News

IPL ಐಪಿಎಲ್‌: ಇಂದು ಆರ್‌ಸಿಬಿ- ಕೆಕೆಆರ್‌ ಮುಖಾಮುಖಿ

06 April, 2023 3:22 PM IST By: Hitesh
IPL: RCB vs KKR today

ರೈತರಿಗೆ ಪ್ರಮುಖ ಕೃಷಿ ಸುದ್ದಿಗಳನ್ನು ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಅಭಿವೃದ್ಧಿ ಪರಿಚಯಿಸಿದ್ದು, ಇಂದಿನ ಪ್ರಮುಖ ಸುದ್ದಿಗಳು ಇಲ್ಲಿವೆ.

1. ಕರ್ನಾಟಕದ ಹಳ್ಳಿಗಳಿಗೆ ಆರೋಗ್ಯ ವಿಮೆ ಘೋಷಿಸಿದ ಮಹಾರಾಷ್ಟ್ರ  
2. ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ಆರೋಗ್ಯ ವಿಮೆ: ಬೊಮ್ಮಾಯಿ ಎಚ್ಚರಿಕೆ
3. ಮಹಾರಾಷ್ಟ್ರದ ನಡೆ ಕನ್ನಡಿಗರು ಸಹಿಸುವುದಿಲ್ಲ: ಸಿದ್ದರಾಮಯ್ಯ
4. ಕರ್ನಾಟಕ ಚುನಾವಣೆ: 8.37 ಕೋಟಿ ರೂ. ಒಂದೇ ದಿನದಲ್ಲಿ ವಶಕ್ಕೆ
5. ಏಪ್ರಿಲ್ 8ಕ್ಕೆ ರಾಷ್ಟ್ರೀಯ ಡೈರಿ ಮೇಳ ಆಯೋಜನೆ
6. ಪಿಂಚಣಿಗಾಗಿ 15 ವರ್ಷ ದೃಷ್ಟಿದೋಷವಿರುವಂತೆ ನಟಿಸಿದ ಮಹಿಳೆ!
7.  ಐಪಿಎಲ್‌: ಇಂದು ಆರ್‌ಸಿಬಿ- ಕೆಕೆಆರ್‌ ಮುಖಾಮುಖಿ 

--------------
1. ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮತ್ತೆ ತರಕಕ್ಕೇರಿದ್ದು, ಕರ್ನಾಟಕ ಗಡಿಯೊಳಗಿರುವ 865 ಹಳ್ಳಿಗಳಿಗೂ ಅನ್ವಯ ಆಗುವಂತೆ

ಮಹಾರಾಷ್ಟ್ರ ಸರ್ಕಾರವು ಮಹಾತ್ಮ ಜ್ಯೋತಿರಾವ್‌ ಫುಲೆ ಜನಾರೋಗ್ಯ ಯೋಜನೆ ಜಾರಿ ಮಾಡಿ,  ಆದೇಶ ಹೊರಡಿಸಿದೆ.

ಈಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗಡಿ ವಿವಾದ ಇತ್ಯರ್ಥಗೊಳ್ಳುವ ವರೆಗೆ ಎರಡೂ

ರಾಜ್ಯಗಳು ವಿವಾದವನ್ನು ಕೆದಕಬಾರದು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ನಿರ್ದೇಶನ ನೀಡಿದ್ದರು. ಅಲ್ಲದೇ ಎರಡೂ ರಾಜ್ಯಗಳ ಸದಸ್ಯರನ್ನೊಳಗೊಂಡ ಸಲಹಾ ಸಮಿತಿ ರಚಿಸಿದ್ದರು.
-------------- 

--------------
2.  ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂ ಕೋರ್ಟ್‌‌ನಲ್ಲಿದೆ. ಆದರೆ, ಮಹಾರಾಷ್ಟ್ರ ಸರ್ಕಾರ ಎರಡೂ ರಾಜ್ಯಗಳ ಗಡಿ ಭಾಗದಲ್ಲಿ ಗೊಂದಲ ಸೃಷ್ಟಿಸುತ್ತಿದೆ.

ಕರ್ನಾಟಕದ ಗಡಿಯಲ್ಲಿರುವ ಕೆಲವರಿಗೆ ವಿಮೆ ನೀಡುವ ಆದೇಶ  ಮಾಡಿರುವುದು ಉದ್ಧಟತನದ ಪರಮಾವಧಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕರ್ನಾಟಕದ 865 ಗ್ರಾಮಗಳ ಜನತೆಗೆ ಆರೋಗ್ಯ ವಿಮೆ ಯೋಜನೆ ಜಾರಿಗೆ ಮುಂದಾಗಿರುವುದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಕೆಲಸ.

ಮಹಾರಾಷ್ಟ್ರ ಸರ್ಕಾರ ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕು.

ಇದೇ ರೀತಿ ಉದ್ದಟತನ ಮುಂದುವರೆಸಿದರೆ ಕರ್ನಾಟಕ ಸರ್ಕಾರವೂ ಕೂಡ ಮಹಾರಾಷ್ಟ್ರ

ಗಡಿಯಲ್ಲಿರುವ ಕನ್ನಡಿಗರ ರಕ್ಷಣೆಗೆ ಇದೇ ರೀತಿಯ ವಿಮೆ ಜಾರಿ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.  
--------------- 

ಕರ್ನಾಟಕ - ಮಹಾರಾಷ್ಟ್ರ

---------------
3. ಮಹಾರಾಷ್ಟ್ರದ ನಡೆಗೆ ರಾಜ್ಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ವಿರೋಧ ಪಕ್ಷದ ನಾಯಕರು ಹಾಗೂ ಕನ್ನಡಪರ ಸಂಘಟನೆಗಳು ಮಹಾರಾಷ್ಟ್ರದ ನಡೆಯನ್ನು ತೀವ್ರವಾಗಿ ಖಂಡಿಸಿವೆ.

ಕನ್ನಡಿಗರ ತೀವ್ರ ವಿರೋಧದ ಹೊರತಾಗಿಯೂ ರಾಜ್ಯದ ಗಡಿಯೊಳಗಿರುವ 865 ಹಳ್ಳಿಗಳಿಗೆ ಆರೋಗ್ಯ ವಿಮೆ ಜಾರಿ ಮಾಡಿರುವ ಮಹಾರಾಷ್ಟ್ರ ಸರ್ಕಾರದ ಕ್ರಮ ಉದ್ಧಟತನದ್ದು.

ಇದನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಆದೇಶವನ್ನು ತಕ್ಷಣ ವಾಪಸ್ ಪಡೆಯದೆ ಇದ್ದರೆ ಪರಿಣಾಮ ನೆಟ್ಟಗಾಗದು ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.  
---------------
4. ರಾಜ್ಯದಲ್ಲಿ ಚುನಾವಣೆ ದಿನಾಂಕ ಸಮೀಪಿಸುತ್ತಿದ್ದಂತೆಯೇ ಅಕ್ರಮವಾಗಿ ಹಣ ಸಾಗಿಸುವ ಪ್ರರಣಗಳು ಹೆಚ್ಚಾಗುತ್ತಿವೆ.

ರಾಜ್ಯದಲ್ಲಿ ಚುನಾವಣಾ ಅಕ್ರಮ ತಡೆಯಲು ಸ್ಥಾಪಿಸಿರುವ ಜಾಗೃತ ದಳಗಳು ಮಂಗಳವಾರ ಒಂದೇ ದಿನ ರಾಜ್ಯದ ವಿವಿಧೆಡೆ

ಬರೋಬ್ಬರಿ 8.37 ಕೋಟಿ ಮೌಲ್ಯದ ನಗದು ಹಾಗೂ ವಿವಿಧ ಬೆಲೆ ಬಾಳುವ ಸ್ವತ್ತುಗಳನ್ನು ವಶಪಡಿಸಿಕೊಂಡಿವೆ.

ನಗದು, ಚಿನ್ನ, ಬೆಳ್ಳಿ ಹಾಗೂ ಮದ್ಯವನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ. 
---------------
5. ICAR-ರಾಷ್ಟ್ರೀಯ ಡೈರಿ ರಿಸರ್ಚ್ ಇನ್‌ಸ್ಟಿಟ್ಯೂಟ್ ಮೂರು ವರ್ಷಗಳ ನಂತರ ಏಪ್ರಿಲ್ 8ರಿಂದ 10 ರವರೆಗೆ ಮೂರು ದಿನಗಳ ವರೆಗೆ ತಾಂತ್ರಿಕ ಬೆಳವಣಿಗೆಗಳನ್ನು

ಪ್ರದರ್ಶಿಸಲು ಮತ್ತು ಹೈನುಗಾರರಲ್ಲಿ ಜಾಗೃತಿ ಮೂಡಿಸಲು ರಾಷ್ಟ್ರೀಯ ಡೈರಿ ಮೇಳವನ್ನು ಹಮ್ಮಿಕೊಂಡಿದೆ.

ಈ ಮೇಳದಲ್ಲಿ ಹಾಲು ಸರಬರಾಜು, ತಳಿ ಸ್ಪರ್ಧೆ ಹಾಗೂ ಉದ್ಯಮದ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ವಿವಿಧ ವಿಚಾರಗೋಷ್ಠಿ ನಡೆಯಲಿದೆ.

ರಾಷ್ಟ್ರೀಯ ಡೈರಿ ಮೇಳವನ್ನು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಉದ್ಘಾಟಿಸಲಿದ್ದಾರೆ.  
--------------- 

RCB VS KKR

---------------
6. ಪಿಂಚಣಿಗಾಗಿ ಬರೋಬ್ಬರಿ 15 ವರ್ಷ ದೃಷ್ಟಿದೋಷ ಇರುವಂತೆ ನಟಿಸಿದ ಮಹಿಳೆ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾಳೆ.

ಇಂತಹದೊಂದು ಘಟನೆ  ಇಟಲಿಯಲ್ಲಿ ನಡೆದಿದೆ. ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಮಹಿಳೆ ದೃಷ್ಟಿದೋಷ ಇರುವಂತೆ ಬರೋಬ್ಬರಿ 15 ವರ್ಷ ನಟಿಸಿದ್ದಾಳೆ.

ತನಗೆ ಕಣ್ಣು ಕಾಣುವುದಿಲ್ಲ ಎಂದು ಹೇಳಿ ವೈದ್ಯರನ್ನು ಸಂಪರ್ಕಿಸಿ ಪ್ರಮಾಣಪತ್ರ ಪಡೆದಿದ್ದು, ಸಾಮಾಜಿಕ ಭದ್ರತೆ ಅಡಿಯಲ್ಲಿ 15 ವರ್ಷದಲ್ಲಿ 1.8 ಕೋಟಿ ರೂ ನಿರಂತರವಾಗಿ ಪಿಂಚಣಿ ಪಡೆದಿದ್ದಾಳೆ.

ಏತನ್ಮಧ್ಯೆ  ಆಕೆ  ಸೆಲ್ ಫೋನ್ ಮೂಲಕ ಸ್ಕ್ರೋಲ್ ಮಾಡುವುದನ್ನು ಮತ್ತು ಫೈಲ್‌ಗಳಿಗೆ ಸಹಿ ಹಾಕುವುದನ್ನು ಅಧಿಕಾರಿಯೊಬ್ಬರು ಗಮನಿಸಿದ್ದು, ಈ ಪ್ರಕರಣ ಬೆಳಕಿಗೆ ಬಂದಿದೆ.
---------------
7. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ಗುರುವಾರ ರಾತ್ರಿ 7.30ಕ್ಕೆ ಈಡನ್ ಗಾರ್ಡನ್‌ಲ್ಲಿ ಕಣಕ್ಕೆ ಇಳಿಯಲಿದೆ.

ಆರ್‌ಸಿಬಿ ಫಫ್ ಡುಪ್ಲೆಸಿ ನಾಯಕತ್ವದಲ್ಲಿ ಮೊದಲ ಪಂದ್ಯವನ್ನು ಗೆದಿದ್ದು, ಈ ಪಂದ್ಯ ಕುತೂಹಲ ಮೂಡಿಸಿದೆ.

ಇನ್ನು ಕೋಲ್ಕತ್ತ ತಂಡವು ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು ಸೋಲನುಭವಿಸಿತ್ತು.

ಬಾಲಿವುಡ್ ನಟ ಶಾರೂಕ್ ಖಾನ್ ಮಾಲೀಕತ್ವದ ಕೆಕೆಆರ್ ಸುದೀರ್ಘ ನಾಲ್ಕು ವರ್ಷಗಳ ನಂತರ ಈಡನ್‌ ಗಾರ್ಡನ್‌ನಲ್ಲಿ ಐಪಿಎಲ್ ಪಂದ್ಯ ಆಡಲಿದ್ದು,

ಭಾರೀ ಸಂಖ್ಯೆಯಲ್ಲಿ ಜನ ಸೇರುವ ಸಾಧ್ಯತೆ ಇದೆ.  
---------------
8. ಐತಿಹಾಸಿಕ ಬೆಂಗಳೂರು ಕರಗ ಶಕ್ತ್ಯೋತ್ಸವವು ಗುರುವಾರ ಮಧ್ಯರಾತ್ರಿ ಅದ್ಧೂರಿಯಾಗಿ ನಡೆಯಲಿದೆ.

ಗುರುವಾರ ಮಧ್ಯರಾತ್ರಿ ತಿಗಳರಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಕರಗ ಮೆರವಣಿಗೆ ಆರಂಭವಾಗಲಿದೆ.

ಹೂವಿನ ಕರಗವನ್ನು ಈ ಬಾರಿಯೂ ತಿಗಳ ಸಮುದಾಯದ ಅರ್ಚಕ ವಿ.ಜ್ಞಾನೇಂದ್ರ ಹೊರಲಿದ್ದಾರೆ.

ಐತಿಹಾಸಿಕ ಕರಗ ಮಹೋತ್ಸವಕ್ಕೆ ಲಕ್ಷಾಂತರ ಜನರು ಸಾಕ್ಷಿಯಾಗಲಿದ್ದಾರೆ.
---------------
9. ಈಚೆಗೆ ಜನಗಣತಿಗೂ ಆಧಾರ್‌ ಬಳಕೆ ಮಾಡುವ ಬಗ್ಗೆ ಚರ್ಚೆ ನಡೆದಿತ್ತು.

ಇದೀಗ ಐಟಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಬುಧವಾರ ಲೋಕಸಭೆಗೆ ಉತ್ತರ ನೀಡಿದ್ದು, ಜನಗಣತಿಗೆ ಆಧಾರ್ ಡೇಟಾವನ್ನು ಬಳಸುವ ಯಾವುದೇ ಚಿಂತನೆ ಸರ್ಕಾರದ ಮುಂದೆ ಇಲ್ಲ ಎಂದಿದ್ದಾರೆ.

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಪ್ರಕಾರ ಈ ವರ್ಷ ಫೆಬ್ರವರಿ ಅಂತ್ಯದವರೆಗೆ 136 ಕೋಟಿಗೂ ಹೆಚ್ಚು ಆಧಾರ್ ಸಂಖ್ಯೆಗಳನ್ನು ನೀಡಲಾಗಿದೆ.
---------------