ಕ್ರೀಡಾ ಪ್ರೇಮಿಗಳಿಗೆ ಹಬ್ಬ, ದೇಸಿ ಆಟಗಾರರಿಗೆ ಭಾರತ ತಂಡದಲ್ಲಿ ಅವಕಾಶ ಪಡೆಯಲು ಒಂದು ಒಳ್ಳೆಯ ಅವಕಾಶ, ಮನೋರಂಜನೆ, ಹಾಗೂ ಇನ್ನಿತರ ಕಾರಣಗಳಿಂದಾಗಿ ಭಾರತದಲ್ಲಿ ಅಷ್ಟೇ ಅಲ್ಲ ಇಡೀ ವಿಶ್ವದಲ್ಲಿ ಹೆಸರುವಾಸಿಯಾಗಿರುವ ಐಪಿಎಲ್- ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಹರಾಜು ಪ್ರಕ್ರಿಯೆ ಇನ್ನೇನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಆದರೆ ಯಾವ ತಂಡ ಯಾವ ಆಟಗಾರರನ್ನು ಉಳಿಸಿಕೊಂಡಿದೆ ಎಂಬುದರ ಪಟ್ಟಿ ಜನವರಿ 21ರಂದು ನಮಗೆಲ್ಲ ಸಿಗಲಿದೆ.
ಮಾಹಿತಿಗಳ ಪ್ರಕಾರ ಫೆಬ್ರವರಿ 11ರಂದು ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಜರುಗಲಿದೆ, ಆದರೆ ನಾಳೆ ಅಂದರೆ ಜನವರಿ 21ರಂದು 8 ಫ್ರಾಂಚೈಸಿಗಳು ಉಳಿಸಿಕೊಂಡು ಆಟಗಾರರ ಹಾಗೂ ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯನ್ನು ನೀಡಲು ಕೊನೆಯ ದಿನಾಂಕವಾಗಿದೆ.
ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಫೆಬ್ರವರಿ 11 ಅಥವಾ ಅದರ ಒಳಗಾಗಿಯೇ ಮುಗಿಯುವ ಸಾಧ್ಯತೆಗಳಿವೆ.ಐಪಿಎಲ್ ಹರಾಜು 2021 ರನ್ನು ಸ್ಟಾರ್ ಸ್ಪೋರ್ಟ್ಸ್ ಚಾನಲ್ ನಲ್ಲಿ ಲೈವ್ ಪ್ರಸಾರ ಮಾಡಲಾಗುವುದು.ಇನ್ನು ನೀವು ಉಡಿಸೆಪ್ಲಸ್ ಹಾಟ್ಸ್ಟಾರ್ ಪ್ರೀಮಿಯಂ ಶೋನಲ್ಲಿ ನೋಡಬಹುದು ಹಾಗೂ ಜಿಯೋ ಗ್ರಾಹಕರು ಕೂಡ ಇದನ್ನು ಉಚಿತವಾಗಿ ನೋಡಬಹುದು.
14ನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿಗಳು ಭಾರತದಲ್ಲಿ ನಡೆಯುತ್ತಿರುವ ಮತ್ತೊಮ್ಮೆ ವಿದೇಶದಲ್ಲಿ ನಡೆಯುತ್ತಿವೆ ಎಂಬುದು ಇನ್ನೂ ಕೂಡ ನಿರ್ಧಾರವಾಗಿಲ್ಲ, ಈ ಬಾರಿ ಮೆಗಾ ಹರಾಜು ಪ್ರಕ್ರಿಯೆ ಜರುಗುವುದಿಲ್ಲ ಕಿರು ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಮಾಹಿತಿ ಇದೆ. 2022ರ 15ನೇ ಆವೃತ್ತಿಯ ವೇಳೆಗೆ ಇನ್ನು ಎರಡು ತಂಡಗಳು ಸೇರಿಕೊಳ್ಳಲು ಅವಾಗ ಮೆಗಾ ಹರಾಜು ನಡೆಯುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.