಪ್ರಕಾರ ಕಾಯ್ದಿರಿಸಿದ್ದ ವರ್ಗಗಳ ಮೇಲೆ ವಯಸ್ಸಿನ  ವಿಶ್ರಾಂತಿ ಇರುತ್ತದೆ. ಓಬಿಸಿ ಅವರಿಗೆ ಮೂರು ವರ್ಷ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಐದು ವರ್ಷ, ಹಾಗೂ ವಿಕಲಚೇತನರಿಗೆ 10 ವರ್ಷ.

 ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಅಭ್ಯರ್ಥಿಗಳು www.hal-india.co.in ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 6

 ಸೂಚನೆಗಳು:

 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ನಂತರ ಅವರ ಇಮೇಲ್ ಐಡಿಗೆ ಪರೀಕ್ಷೆ ವೇಳಾಪಟ್ಟಿಯನ್ನು ಕಳಿಸಲಾಗುವುದು ಹಾಗೂ ಪರೀಕ್ಷೆಯು ಬೆಂಗಳೂರಿನಲ್ಲಿ ಇರುತ್ತದೆ.

ಪರೀಕ್ಷೆ ಅವಧಿ ಎರಡೂವರೆ ಗಂಟೆ. ಪ್ರಶ್ನೆಗಳು ಬಹು ಆಯ್ಕೆಯ ಮಾದರಿಯಲ್ಲಿರುತ್ತವೆ.  ಪ್ರಶ್ನೆಪತ್ರಿಕೆಯ ಮೂರು ಭಾಗಗಳಲ್ಲಿ ವಿಂಗಡಿಸಲಾಗಿದೆ

 part1-20  ಪ್ರಶ್ನೆಗಳು ಸಾಮಾನ್ಯ ಅರಿವು

Part 2-40 ಪ್ರಶ್ನೆಗಳು ಇಂಗ್ಲಿಷ್ ಭಾಷೆ ಹಾಗೂ

 ತಾರ್ಕಿಕ

Part3-100 ಪ್ರಶ್ನೆಗಳು ಆಯಾ ಶಿಸ್ತಿನ ಮೇಲೆ

 ಹೆಚ್ಚಿನ ಮಾಹಿತಿಗಾಗಿ www.hal-india-co.in ಗೆ ಭೇಟಿ ನೀಡಿ.