News

ಬೆಂಬಲ ಬೆಲೆಯಲ್ಲಿ ಭತ್ತ, ಜೋಳ ಖರೀದಿ ಮಾರ್ಚ್ 31ರವರೆಗೆ

28 February, 2021 9:33 AM IST By:
paddy jawar

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ಭತ್ತ ಹಾಗೂ ಹೈಬ್ರೀಡ್, ಮಾಲ್ದಂಡಿ ಜೋಳವನ್ನು ಮಾರ್ಚ್.31 ರವರೆಗೆ ಖರೀದಿಸಲಾಗುತ್ತಿದೆ  ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ ಕೆ. ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಜಿಲ್ಲೆಯ ಕೃಷಿಕರು ತಮ್ಮ ಉತ್ಪನ್ನಗಳನ್ನು ಸಮೀಪದ ಖರೀದಿ ಕೇಂದ್ರಕ್ಕೆ ಮಾರಾಟ ಮಾಡಬಹುದು ಹೈಬ್ರೀಡ್ ಮತ್ತು ಮಾಲ್ದಂಡಿ ಬಿಳಿ ಜೋಳ ಖರೀದಿಗಾಗಿ ಹುಬ್ಬಳ್ಳಿಯ ಅಮರಗೋಳ ಎಪಿಎಂಸಿಯ ಟಿಎಪಿಸಿಎಂಎಸ್ ಗೋದಾಮಿನಲ್ಲಿ ಹಾಗೂ ಕುಂದಗೋಳ ತಾಲೂಕಿನ ಯರಗುಪ್ಪಿ ಪಿಎಸಿಎಸ್ ಗೋದಾಮಿನಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಹೈಬ್ರೀಡ್ ಜೋಳವನ್ನು ಪ್ರತಿ ಕ್ವಿಂಟಾಲ್‍ಗೆ 2,620 ರೂ. ಗಳಂತೆ ಹಾಗೂ ಮಾಲ್ದಂಡಿ ಬಿಳಿ ಜೋಳವನ್ನು ಪ್ರತಿ ಕ್ವಿಂಟಾಲ್‍ಗೆ 2,640 ರೂ.ಗಳಂತೆ ಖರೀದಿಸಲಾಗುತ್ತಿದೆ. ಮಾರುಕಟ್ಟೆ ದರಕ್ಕಿಂತ ಕನಿಷ್ಠ ಬೆಂಬಲ ಬೆಲೆಯು ಅಧಿಕವಾಗಿದೆ. ರೈತರು ತಾವು ಬೆಳೆದ ಜೋಳವನ್ನು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಬೇಕು. 1 ಲಕ್ಷ ಕ್ವಿಂಟಾಲ್ ಜೋಳ ಖರೀದಿಸಲು ಅವಕಾಶವಿದೆ.

ಭತ್ತ ಖರೀದಿಯೂ ಮಾರ್ಚ್ 31 ರವರೆಗೆ

ಜೋಳವಷ್ಟೇ ಅಲ್ಲ ಭತ್ತ ಸಹ ಬೆಂಬಲಬೆಲೆ ಯೋಜನೆಯಡಿ ಮಾರ್ಚ್ 31 ರವರೆಗೆ ಖರೀದಿಸಲಾಗುತ್ತಿದೆ. ಕಲಘಟಗಿ ಮತ್ತು ಅಳ್ನಾವರದ ಎಪಿಎಂಸಿ ಪ್ರಾಂಗಣಗಳಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಸಾಮಾನ್ಯ ಹಾಗೂ ಎ ಗ್ರೇಡ್ ಭತ್ತವನ್ನು ಪ್ರತಿ ಕ್ವಿಂಟಾಲ್‍ಗೆ 1,868 ರೂ.ಗಳಂತೆ ಖರೀದಿಸಲಾಗುತ್ತಿದೆ. ಜೋಳ ಹಾಗೂ ಭತ್ತ ಬೆಳೆದ ರೈತರಿಗೆ ಯಾವುದೇ ಗರಿಷ್ಠ ಮಾರಾಟಮಿತಿಯನ್ನು ವಿಧಿಸಿಲ್ಲ. ರೈತರು ಕನಿಷ್ಠ ಬೆಂಬಲ ಬೆಲೆ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು

ಹೆಚ್ಚಿನ ಮಾಹಿತಿಗೆ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕೃಷಿ ಸಹಕಾರ ಮಾರಾಟ ಫೆಡರೇಷನ್ನಿನ ಅಧಿಕಾರಿ – ಮೊ.ಸಂ: 9449864419 ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.