News

Job training ನಿರುದ್ಯೋಗಿ ಯುವಕರಿಗೆ ಫ್ರೀ ಉದ್ಯೋಗ ತರಬೇತಿ: ಸಿ.ಎಂ

13 January, 2024 6:16 PM IST By: Hitesh
ಕೌಶಲ್ಯಾಭಿವೃದ್ಧಿ ಜೊತೆ ಕೆಲ್ಸ

ಕೃಷಿ ಜಾಗರಣ ಕನ್ನಡ ಅಗ್ರಿನ್ಯೂಸ್‌ಗೆ ಸ್ವಾಗತ.

ರಾಜ್ಯ ಸರ್ಕಾರವು ನಿರುದ್ಯೋಗಿ ಯುವಜನತೆಗೆ ಯುವನಿಧಿ ಯೋಜನೆ ಪ್ರಾರಂಭಿಸಿದ್ದು, ಆರ್ಥಿಕ ಸಹಾಯದೊಂದಿಗೆ

ಯುವಕರಿಗೆ ತರಬೇತಿಯನ್ನೂ ನೀಡುವುದಾಗಿ ಹೇಳಿದೆ.

ಇನ್ನು ನಿರ್ದಿಷ್ಟ ನೌಕರರಿಗೆ ಹಳೇ ಪಿಂಚಣಿ ವ್ಯವಸ್ಥೆ ನೀಡಲು ಸರ್ಕಾರ ಅಸ್ತು ಎಂದಿದೆ ಈ

ಎಲ್ಲ ಸುದ್ದಿಗಳನ್ನು ನೋಡೋಣ ಮೊದಲಿಗೆ ಮುಖ್ಯಾಂಶಗಳು.

1. ಆವಾಸ್ ಯೋಜನೆಯಡಿ 75 ಲಕ್ಷ ಮನೆ ನಿರ್ಮಾಣ

2. ರಾಜ್ಯದಲ್ಲಿ ಮುಂದಿನ ಎರಡು ದಿನಗಳ ಹವಾಮಾನ ವರದಿ

3. ನಿರುದ್ಯೋಗಿ ಯುವಕರಿಗೆ ಉದ್ಯೋಗ ತರಬೇತಿ: ಸಿ.ಎಂ

4. ಯುವನಿಧಿ: 66 ಸಾವಿರಕ್ಕೂ ಹೆಚ್ಚು ಯವಜನತೆಯಿಂದ ಅರ್ಜಿ

5. ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ಒಪ್ಪಿದ ರಾಜ್ಯ ಸರ್ಕಾರ ಸುದ್ದಿಗಳ ವಿವರ ಈ ರೀತಿ ಇದೆ.

1. 9 ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 75 ಲಕ್ಷ ಮನೆಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ

ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ಅಲ್ಲದೇ 1 ಕೋಟಿ 19 ಲಕ್ಷ ಮನೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ ಎಂದಿದ್ದಾರೆ.

2. ರಾಜ್ಯದಲ್ಲಿ ಬಹುತೇಕ ಒಣಹವೆ ಮುಂದುವರಿದಿದೆ. ಮುಂದಿನ ಎರಡು ದಿನ ಬಹುತೇಕ ಮೋಡ ಕವಿದ ವಾತಾವರಣ ಇರಲಿದೆ

ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ರಾಜ್ಯದ ಸಮತಟ್ಟದ ಪ್ರದೇಶಗಳಲ್ಲಿ ಅತಿ ಕಡಿಮೆ ಚಳಿ 12.5 ಡಿಗ್ರಿ ಸೆಲ್ಸಿಯಸ್‌

ವಿಜಯಪುರದಲ್ಲಿ ದಾಖಲಾಗಿದೆ. ಇನ್ನು ಬೆಂಗಳೂರಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಬೆಳಗಿನ ಜಾವ

ದಟ್ಟ ಮಂಜು ಮುಸುಕುಸವ ಬಹಳಷ್ಟು ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
---------------------
3. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಯುವನಿಧಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ.

ಈ ಯೋಜನೆಯ ಮೂಲಕ ಯುವಕರಿಗೆ ಆರ್ಥಿಕ ನೆರವಷ್ಟೇ ಅಲ್ಲದೇ  ಮುಂದೆ ಸೂಕ್ತ ಉದ್ಯೋಗ ಪಡೆಯಲು ಅವಶ್ಯವಿರುವ  

ಕೌಶಲ್ಯಾಭಿವೃದ್ಧಿ ತರಬೇತಿಯನ್ನೂ ನೀಡಲಾಗುವುದು ಎಂದು ಸಿ.ಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಯುವನಿಧಿಗೆ ನೋಂದಾಯಿಸಿಕೊಂಡಿರು ಯುವಜನತೆಗೆ  ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು

ತರಬೇತಿ ನೀಡಲಿವೆ. ಇದರಿಂದ ಯುವಜನತೆಗೆ ಶೀಘ್ರ ನೌಕರಿ ಸಿಗಲು ಅನುಕೂಲವಾಗಲಿದೆ ಎಂದಿದ್ದಾರೆ.
---------------------
4. ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಪ್ರಾರಂಭಿಸಿರುವ ಯುವನಿಧಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

2022-23ನೇ ಶೈಕ್ಷಣಿಕ ವರ್ಷದಲ್ಲಿ ಪದವಿ ಪಾಸಾಗಿರುವ ನಿರುದ್ಯೋಗಿ ಯುವಕ ಮತ್ತು ಯುವತಿಗೆ ಮಾಸಿಕ 3 ಸಾವಿರ

ಹಾಗೂ ಡಿಪ್ಲೋಮ ಮಾಡಿದವರಿಗೆ ತಿಂಗಳಿಗೆ 1 ಸಾವಿರದ 500 ರೂಪಾಯಿ ನಿರುದ್ಯೋಗ ಭತ್ಯೆ ಸಿಗಲಿದೆ.

ಈ ಸೌಲಭ್ಯ ನೋಂದಾಯಿತ ಯುವಕರಿಗೆ ಕೆಲಸ ಸಿಗುವವರೆಗೂ ಅಥವಾ 2 ವರ್ಷಗಳವರೆಗೆ ಸಿಗಲಿದೆ.

ಯುವನಿಧಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಗತಿಯಲಿದ್ದು, ಇಲ್ಲಿಯವರೆಗೆ 66 ಸಾವಿರಕ್ಕೂ ಹೆಚ್ಚು

ಯುವಜನತೆ ಇದಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಸರ್ಕಾರ ತಿಳಿಸಿದೆ.  

5. ರಾಜ್ಯದ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆ ಈಡೇರಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಹಳೇ ಪಿಂಚಣಿ ವ್ಯವಸ್ಥೆ ಜಾರಿ ಮಾಡುವುದಕ್ಕೆ ಸರ್ಕಾರ ಅನುಮೋದನೆ ನೀಡಿದೆ. 2006 ಏಪ್ರಿಲ್ 1ಕ್ಕಿಂತ ಮುಂಚಿತವಾಗಿ

ರಾಜ್ಯ ಸರ್ಕಾರದ ಅಧಿಸೂಚನೆ ಅನ್ವಯ ನೇಮಕಾತಿ ಹೊಂದಿರುವ ನೌಕರರನ್ನು ಹಳೇಪಿಂಚಣಿ ವ್ಯವಸ್ಥೆ ವ್ಯಾಪ್ತಿಗೆ ತರಬೇಕು

ಎಂದು ಸರ್ಕಾರಿ ನೌಕರರು ಆಗ್ರಹಿಸಿದ್ದರು. ಇದಕ್ಕೆ ಇದೀಗ   ಸರ್ಕಾರ ಒಪ್ಪಿಗೆ ಸೂಚಿಸಿದೆ.  

ಇದರಿಂದ 11 ಸಾವಿರದ 366 ಬಾಧಿತ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದವರಿಗೆ ಅನುಕೂಲವಾಗಲಿದೆ.
--------------------- 

6. ಭಾರತೀಯ ಕರಾವಳಿ ರಕ್ಷಣಾ ಪಡೆ ಹಾಗೂ ಜಪಾನಿನ ಕರಾವಳಿ ರಕ್ಷಣಾ ಪಡೆಯಿಂದ ತಮಿಳುನಾಡಿನ ಚೆನ್ನೈನಲ್ಲಿ ಜಂಟಿ ಅಭ್ಯಾಸ ನಡೆದಿದೆ.

ಸಮುದ್ರದಲ್ಲಿನ ಅಪಾಯಕಾರಿ ಹಾಗೂ ಮಾದಕ ದ್ರವ್ಯ ಮಾಲಿನ್ಯವನ್ನು ತಪ್ಪಿಸುವ ಬಗ್ಗೆ ಜಂಟಿ ಅಭ್ಯಾಸದಲ್ಲಿ ತರಬೇತಿ ನೀಡಲಾಗಿದೆ.
--------------------- 

7. ಕರ್ನಾಟಕದ ಹಾಸನಯಲ್ಲಿ ರಾಷ್ಟ್ರೀಯ ಅಭಿವೃದ್ಧಿ ಕಾಮಗಾರಿಗೆ ಜಮೀನಿನ ಭಾಗಗಳನ್ನು ಬಿಟ್ಟುಕೊಡುವ

ರೈತರಿಗೆ ಸೂಕ್ತ ಪರಿಹಾರ ನೀಡಲು ಕ್ರಮವಹಿಸುವಂತೆ ಸಂಸದ ಪ್ರಜ್ವಲ್ ರೇವಣ್ಣ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
---------------------
8. ತುಮಕೂರು ಜಿಲ್ಲೆಯಲ್ಲಿ ಮನರೇಗ ಯೋಜನೆಯಡಿ ರೈತರ ಜಮೀನುಗಳಲ್ಲಿ ಅರಣ್ಯ ಬೆಳೆಸುವುದಕ್ಕಾಗಿ 4 ಲಕ್ಷ ಸಸಿಗಳನ್ನು ಫೋಷಿಸಲಾತ್ತಿದೆ.

ಮನರೇಗ ಯೋಜನೆಯಡಿ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು   ಜಿಲ್ಲಾಪಂಚಾಯಿತಿ ಸಿಇಒ ಜಿ.ಪ್ರಭು ತಿಳಿಸಿದ್ದಾರೆ.