News

ನಾಳೆ ಬೆಳಗಾವಿ ಬಂದ್! ಆಗುವುದೇ? ಯಾಕೆ ಬೆಳಗಾವಿ ಬಂದ್ ಆಗಬಹುದು ? ಏನು ಕಾರಣ?

13 December, 2021 5:23 PM IST By: Ashok Jotawar
MES leader Deepak Dalvi.

ಈ ಎಲ್ಲ ಘಟನೆ ಯಾಕೆ ನಡೆಯಿತು ಮತ್ತು ಏನು ಇದರ ಹಿಂದೆ ಇರುವ ಮರ್ಮ ಮತ್ತು ಮಸಿ ಬಳೆದ ಕಾರಣ ಇಡೀ ಬೆಳಗಾವಿ ಬಂದ್ ಮಾಡಲಾಗುತ್ತೆಯೇ ?

ಯಾವಾಗಾರೀ ಈ ಒಂದು ಜಗಳ ಮುಗಿಯುವದು? ಯಾಕೆಂದರೆ ಸುಮಾರು 70  ವರ್ಷಗಳಿಂದ  ಈ ಒಂದು ಜಗಳ ಮುಗಿಯೋ ಮಾತೇ ತುಗೋತಿಲ್ಲ, ಅದು ಎನ್ನಪ್ಪ ಅಂದರೆ ಬೆಳಗಾವಿ ಯಾರಿಗೆ ಸೇರಬೇಕು ಅನ್ನೋದು? MES ನ ಮುಖ್ಯ ಉದ್ದೇಶ ಎನ್ನಪ್ಪ ಅಂದರೆ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವುದು.

ಮೂಲತಃ ಬೆಳಗಾವಿಯಲ್ಲಿ ಕನ್ನಡ ಮಾತನಾಡುವವರು  ತುಂಬಾ ಜನರಿದ್ದರು. ಅದನ್ನು  ಕಂಡು ಮಹಾರಾಷ್ಟ್ರ ಏಕೀಕರಣ ಸಮಿತಿ ಒಂದು 1945 ರಲ್ಲಿ ಪ್ರಾರಂಭ ವಾಯಿತು. ಯಾಕೆಂದರೆ ಬೆಳಗಾವಿ ಮೊದಲು ಮುಂಬೈ ಕರ್ನಾಟಕ ಭಾಗಕ್ಕೆ ಸೇರಿದ್ದು. ಆಮೇಲೆ ಈ ಒಂದು ಭಾಗದಲ್ಲಿ ಕನ್ನಡ ಮಾತನಾಡುವವರ  ಸಂಖ್ಯೆ ತುಂಬಾ ಇದ್ದಿದ್ದರಿಂದ ಇದನ್ನು ಕರ್ನಾಟಕಕ್ಕೆ (ಮೈಸೂರು) ಪ್ರಾಂತ್ಯಕ್ಕೆ ಸೇರಿಸಲಾಗಿತ್ತು. ಇದನ್ನು  ವಿರೋಧಿಸಿ ಪ್ರತಿ ಒಂದು ಕೆಲಸದಲ್ಲಿ MES ನ್ನು ಕರ್ನಾಟಕ ಪರ ಸಂಘಗಳು ವಿರೊಧಿಸುತ್ತವೆ.

ಹಾಗೆಯೆ ಕನ್ನಡ ಪರ ಸಂಘಗಳ ವಿರೋಧ ದಲ್ಲಿ MES  ನಿಂತಿರುತ್ತದೆ. ಈಗ MES  ನ ಮುಖಂಡನ ಮುಖಕ್ಕೆ ಕರ್ನಾಟಕ ನವ ನಿರ್ಮಾಣ ಪಡೆಯ ಕಾರ್ಯ ಕರ್ತರು ದೀಪಕ್ ಧಳ್ವಿ ಯವರ ಮುಖಕ್ಕೆ ಮಸಿ ಹಾಕಿದ್ದಾರೆ. ಯಾಕೆಂದರೆ ಇವರು ಕೋವಿಡ್ ನ ವ್ಯಾಕ್ಸೀನ್ ಡೀಪೊ ಬಳಿಗೆ ಬಂದು ಬೆಳಗಾವಿ ಪೊಲೀಸರ ಪರ್ಮಿಷನ್ ಇಲ್ಲದೆ ತಮ್ಮ ಒಂದು ಪ್ರಚಾರ ವನ್ನು ಮಾಡುತ್ತಿದ್ದರೆಂದು ಕನ್ನಡ ಪರ ಸಂಘ ಹೇಳಿತು. ಕಾರಣ ಕರ್ನಾಟಕ ನವನಿರ್ಮಾಣ ಪಡೆ ಇದನ್ನು  ವಿರೋಧಿಸಿ MES  ನಾಯಕರ ಮುಖದ ಮೇಲೆ ಮಸಿ ಹಚ್ಚಿ ವಿರೋಧ ವ್ಯಕ್ತ ಪಡಿಸಿದರು .

ಇದಕ್ಕೆ ಪ್ರತಿಯುತ್ತರ ನೀಡಿದ MES ನಾಯಕರು ನಾಳೆ ಬೆಳಗಾವಿಬಂದ್ ಗೆ ಕರೆ ನೀಡಿದ್ದಾರೆ ಮತ್ತು ಈ ಒಂದು ವಿಷಯ ವನ್ನು ರಾಷ್ಟ್ರ ವಿಚಾರವನ್ನಾಗಿ ಎಲ್ಲ ಕಡೆ ಹರಡಿಸುತ್ತೇವೆ ಯಂದು ಪತ್ರಿಕಾ ಘೋಷ್ಠಿಯಲ್ಲಿ ತಿಳಿಸಿದ್ದಾರೆ .

ಇನ್ನಷ್ಟು ಓದಿರಿ:

ಓಮೈಕ್ರೊನ್ ನ ಹಾವಳಿ! ಮತ್ತೆ ಹೆಚ್ಚಾಗುತ್ತಿದೆ ಓಮೈಕ್ರೊನ್ ವೈರೆಂಟ್ 'ನ' ಸಂಖ್ಯೆ!

ಚಿನ್ನ ಚಿನ್ನ!ಚಿನ್ನದ ಬೆಲೆ ಎಷ್ಟು ಎಂಬುದು ಗೊತ್ತಾ? ಚಿನ್ನ ಎಷ್ಟು ಏರಿದೆ ಎಷ್ಟು ಇಳಿದಿದೆ ಮತ್ತು 10 ಗ್ರಾಂ ಚಿನ್ನದ ಬೆಲೆ ಎಷ್ಟು?

ಹೊಸ ಸುದ್ಧಿ ಬಿಸಿ ಸುದ್ಧಿ ಗರ್ಮಾ ಗರಂ ಸುದ್ಧಿ! ತಂಪಾದ ವಾತಾವರಣದಲ್ಲಿ ಬೆಚ್ಚನೆಯ ಗಾಡಿಯ ಸುದ್ಧಿ!