ಜಲ ದೀಪಾವಳಿ ಕಾರ್ಯಕ್ರಮವನ್ನು ಅಮೃತ್ 2.0 ಯೋಜನೆಯಡಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯವು ರಾಷ್ಟ್ರೀಯ ಜೀವನೋಪಾಯ ಅಭಿಯಾನ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಹಯೋಗದೊಂದಿಗೆ ಕರ್ನಾಟಕ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಚಾಲನೆಗೊಳಿಸಿದೆ.
ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಕೊನೆಯ ದಿನ ಬೈಲಹೊಂಗಲ, ಮೂಡಲಗಿ, ಸಂಕೇಶ್ವರ, ಬಳ್ಳಾರಿ, ತೆಕ್ಕಲಕೋಟೆ, ಔರಾದ್, ದೇವರಹಿಪ್ಪರಗಿ, ಬಸವನಬಾಗೇವಾಡಿ,
ಇಂಡಿ, ಮಂಗಳೂರು,ಉಳ್ಳಾಲ, ಹಾಸನ, ಆಲೂರು, ಅರಕಲಗೂಡು, ಬೇಲೂರು,ಚನ್ನರಾಯಪಟ್ಟಣ, ಹೊಳೆನರಸೀಪುರ, ಗುತ್ತಲ, ಹಾವೇರಿ, ರಾರ್ಬಟೈನ್ ಪೇಟೆ, ಕುಷ್ಟಗಿ, ಮಂಡ್ಯ, ಕೆ.ಆರ್ ಪೇಟೆ, ಮಳವಳ್ಳಿ, ನಾಗಮಂಗಲ, ಶೀರಂಗಪಟ್ಟಣ,
ಸರಗೂರು, ಮಾಗಡಿ, ಭದ್ರಾವತಿ, ಸಾಗರ, ಸೊರಬ, ಶಿಕಾರಿಪುರ, ಕಾರ್ಕಳ, ಹೊನ್ನಾವರ, ಮುಂಡಗೋಡ, ಮತ್ತು ಕೊಟ್ಟೂರು ನಗರ ಸ್ಥಳೀಯ ಸಂಸ್ಥೆಗಳು ಕಾರ್ಯಕ್ರಮವನ್ನು ಆಯೋಜಿಸಿದ್ದು ಸ್ವ-ಸಹಾಯ-ಗುಂಪುಗಳ ಮಹಿಳೆಯರು ಭಾಗವಹಿಸಿ ನೀರಿನ ಶುದ್ದೀಕರಣದ ಕುರಿತಾಗಿ ಸಂಪೂರ್ಣ ಮಾಹಿತಿಯನ್ನು ಪಡೆದರು.
ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದ್ದು, ಶುದ್ಧ ಕುಡಿಯುವ ನೀರಿನ ಪ್ರಾಮುಖ್ಯತೆಯ ಬಗ್ಗೆ ಸ್ವ-ಸಹಾಯ-ಗುಂಪುಗಳ ಮಹಿಳೆಯರಿಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ರಾಜ್ಯದಾದ್ಯಂತ ಒಟ್ಟು 81 ಜಲ ಶುದ್ದೀಕರಣ ಘಟಕಗಳಲ್ಲಿ ನಗರಸಭೆಗಳು, ಪುರಸಭೆಗಳು ಮತ್ತು ಪಟ್ಟಣಪಂಚಾಯಿತಿಗಳ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ಉಪಸ್ಥಿತಿಯೊಂದಿಗೆ ಜಲ ಸಮರೋಪಗೊಳಿಸಲಾಯಿತು.