ಭಾರತ ಸೇನೆಗೆ ಸೇರಲೇಬೇಕು ಎಂದು ಪಣತೊಟ್ಟ ಯುವಕರಿಗೆ ಇದು ಒಂದು ಸಿಹಿಸುದ್ದಿ ಎಂದೇ ಹೇಳಬಹುದು, ಯಾಕೆಂದರೆ ಭಾರತೀಯ ಸೇನೆಯು ಹುದ್ದೆಗಳಿಗಾಗಿ ಅರ್ಜಿಯನ್ನು ಆಹ್ವಾನಿಸಿದೆ.
ಭಾರತೀಯ ಸೇನೆಯು ಜಲಂಧರ್ ಕ್ಯಾಟ್ rally ಗಾಗಿ ಅಧಿಸೂಚನೆ ಹೊರಡಿಸಿದ್ದು ವಿವಿಧ ಸೈನಿಕ ಸಹಾಯಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅದಕ್ಕೆ ಆಸಕ್ತ ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ.
ಅರ್ಜಿಯನ್ನು ಸಲ್ಲಿಸುವ ದಿನಾಂಕ:
ಆನ್ಲೈನ್ ಅರ್ಜಿಯನ್ನು ಹಾಕಲು ನವೆಂಬರ್ 14ರಿಂದ ಪ್ರಾರಂಭವಾಗುತ್ತದೆ, ಹಾಗೂ ಅರ್ಜಿ ಹಾಕಲು ಕೊನೆಯ ದಿನಾಂಕ ಡಿಸೆಂಬರ್ -28.
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳ ಆಯ್ಕೆಗಾಗಿ 4 ಹಂತದ ಪರೀಕ್ಷೆಗಳನ್ನು ನಡೆಸಲಾಗುವುದು, 4 ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ದೊರಕಲಿದೆ. ಅವು ಯಾವುದೆಂದರೆ ಮೊದಲನೆಯದು ದೈಹಿಕ ಸಾಮರ್ಥ್ಯ ಪರೀಕ್ಷೆ, ತದನಂತರ ಎರಡನೆಯದು ಭೌತಿಕ ಅಳತೆ, ಮೂರನೇದು ವೈದ್ಯಕೀಯ ಪರೀಕ್ಷೆ ಹಾಗೂ ಕೊನೆಯದಾಗಿ ಲಿಖಿತ ಪರೀಕ್ಷೆ.
ವಯೋಮಿತಿ ಹಾಗೂ ವಿದ್ಯಾರ್ಹತೆ:
1.ಸೋಲ್ಜರ್ ಜನರಲ್ ಡ್ಯೂಟಿ:17.5-21ವರ್ಷಗಳು -10 ನೆ ತರಗತಿ
2.ಸೋಲ್ಜರ್ ತಾಂತ್ರಿಕ:17.5-23 ವರ್ಷಗಳು-PUC
3.ಸೋಲ್ಜರ್ ಟೆಕ್ ನರ್ಸಿಂಗ್ ಸಹಾಯಕ:17.5-23 ವರ್ಷಗಳು-PUC
4.ಸೋಲ್ಜರ್ ಕ್ಲರ್ಕ್:17.5-23 ವರ್ಷಗಳು-12 ನೆ ತರಗತಿ
5.ಸೋಲ್ಜರ್ ಟ್ರೇಡ್ಸ್ಮನ್:17.5-23 ವರ್ಷಗಳು-8ನೆ ತರಗತಿ
6.ಸೋಲ್ಜರ್ ಟ್ರೇಡ್ಸ್ಮನ್ :17.5-23 ವರ್ಷಗಳು-10 ನೆ ತರಗತಿ
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಅಭ್ಯರ್ಥಿಗಳು www.joinindianarmy.nic.in ವೆಬ್ ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು.