News

ಇರ್ಫಾನ್ ಖಾನ್ ನಿಧನ ಬಾಲಿವುಡ್ ಚಿತ್ರರಂಗಕ್ಕೆ ತುಂಬಲಾರದ ನಷ್ಟ

29 April, 2020 8:07 PM IST By:

ಬಾಲಿವುಡ್ ಖ್ಯಾತ ನಟ ಇರ್ಫಾನ್ ಖಾನ್ (53) ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ. ಖಾನ್ ನಿಧನ ಬಾಲಿವುಡ್ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದು ಗಣ್ಯರು ಕಂಬನಿ ಮಿಡಿದಿದ್ದಾರೆ.
ನ್ಯೂರೋಎಂಡ್ರೋಕ್ರೈನ್ ಟ್ಯೂಮರ್ ಎಂಬ ಅಪರೂಪದ ಕ್ಯಾನ್ಸರ್‍ನಿಂದ ಬಳಲಿದ್ದ ಇರ್ಫಾನ್ ಖಾನ್ ವಿದೇಶದಲ್ಲಿ ಚಿಕಿತ್ಸೆ ಪಡೆದಿದ್ದರು.
ದೊಡ್ಡ ಕರುಳು ಸಮಸ್ಯೆಯಿಂದ ಬಳಲುತ್ತಿದ್ದ ಇರ್ಫಾನ್ ಖಾನ್ ಅವರನ್ನು ಮಂಗಳವಾರ ಮಧ್ಯಾಹ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇತ್ತೀಚೆಗೆ ಇರ್ಫಾನ್ ತಾಯಿ ಸಯೀದಾ ಬೇಗಂ(95ವರ್ಷ) ಅವರು ವಯೋಸಹಜ ಖಾಯಿಲೆಯಿಂದ ರಾಜಸ್ಥಾನದ ಜೈಪುರದಲ್ಲಿ ನಿಧನರಾಗಿದ್ದರು. ಆದರೆ ಪುತ್ರ ಇರ್ಫಾನ್ ಗೆ ಲಾಕ್ ಡೌನ್‍ನಿಂದಾ ಮುಂಬೈನಲ್ಲಿ ಇದ್ದಿದ್ದು, ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ.
ಇರ್ಫಾನ್ ಪತ್ನಿ ಸುತಪಾ ಸಿಕದರ್ ಹಾಗೂ ಪುತ್ರರಾದ ಬಬಿಲ್ ಮತ್ತು ಆಯಾ ಖಾನ್ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 2018 ರಲ್ಲಿ ಅವರು ನ್ಯೂರೋಎಂಡೋಕ್ರೈನ್ ಟ್ಯೂಮರ್ ಇರುವುದಾಗಿ ಬಹಿರಂಗ ಪಡಿಸಿದ್ದರು.
ವಿಶ್ವಮಟ್ಟದ ಸಿನೆಮಾಗಳ ಪೈಕಿ ಇರ್ಫಾನ್ ಸ್ಲಂಡಾಗ್ ಮಿಲಿಯೇನರ್, ದಿ. ಲೈಫ್ ಆಫ್ ಪೈ, ದಿ ಮೈಟಿ ಹಾರ್ಟ್ ಹಾಗೂ ಜುರಾಸಿಕ್ ವರ್ಲ್ಡ್ ಚಿತ್ರಗಳ ಮೂಲಕ ಗುರುತಿಸಿಕೊಂಡಿದ್ದರು.
ಬಾಲಿವುಡ್‍ನ ವಾರಿಯರ್, ಮಕ್ಬೂಲ್, ಹಾಸಿಲ್, ಪಾನ್ ಸಿಂಗ್ ತೋಮರ್, ರೋಗ್, ನೇಮ್ ಸೇಕ್, ಸೇರಿದಂತೆ ಹÀಲವು ಚಿತ್ರಗಳ ಮೂಲಕ ಇರ್ಫಾನ್ ಚಿತ್ರಪ್ರೇಮಿಗಳ ಮನಗೆದ್ದಿದ್ದರು.
ಇರ್ಫಾನ್ ಅವರಲ್ಲಿನ ಕ್ರಿಯಾಶೀಲತೆ, ಕಲೆಯನ್ನು ಗುರುತಿಸಿದ ಮೀರಾ ನಾಯರ್ ಸಲಾ ಬಾಂಬೆ ಚಿತ್ರಕ್ಕೆ 1988 ರಲ್ಲಿ ಆಯ್ಕೆ ಮಾಡಿದರು. ಸಿನಿಮಾದ ಎಡಿಟಿಂಗ್ ವೇಳೆ ಅವರ ಪಾತ್ರಕ್ಕೆ ಕತ್ತರಿ ಬಿದ್ದಿತ್ತು. 2006 ರಲ್ಲಿ ದಿ ನೇಮ್‍ಸೇಕ್ ಸಿನೆಮಾದಲ್ಲಿ ಮತ್ತೆ ಇರ್ಫಾನ್ ಆಯ್ಕೆ ಮಾಡಿಕೊಂಡರು.
ಲಂಡನ್ನಲ್ಲಿ ಕ್ಯಾನ್ಸರ್‍ಗೆ ಚಿಕಿತ್ಸೆ ಪಡೆದು ಭಾರತಕ್ಕೆ ಮರಳಿದ್ದ ಇರ್ಫಾನ್, 2019ರ ಫೆಬ್ರುವರಿಯಲ್ಲಿ 'ಅಂಗ್ರೇಜಿ ಮೀಡಿಯಂ' ಚಿತ್ರದ ಶೂಟಿಂಗ್‍ನಲ್ಲಿ ಭಾಗಿಯಾಗಿದ್ದರು. ನಂತರ ಮತ್ತೆ ಲಂಡನ್‍ಗೆ ಚಿಕಿತ್ಸೆಗಾಗಿ ಹಿಂದುರಿದ್ದರು. ಶಸ್ತ್ರ ಚಿಕಿತ್ಸೆ ಮತ್ತು ಇತರೆ ಚಿಕಿತ್ಸೆಗಳ ಬಳಿಕೆ ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ ಭಾರತಕ್ಕೆ ವಾಪಸ್ ಆದರು. ಭಾರತದಲ್ಲಿ ಲಾಕ್ಡೌನ್ ಘೋಷಣೆಯಾಗುವ ಕೆಲವೇ ದಿನಗಳ ಹಿಂದೆ ಅಂಗ್ರೇಜಿ ಮೀಡಿಯಂ ಚಿತ್ರ ಬಿಡುಗಡೆಯಾಗಿತ್ತು. ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಸಿನಿಮಾಗಳ ಪೈಕಿ ಅದೇ ಅವರ ಕೊನೆಯ ಚಿತ್ರ.

ಅಕಾಡೆಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಚಿತ್ರ 'ಸಲಾಂ ಬಾಂಬೆ!' ಮೂಲಕ ಚಿತ್ರರಂಗ ಪ್ರವೇಶಿಸಿದ ಇರ್ಫಾನ್ ಖಾನ್ ಅಭಿನಯನವನ್ನು ನೆಚ್ಚಿಕೊಳ್ಳದ ಸಿನಿಮಾ ಪ್ರಿಯರು ಅತ್ಯಲ್ಪ. ಅವರ ಅಭಿನಯದ ಕೆಲವು ಪ್ರಮುಖ ಬಾಲಿವುಡ್ ಸಿನಿಮಾಗಳು ಮಕ್ಬೂಲ್ (2004), ಪಾನ್ ಸಿಂಗ್ ತೋಮರ್ (2011), ದಿ ಲಂಚ್ ಬಾಕ್ಸ್ (2013), ಹೈದರ್ (2014), ಗುಂಡೇ (2014), ಪಿಕು (2015), ತಲ್ವಾರ್ (2015) ಹಾಗೂ ಹಿಂದಿ ಮೀಡಿಯಮ್ (2017).