News

"ಐಟಮ್‌" ಎಂದು ಚುಡಾಯಿಸಿದವನಿಗೆ ಜೈಲು ಸಜೆ!

28 October, 2022 11:25 AM IST By: Hitesh
jail

ಹುಡುಗಿಯರನ್ನು ಐಟಮ್‌ ಎಂದರೆ ಜೋಕೆ, ಹುಡುಗಿಯನ್ನು ಐಟಮ್‌ ಎಂದು ಕರೆದ ಯುವಕನಿಗೆ ಸಜೆಯೂ ಆಗಿದೆ….

ಇದನ್ನೂ ಓದಿರಿ: ಕುಲಾಂತರಿ ಸಾಸಿವೆಗೆ ಅನುಮತಿ; ರೈತರಿಗೆ ಆಗುವ ಲಾಭಗಳೇನು?

ಹುಡುಗಿಯರನ್ನು ಐಟಮ್‌ ಎಂದು ಕರೆವುದು, ಚೇಡಿಸುವುದಕ್ಕೆ ಮುಂಬೈನ ವಿಶೇಷ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೇ ದಂಡವನ್ನೂ ವಿಧಿಸಿದೆ.

2015ರ ಜುಲೈ 14ರಂದು ಸಬ್‌ಅರ್ಬನ್‌ ಮುಂಬೈನಲ್ಲಿ 25 ವರ್ಷದ ಆರೋಪಿಯು ಬಾಲಕಿಯನ್ನು 'ಐಟಮ್‌' ಎಂದು ಕರೆದು, ಜಡೆ ಹಿಡಿದು ಎಳೆದಾಡಿದ್ದ. ಆಗ ಬಾಲಕಿಗೆ 16 ವರ್ಷ ವಯಸ್ಸು. ಬಾಲಕಿ ಶಾಲೆಯಿಂದ ಹಿಂತಿರುಗುತ್ತಿದ್ದಾಗ ಈ ಕೃತ್ಯ ನಡೆದಿತ್ತು.

ಮೊದ ಮೊದಲು ಹುಡುಗಿ ಈ ರೀತಿ ಕಿರುಕುಳ ನೀಡಂತೆ ಮನವಿ ಮಾಡಿದ್ದಳು. ಆದರೆ, ಯುವಕ ತನ್ನ ವರ್ತನೆಯನ್ನು ಬದಲಾಯಿಸಿಕೊಂಡಿರಲಿಲ್ಲ. ಪದೇ ಪದೇ ಅದೇ ತಪ್ಪನ್ನು ಮಾಡುತ್ತಿದ್ದ.

ಅವಹೇಳನಕಾರಿ ಪದಗಳನ್ನು ಬಳಕೆ ಮಾಡಿ ನಿಂದಿಸಿದ್ದ ಮತ್ತು ಕೂದಲನ್ನು ಹಿಡಿದು ಎಳೆದಾಡಿದ್ದ. ಯುವಕನ ಕಿರುಕುಳ ತಾಳಲಾರದೆ ವಿದ್ಯಾರ್ಥಿನಿ ಪೊಲೀಸರಿಗೆ ಕರೆ ಮಾಡಿದ್ದಳು. 

ಇದನ್ನೂ ಓದಿರಿ: 10ನೇ ತರಗತಿ ಪಾಸಾಗಿದ್ದರೇ ಸಾಕು KMF ನಲ್ಲಿವೆ ಉದ್ಯೋಗಾವಕಾಶ; ರೂ.97100 ಸಂಬಳ! 

ಪೊಲೀಸರು ಸ್ಥಳಕ್ಕೆ ಬಂದಾಗ ಆರೋಪಿ ಪರಾರಿಯಾಗಿದ್ದ. ಮನೆಗೆ ಬಂದ ಬಾಲಕಿ ಕೃತ್ಯದ ಬಗ್ಗೆ ತಂದೆಗೆ ತಿಳಿಸಿದ್ದಳು.

ಬಳಿಕ ಮುಂಬೈನ ಸಕಿನಕ ಪೊಲೀಸ್‌ ಠಾಣೆಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಸಂಬಂಧಪಟ್ಟ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. 

2015ರ ಲೈಂಗಿಕ ದೌರ್ಜನ್ಯ ಪ್ರಕರಣ ಒಂದಕ್ಕೆ ಸಂಬಂಧಿಸಿ ತೀರ್ಪು ನೀಡುವಾಗ ಕೋರ್ಟ್‌ ಈ ವಿಷಯವನ್ನು ಪ್ರಸ್ತಾಪಿಸಿದೆ. 

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಅಪರಾಧಕ್ಕೆ ಯುವಕನಿಗೆ ಒಂದೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈಚೆಗೆ ಅಂದರೆ, ಅಕ್ಟೋಬರ್‌ 20ರಂದು ಆದೇಶ ನೀಡಲಾಗಿದೆ. 

ಆರೋಪಿ ಮೇಲೆ ಸಹಾನುಭೂತಿಯನ್ನು ತೋರಿಸಲು ನಿರಾಕರಿಸಿದ್ದು, ಬೀದಿ ಬದಿಯ ರೋಮಿಯೊಗಳಿಗೆ ತಕ್ಕ ಪಾಠ ಕಲಿಸಬೇಕು.

ಮುಂದೆ ಇಂತಹ ಅಸಭ್ಯ ವರ್ತನೆ ತೋರದಂತೆ ಎಚ್ಚರಿಕೆಯಾಗಬೇಕು ಎಂದು ನ್ಯಾಯಮೂರ್ತಿ ಎ.ಜೆ. ಅನ್ಸಾರಿ ತಿಳಿಸಿದ್ದಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ (ಪೋಕ್ಸೊ) ಅಡಿ ತಪ್ಪಿತಸ್ಥನಿಗೆ ಶಿಕ್ಷೆ ವಿಧಿಸಿದ್ದಾರೆ.

ಐಎಎಸ್‌ ಅಧಿಕಾರಿಯಿಂದ ಉದ್ಯೋಗ ಕೊಡಿಸುವ ನೆಪದಲ್ಲಿ 20 ಯುವತಿಯರಿಗೆ ಲೈಂಗಿಕ ಕಿರುಕುಳ!  

ಅಲ್ಲದೇ ಇದೇ ಸಂದರ್ಭದಲ್ಲಿ ಆರೋಪಿಯ ವರ್ತನೆ ಸಂಪೂರ್ಣವಾಗಿ ಅನುಚಿತವಾಗಿದೆ. ಆತ ದುರುದ್ದೇಶದಿಂದಲೇ ಆಕೆಯ ಜಡೆಯನ್ನು ಹಿಡಿದು ಎಳೆದಿದ್ದಾನೆ ಮತ್ತು ಆಕೆಯನ್ನು ಐಟಮ್‌ ಎಂದು ಕರೆದಿದ್ದಾನೆ ಎಂದು ಅಭಿಪ್ರಾಯಪಡಲಾಗಿದೆ.  

ಸಿನಿಮಾದ ಪ್ರಭಾವ 

ಐಟಮ್‌ ಎನ್ನುವ ಪದ ಸಿನಿಮಾಗಳಲ್ಲಿ ಹೆಚ್ಚು ಬಳಕೆ ಮಾಡಲಾಗುತ್ತಿದೆ. ಕಾಲೇಜು ಯುವಕರು ಸಹ ಹುಡುಗಿಯರನ್ನು ಅವಹೇಳನ ಮಾಡಲು ಈ ಪದವನ್ನು ಬಳಸುವುದು ಸಾಮಾನ್ಯವಾದಂತಿದೆ.

ಆದರೆ, ಐಟಮ್‌ ಎನ್ನುವ ಪದ ಬಳಸಿ ಚುಡಾಯಿಸುವುದಕ್ಕೆ ಶಿಕ್ಷೆಯಾದ ಪ್ರಕರಣಗಳು ವಿರಳವಾಗಿದೆ.  

'Water Heroes: Share Your Stories’ ಸ್ಪರ್ಧೆಗೆ ಅರ್ಜಿ ಆಹ್ವಾನ; ನೀವೂ ನಿಮ್ಮ ಕಥೆ ಹಂಚಿಕೊಂಡು ರೂ.10,000 ಗೆಲ್ಲಬಹುದು!