News

ಒಂದು ಕರೆ ಮಾಡಿದರೆ ಸಾಕು, ಮನೆಬಾಗಿಲಿಗೆ ಬ್ಯಾಂಕ್ ಬರಲಿದೆ

05 November, 2020 1:32 PM IST By:

ಕೊರೋನಾ ಸಂಕಷ್ಟದ ಇಂದಿನ ಪರಿಸ್ಥಿತಿಯಲ್ಲಿ ನಿಮಗೆ ಮನೆಯಿಂದ ಹೊರಗೆ ಹೋಗಕ್ಕಾಗುತ್ತಿಲ್ಲವೆ?... ಪಟ್ಟಣ, ನಗರಗಳಿಗೆ ಹೋಗಿ ನಿಮ್ಮ ಖಾತೆಯಲ್ಲಿರುವ ಹಣ ಹೇಗೆ ಪಡೆಯಲಿ ಎಂಬ ಚಿಂತೆ ಮಾಡುವ ಅವಶ್ಯಕತೆಯಿಲ್ಲ. ನಿಮ್ಮ ಮನೆ ಬಾಗಿಲಿಗೆ ಅಂಚೆಯಣ್ಣ ಬಂದು ಬ್ಯಾಂಕ್ ವ್ಯವಹಾರ ಮಾಡಿಕೊಡುತ್ತಾರೆ. ಅಂಚೆಯಣ್ಣನಿಗೆ ಒಂದು ಕರೆ ಮಾಡಿದರೆ ಸಾಕು, ನಿಮ್ಮ ಮನೆಬಾಗಿಲಿಗೆ ಬಂದು ಬ್ಯಾಂಕ್ ವ್ಯವಹಾರ ಮಾಡಿಕೊಡುತ್ತಾರೆ. ಅದು ಹೇಗೆ ಸಾಧ್ಯ ಎಂದುಕೊಂಡಿದ್ದೀರಾ ಇಲ್ಲಿದೆ ಅದಕ್ಕೆ ಸಂಪೂರ್ಣ ಮಾಹಿತಿ....

ಕಂಪ್ಯೂಟರ್, ಇಂಟರ್ನೆಟ್, ಮೊಬೈಲ್, ಡಿಜಿಟಲ್ ಕಾಲಕ್ಕೆ ತಕ್ಕಂತೆ ಮನೆ ಬಾಗಿಲಿಗೆ ಅಂಚೆ, ಆನ್ ಲೈನ್ ಬ್ಯಾಂಕಿಂಗ್ ಸೇವೆ ಸೇರಿದಂತೆ ಗ್ರಾಹಕರ ಎಲ್ಲಾ ಅಗತ್ಯತೆಯನ್ನು ಪೂರೈಸುವತ್ತ ಬೆರಳು ತುದಿಯಲ್ಲೇ ಅಂಚೆ ಕಚೇರಿಯು ಆಧುನಿಕತೆಯತ್ತ ದಾಪುಗಾಲಿಟ್ಟಿದೆ.

ಗ್ರಾಮೀಣ ಪ್ರದೇಶದ ಜನರು ಬ್ಯಾಕ್ ವ್ಯವಹಾರಕ್ಕೆ ಬಹಳ ದೂರದ ವರೆಗೆ ಕ್ರಮಿಸಬೇಕಾಗುತ್ತದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಮತ್ತು ಇತರೆ ಬ್ಯಾಂಕ್‍ಗಳಲ್ಲಿ ಮಾಡುವ ಹಣ ಹಿಂಪಡೆತ, ಬ್ಯಾಲೆನ್ಸ್ ವಿಚಾರಣೆಗಾಗಿ ಗ್ರಾಮೀಣ ಅಂಚೆ ಕಚೇರಿ ಅಥವಾ ಅಂಚೆ ಸೇವಕರಿಗೆ ತಿಳಿಸಿದಲ್ಲಿ ಮನೆಗೆ ಬಂದು ಹಣ ಪೂರೈಸಲಿದ್ದಾರೆ. Indian post Payments Bank (Aapka Bank Aapke dwaar) ಐಪಿಪಿಬಿ ಅಡಿಯಲ್ಲಿ ಅಂಚೆ ಇಲಾಖೆಯು ಈ ಹೊಸ ಹೆಜ್ಜಿ ಇಟ್ಟಿದೆ.

ಉದಾಹರಣೆ ನಿಮ್ಮ ಊರಿನಲ್ಲಿ ಹತ್ತಾರು ಜನರಿಗೆ ಹಣ ಬೇಕಾಗಿರುತ್ತದೆ. ಆಗ ನೀವೆಲ್ಲಾ ದೂರದ ನಗರ ಪ್ರದೇಶಕ್ಕೆ ಹೋಗುವ ಅವಶ್ಯಕತೆಯಿಲ್ಲ. ನಿಮ್ಮ ಊರಿನ ಪೋಸ್ಟ್ ಮ್ಯಾನ್ ಗೆ ಒಂದು ಕರೆ ಮಾಡಿದರೆ ಸಾಕು, ನಿಮಗೆ ಇಂತಿಷ್ಟು ಹಣ ಬೇಕೆಂದು ಹೇಳಿದರೆ ಸಾಕು ಅವರು ನಿಮ್ಮೂರಿಗೆ ನಿಮ್ಮ ಮನೆಬಾಗಿಲಗೆ ಬಂದು ಬ್ಯಾಂಕ್ ವ್ಯವಹಾರ ಮಾಡಿಕೊಡುತ್ತಾರೆ.

ಹಣದ ವ್ಯವಹಾರಗಳಿಗೆ ಬ್ಯಾಂಕಿನ ನಂಬರ, ಮೊಬೈಲ್ ನಂಬರ, ಮತ್ತು ಖಾತೆದಾರರ ಫಿಂಗರ ಪ್ರಿಂಟ್ ಕೊಡಬೇಕು. ಇದರ ಖಚಿತತೆಯನ್ನು ಆಧಾರ ಮೂಲಕ ಪ್ರಮಾಣೀಕರಿಸಿ ನಂತರ ಗ್ರಾಹಕರು ಸೂಚಿಸಿದ ನಗದನ್ನು 5  ಸಾವಿರ ರೂ.ಗಳವರೆಗೆ ನಿಮ್ಮ ಯಾವುದೇ ಖಾತೆಯಿರುವ ರಾಷ್ಟ್ರೀಕೃತ ಬ್ಯಾಂಕಿನಿಂದ ನಗದನ್ನು ಪಡೆಯಬಹುದಾಗಿದೆ. ಗ್ರಾಮೀಣ ಜನ ಎಟಿಎಂ, ಬ್ಯಾಂಕುಗಳಿಗೆ ತಿರುಗಾಡದೇ ಹತ್ತಿರ ಪೋಸ್ಟ ಆಫೀಸ್, ಪೋಸ್ಟಮನ್‍ಗೆ ಪೋನ್ ಮೂಲಕ ಮಾಹಿತಿ ನೀಡಿ ಸೌಲಭ್ಯವನ್ನು ಪಡೆಯಬಹುದು.

ಗ್ರಾಹಕರ ಮನೆ ಬಾಗಿಲಿಗೆ ಸೇವೆಯನ್ನು ಒದಗಿಸಿಕೊಡಲು ಎರಡು ಲಕ್ಷದಷ್ಟು ಪೋಸ್ಟ್‌ಮ್ಯಾನ್‌ಗಳು ಸೇವೆ ಸಲ್ಲಿಸುತ್ತಿದ್ದಾರೆ. ಇದೇ ಐಪಿಪಿಬಿ ತಂತ್ರಜ್ಞಾನದ ಮೂಲಕ ಜನರು ಈಗ ವಿದ್ಯುತ್, ನೀರು, ಡಿಟಿಎಚ್ ಬಿಲ್ ಪಾವತಿ ಜೊತೆಗೆ ಹಣ ವರ್ಗಾವಣೆ ಮಾಡಬಹುದು

IPPB Mobile App ಸಹ ಡೌನ್ಲೋಡ್ ಮಾಡಿಕೊಂಡು ಹಣ ವರ್ಗಾವಣೆ ಮಾಡಬಹುದು. ಗೂಗಲ್ ಪ್ಲೇ ಸ್ಟೋರ್ ನಲ್ಲಿ IPPB Mobile App ಟೈಪ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ 08472-263800, 08472-263820, ವ್ಯಾಟ್ಸ್ ಅಪ ನಂ. 9448291073. ಗೆ ಸಂಪರ್ಕಿಸಬಹುದು.

-----

ಹಳ್ಳಿಗಳಲ್ಲಿ ವಯೋವೃದ್ಧರು, ಮಹಿಳೆಯರು ಇರುತ್ತಾರೆ. ಅವರಿಗೆ ನಗರ ಪ್ರದೇಶಗಳಿಗೆ ಹೋಗಿ ಬ್ಯಾಂಕ್ ವ್ಯವಹಾರ ಮಾಡುವುದಕ್ಕಾಗುವುದಿಲ್ಲ. ಇನ್ನೊಬ್ಬರ ಸಹಾಯ ಪಡೆಯಲು ಬೇರೆಯವರಿಗೆ ಕರೆದುಕೊಂಡು ಹೋಗಬೇಕಾಗುತ್ತದೆ. ಈಗ ಅನಕ್ಷರಸ್ಥರು ಚಿಂತೆ ಮಾಡುವ ಅವಶ್ಯಕತೆಯಿಲ್ಲ. ಪೋಸ್ಟ್ ಮ್ಯಾನ್ ಗೆ ಒಂದು ಕರೆ ಮಾಡಿದರೆ ಸಾಕು ಮನೆ ಬಾಗಿಲಿಗೆ ಬಂದು ಬ್ಯಾಂಕ್ ವ್ಯವಹಾರ ಮಾಡಿಕೊಡುತ್ತಾರೆ. ನಗರಗಳಲ್ಲಿ ಕೆಲವು ಸಲ ಎಟಿಎಂ ಸಮಸ್ಯೆಯಾಗಿರುತ್ತದೆ. ಬ್ಯಾಂಕಿನಲ್ಲಿ ಸರದಿಯಲ್ಲಿ ನಿಲ್ಲಬೇಕಾಗುತ್ತದೆ. ಅಷ್ಟೇ ಅಲ್ಲ ಹೋಗಿ ಬರಲು ಹಣವೂ ಖರ್ಚಾಗುತ್ತದೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಸಾಮಾನ್ಯ ಜನರು, ವಯೋವೃದ್ಧರು, ಮಹಿಳೆಯರು, ಅನಕ್ಷಕರಸ್ಥರು, ಹಾಗೂ ಅನಾವಶ್ಯಕ ಹಣ ಖರ್ಚು ಆಗುವುದನ್ನು ತಪ್ಪಿಸಲು ಮನೆ ಬಾಗಿಲಿಗೆ ಬ್ಯಾಂಕ್ Aapka Bank, Appke dwaarವ್ಯವಸ್ಥೆ ಜಾರಿಗೆ ತಂದಿದೆ.

ವಿಜಯಕುಮಾರ ಬಬಲಾದ, ಡಿಓಪಿಎಲ್ಐ ಅಧಿಕಾರಿ