News

ನಿರುದ್ಯೋಗಿಗಳಿಗೆ ಸಿಹಿಸುದ್ದಿ: ನ. 23. 24 ರಂದು ನಡೆಯಲಿದೆ ಬೃಹತ್ ಉದ್ಯೋಗ ಮೇಳ

09 November, 2020 11:37 AM IST By:

ಕೊರೋನಾದಿಂದಾಗಿ ಉದ್ಯೋಗ ಕಳೆದುಕೊಂಡಿದ್ದರೆ ಚಿಂತೆ ಮಾಡಬೇಡಿ,  ಹೊಸದಾಗಿ ಏನಾದರೊಂದು ಉದ್ಯೋಗ ಮಾಡಲು ಬಯಸಿದ ಪದವಿ ವಿದ್ಯಾರ್ಥಿಗಳಿಗೆ ಇಲ್ಲಿದೆ ಸಿಹಿ ಸುದ್ದಿ.

ರಾಜ್ಯದಲ್ಲಿರುವ ನಿರುದ್ಯೋಗಿಗಳಿಗೆ ದೇಶಪಾಂಡೆ ಫೌಂಡೇಷನ್ ನ ದೇಶಪಾಂಡೆ ಸ್ಕಿಲ್ಲಿಂಗ್ ವತಿಯಿಂದ ಎರಡು ದಿನಗಳ ಕಾಲ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ.

ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಷನ್‌ನ ದೇಶಪಾಂಡೆ ಸ್ಕಿಲ್ಲಿಂಗ್ ವತಿಯಿಂದ ನ. 23 ಮತ್ತು 24ರಂದು ಮೆಗಾ ವರ್ಚುವಲ್ ಉದ್ಯೋಗ ಮೇಳ ಆಯೋಜಿಸಲಾಗಿದೆ.

ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ನೀವು ಹುಬ್ಬಳ್ಳಿಗೆ ಹೋಗಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದು. ಹೌದು,,, ಎರಡು ದಿನಗಳ ಆನ್‌ಲೈನ್‌ನಲ್ಲಿ ಮೇಳದಲ್ಲಿ ಪಾಲ್ಗೊಳ್ಳಬಹುದು.

ಬಿ.ಎ, ಬಿ.ಕಾಂ, ಬಿ.ಎಸ್‌ಸಿ, ಬಿ.ಬಿ.ಎ, ಬಿ.ಸಿ.ಎ, ಬಿ.ಬಿ.ಎಂ. ಪದವೀಧರರು ಎರಡು ದಿನಗಳ ಆನ್‌ಲೈನ್‌ನಲ್ಲಿ ಮೇಳ
ದಲ್ಲಿ ಪಾಲ್ಗೊಳ್ಳಬಹುದು.

ಎರಡೂ ದಿನ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯ ವರೆಗೆ ಮೇಳ ನಡೆಯಲಿದೆ. ಆಸಕ್ತರು ನವೆಂಬರ್  20ರ ಒಳಗಾಗಿ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ 90606 64044, 72596 18203, 96861 13995 ಗೆ ಸಂಪರ್ಕಿಸಬಹುದು.

ಬಿ.ಎ, ಬಿ.ಕಾಂ, ಬಿ.ಎಸ್‌ಸಿ, ಬಿ.ಬಿ.ಎ, ಬಿ.ಸಿ.ಎ, ಬಿ.ಬಿ.ಎಂ. ಪದವೀಧರರು ಇನ್ನೇಕೆ ತಡ ಮಾಡುತ್ತೀರಿ. ಇಂದೇ ಮೇಲೆ ತಿಳಿಸಿದ ಮೊಬೈಲ್ ನಂಬರ್ ಗಳಿಗೆ ಕರೆ ಮಾಡಿ ನಿಮ್ಮ ಹೆಸರು ನೋಂದಾಯಿಸಿಕೊಂಡು ಉದ್ಯೋಗ ಮೇಳದ ಉಪಯೋಗ ಪಡೆದುಕೊಳ್ಳಿ.