News

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿಯಿರುವ ಸಹಾಯಕ ಪ್ರಾಧ್ಯಾಪಕರ 1242 ಹುದ್ದೆಗಳ ಭರ್ತಿಗೆ ಅಧಿಸೂಚನೆ

13 September, 2021 8:26 PM IST By:

ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಲಿಚ್ಚಿಸುವ ಅಭ್ಯರ್ಥಿಗಳಿಗಿಲ್ಲದೆ ಸಂತಸದ ಸುದ್ದಿ. ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿಯಿರುವ ಸಹಾಯಕ ಪ್ರಾಧ್ಯಾಪಕರ 1242 ಹುದ್ದೆಗಳ ಭರ್ತಿಗೆ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿಯಿರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಭರ್ತಿಗೆ 2015 ರಲ್ಲಿ ಅರ್ಜಿ ಕರೆಯಲಾಗಿತ್ತು. ಆಗ ಭರ್ತಿಯಾಗದೆ ಉಳಿದಿರುವ 145 ಹುದ್ದೆಗಳನ್ನೊಳಗೊಂಡಂತೆ ಪ್ರಸ್ತುತ ಭರ್ತಿ ಮಾಡಬೇಕಾಗಿರುವ 1097 ಹುದ್ದೆಗಳು ಸೇರಿದಂತೆ 1242 ಖಾಲಿಯಿರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇರನೇಮಕಾತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ.

1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ವಿಶೇಷ ನೇಮಕಾತಿ ನಿಯಮಗಳನ್ವಯ ಭರ್ತಿ ಮಾಡುವುದಕ್ಕಾಗಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಲು ಸರ್ಕಾರ ಕರ್ನಾಟಕ ಪ್ರರೀಕ್ಷಾ ಪ್ರಾಧಿಕಾರವನ್ನು ಆಯ್ಕೆ ಪ್ರಾಧಿಕಾರವನ್ನಾಗಿ ಆಯ್ಕೆ ಮಾಡಿ ಅಧಿಸೂಚಿಸಲಾಗಿದೆ. ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಯುಜಿಸಿ ವೇತನ ಶ್ರೇಣಿ 57,700 ರೂಪಾಯಿಯಿಂದ 1,82,400 ಯಲ್ಲಿ ನೇರ ನೇಮಕಾತಿ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

2005 ರಲ್ಲಿ ನೇಮಕಾತಿಯಾಗದ ಹುದ್ದೆಗಳ ವಿವರ

ಕನ್ನಡ- 02, ಇಂಗ್ಲೀಷ್ -50, ಹಿಂದಿ-01, ಉರ್ದು-06, ಇತಿಹಾಸ-01, ಅರ್ಥಶಾಸ್ತ್ರ-01, ರಾಜ್ಯಶಾಸ್ತ್ರ -02, ಸಮಾಜಶಾಸ್ತ್ರ -01, ಸಮಾಜಕಾರ್ಯ-01, ವಾಣಿಜ್ಯಶಾಸ್ತ್ರ-27, ನಿರ್ವಹಣಾಶಾಸ್ತ್ರ-14, ಭೌತಶಾಸ್ತ್ರ -02, ರಾಸಾಯನಶಾಸ್ತ್ರ -03, ಗಣಿತಶಾಸ್ತ್ರ-03, ಗಣಕವಿಜ್ಞಾನ-28, ಪ್ಯಾಷನ್ ಟೆಕ್ನಾಲಜಿ -3 ಸೇರಿದಂತೆ ಒಟ್ಟು 145 ಹುದ್ದೆಗಳನ್ನು ಸೇರಿಸಿ ಅರ್ಜಿ ಕರೆಯಲಾಗಿದೆ.

ಪ್ರಸ್ತುತ ನೇಮಕಾತಿಯಲ್ಲಿ ಭರ್ತಿ ಮಾಡಲಾಗುತ್ತಿರುವ ಹುದ್ದೆಗಳ ವಿವರ

ಕನ್ನಡ-105, ಇಂಗ್ಲೀಷ್ -34, ಹಿಂದಿ-09, ಉರ್ದು-03, ಇತಿಹಾಸ -108, ಅರ್ಥಶಾಸ್ತ್ರ -121, ರಾಜ್ಯಶಾಸ್ತ್ರ-96, ಸಮಾಜಶಾಸ್ತ್ರ-48, ಶಿಕ್ಷಣಶಾಸ್ತ್ರ-02, ಕಾನೂನು-17, ಸಮಾಜಕಾರ್ಯ-04, ಭೂಗೋಳಶಾಸ್ತ್ರ -08, ಭೂಗರ್ಭಶಾಸ್ತ್ರ-05, ವಾಣಿಜಶಾಸ್ತ್ರ-171, ನಿರ್ವಹಣಾ ಶಾಸ್ತ್ರ-01, ಭೌತಶಾಸ್ತ್ರ -74, ರಾಸಾಯನಶಾಸ್ತ್ರ-82, ಜೈವಿಕ ರಸಾಯನಶಾಸ್ತ್ರ-05, ಗಣಿತಶಾಸ್ತ್ರ-72, ಸೂಕ್ಷ್ಮಜೀವಿಶಾಸ್ತ್ರ-05, ಪ್ರಾಣಿಶಾಸ್ತ್ರ-31,  ಸಸ್ಯಶಾಸ್ತ್ರ-51, ಎಲೆಕ್ಟ್ರಾನಿಕ್ಸ್ -04, ಗಣಕವಿಜ್ಞಾನ-35, ಸಂಖ್ಯಾಶಾಸ್ತ್ರ-06 ಸೇರಿದಂತೆ ಒಟ್ಟು 1097 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಮೇಲಿನ ವಿಷಯವಾರುಪ ಒಟ್ಟು 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಲ್ಲಿ ಶೇ. 95 ರಷ್ಟು ನೇರ ನೇಮಕಾತಿ ಮೂಲಕ ಹಾಗೂ ಶೇ. 5 ರಷ್ಟು ಇಲಾಖೆಯ ಗ್ರೂಪ್ ಸಿ ವೃಂದದಿಂದ ನೇರನೇಮಕಾತಿ ಮೂಲಕ ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಸಹಾಯಕ ಪ್ರಾಧ್ಯಾಪಕರ ವಿಶೇಷ ನೇಮಕಾತಿ ನಿಯಮಗಳನ್ವಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿಯಿರುವ 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನಿಯಮಾನುಸಾರ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿ, ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಮೀಸಲಾತಿ ಮತ್ತು ರೋಸ್ಟರ್ ಬಿಂದುಗಳನ್ವಯ ಆಯ್ಕೆ ಮಾಡಿ, ಅಂತಿಮ ಆಯ್ಕೆ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಈ ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವ ಸದ್ಯದಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದೆ