News

ಬಿಜೆಪಿ ಮೇಲೆ ಕಾಂಗ್ರೆಸ್‌ನಿಂದ ತನಿಖಾ ಅಸ್ತ್ರ!

26 May, 2023 6:10 PM IST By: Hitesh
ಮುಖ್ಯಮಂತ್ರಿ ಸಿದ್ದರಾಮಯ್ಯ

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಅವಧಿಯಲ್ಲಿ ನಡೆದ ಕಾಮಗಾರಿಗಳ ಬಗ್ಗೆ ತನಿಖಾ ಅಸ್ತ್ರಕ್ಕೆ ಮುಂದಾಗಿದೆ.

ಈಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಅವಧಿಯಲ್ಲಿ ಕೈಗೊಂಡಿದ್ದ ಕಾಮಗಾರಿಗಳಿಗೆ ಬ್ರೇಕ್‌ ಹಾಕಿದ್ದರು.

ಇದೀಗ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ ಅವರು, ವಿವಿಧ ಇಲಾಖೆಗಳಿಂದ ಅನುಷ್ಠಾನಗೊಳ್ಳುತ್ತಿರುವ

ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಿ, ತನಿಖೆಯ ನಂತರವೇ ಪುನರಾರಂಭಿಸುವಂತೆ ನಿರ್ದೇಶನ ನೀಡಿದ್ದಾರೆ.

ಉದ್ದೇಶಿತ ಯೋಜನೆಗಳಿಗೆ ಅಂದಾಜು 20 ಸಾವಿರ ಕೋಟಿ ರೂ ಅಗತ್ಯವಿದೆ. ಅಲ್ಲದೇ ನಿಯಮ ಉಲ್ಲಂಘಿಸಿ ಟೆಂಡರ್ ಕರೆಯಲಾಗಿದೆ ಎನ್ನುವ ಆರೋಪ ಇದೆ. 
----------------------

ರಾಜ್ಯದ ವಿವಿಧೆಡೆ ಮುಂದುವರಿದ ಮಳೆ

ರಾಜ್ಯದಲ್ಲಿ ಮಳೆ ಮುಂದುವರಿದೆ. ಕಳೆದ 24 ಗಂಟೆಯ ಅವಧಿಯಲ್ಲಿ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ

ಹಾಗೂ ಕರಾವಳಿ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿರುವುದು ವರದಿ ಆಗಿದೆ.

ಇನ್ನು ಶುಕ್ರವಾರ ಹಾಗೂ ಶನಿವಾರ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ

ಒಂದೆರಡು ಕಡೆಗಳಲ್ಲಿ ಮಿಂಚುಗುಡುಗು ಸಹಿತ ಧಾರಾಕಾರ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.

ಅಲ್ಲದೇ ಒಂದೆರಡು ಕಡೆಗಳಲ್ಲಿ ಬಿರುಗಾಳಿ ಹಾಗೂ ಮಿಂಚು ಗುಡುಗು ಸಹಿತ ಮಳೆ ಆಗಲಿದೆ.

ಗಾಳಿಯ ವೇಗವು ಗಂಟೆಗೆ 30ರಿಂದ 40 ಕಿ.ಮೀ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

ಇನ್ನು ಗರಿಷ್ಠ ಉಷ್ಣಾಂಶವು ಕರಾವಳಿಯ ಕೆಲವು ಕಡೆಗಳಲ್ಲಿ ಮತ್ತು ಒಳನಾಡಿನ ಒಂದೆರಡು ಕಡೆಗಳಲ್ಲಿ

ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗುವ ಸಾಧ್ಯತೆ ಇದೆ.

----------------------

ಪತಿ- ಪತ್ನಿ ಇಬ್ಬರಿಗೂ ಸಿಗುತ್ತಾ ಪಿ.ಎಂ ಕಿಸಾನ್‌ ಹಣ!

ಒಂದೇ ಜಮೀನು ಪತಿ- ಪತ್ನಿ ಹೆಸರಿನಲ್ಲಿದ್ದರೆ, ಇಬ್ಬರಿಗೂ ಪ್ರತ್ಯೇಕವಾಗಿ ಪಿ.ಎಂ ಕಿಸಾನ್‌ ಸಿಗಲಿದೆಯೇ ಎನ್ನುವ ಬಗ್ಗೆ ಈಚೆಗೆ ಚರ್ಚೆ ನಡೆಯುತ್ತಿದೆ.

ಆದರೆ, ಸರ್ಕಾರದ ವಿವರಣೆ ಬೇರೆಯೇ ಇದೆ. ಪಿ.ಎಂ ಕಿಸಾನ್‌ ಯೋಜನೆಯಲ್ಲಿ

ಪತಿ-ಪತ್ನಿ ಇಬ್ಬರಿಗೂ ಹಣ ಸಿಗಲಿದೆಯೇ ಎಂದು ಸಾಕಷ್ಟು ಪ್ರಶ್ನೆಗಳು ಹರಿದಾಡುತ್ತಿವೆ.

ಆದರೆ, ರೈತ ಕಲ್ಯಾಣ ಇಲಾಖೆಯ ಪ್ರಕಾರ ಪತಿ-ಪತ್ನಿ ಇಬ್ಬರೂ ರೈತರಾದರೂ ಕುಟುಂಬದ ಒಬ್ಬರಿಗೆ ಮಾತ್ರ ಯೋಜನೆಯ ಹಣವನ್ನು ನೀಡಲಾಗುವುದು,

ಏಕೆಂದರೆ ಈ ಮೊತ್ತವು ಒಟ್ಟಾರೆಯಾಗಿ ರೈತನ ಕುಟುಂಬಕ್ಕೆ ಮೀಸಲಾಗಿದೆ. ಹಣವನ್ನು ಪಡೆಯಲು ಪತಿ ಅಥವಾ ಪತ್ನಿ  ಯೋಜನೆಗೆ ನೋಂದಾಯಿಸಿಕೊಳ್ಳಬಹುದು.

---------------------- 

ಭಾರತದ ನೂತನ ಸಂಸತ್‌ ಭವನ; ವಾಕ್ಸಮರ!

ದೇಶದ ನೂತನ ಸಂಸತ್‌ ಭವನವನ್ನು ಇದೇ 28ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಲಿದ್ದಾರೆ.

ಪ್ರಸ್ತುತ ಇರುವ ಭವನವು 96 ವರ್ಷ ಹಳೆಯದಾಗಿದೆ. ಈಗ ಇರುವ ಸಂಸತ್‌ ಭವನವನ್ನು 1927ರಲ್ಲಿ ನಿರ್ಮಾಣ ಮಾಡಲಾಗಿತ್ತು.

ಇತ್ತೀಚಿನ ವರ್ಷಗಳಲ್ಲಿ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಎಲ್ಲ ಸದಸ್ಯರು ಕುರುವುದು ಕಷ್ಟವಾಗುತ್ತಿತ್ತು.

ಅಲ್ಲದೇ ಅಧಿಕಾರಿಗಳು, ಸಿಬ್ಬಂದಿ ವರ್ಗಕ್ಕೆ ಜಾಗ ಸಾಲುತ್ತಿರಲಿಲ್ಲ. ಇನ್ನು 2026ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ಆಗಿ ಇನ್ನಷ್ಟು ಸದಸ್ಯರು ಹೆಚ್ಚಾಗುವ ಸಾಧ್ಯತೆ

ಇರುವುದರಿಂದ 2010ರಿಂದಲೇ ನೂತನ ಕಟ್ಟಡ ಸಂಸತ್‌ ರಚನೆಯ ಕೂಗು ಕೇಳಿಬಂದಿತ್ತು.

ಈ ಸಂಬಂಧ ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರು ಸಮಿತಿಯೊಂದನ್ನು  ರಚನೆ ಮಾಡಿದ್ದರು.

ಸಮಿತಿ ನೂತನ ಕಟ್ಟಡ ರಚನೆಗೆ ಶಿಫಾರಸ್ಸು ಮಾಡಿತ್ತು. 2020 ಡಿಸೆಂಬರ್ 10ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು

ನೂತನ ಸಂಸತ್ ಭವನ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದರು.

ಇದೀಗ ನೂತನ್‌ ಸಂಸತ್‌ ಭವನವನ್ನು ರಾಷ್ಟ್ರಪತಿ ದ್ರೌಪತಿ ಮುರ್ಮ ಅವರು ಉದ್ಘಾಟನೆ ಮಾಡಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿವೆ.

ಆದರೆ, ಕೇಂದ್ರ ಸರ್ಕಾರವು ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದ್ರೌಪತಿ ಮುರ್ಮ ಅವರನ್ನು ಆಹ್ವಾನಿಸಿಲ್ಲ

ಎಂದು ವಿರೋಧ ಪಕ್ಷಗಳು ವಾಗ್ದಾಳಿ ನಡೆಸಿವೆ. ಅಲ್ಲದೇ ಕಾಂಗ್ರೆಸ್ ಸೇರಿದಂತೆ ದೇಶದ ಒಟ್ಟು

19 ವಿರೋಧ ಪಕ್ಷಗಳು ಕಾರ್ಯಕ್ರಮದಲ್ಲಿ ಭಾಗವಹಿಸದೆ ಇರಲು ನಿರ್ಧರಿಸಿವೆ. 

 

ಮಾವಿನ ಹಣ್ಣು

---------------------- 

ವಿಶ್ವದ ದುಬಾರಿ ಮಾವಿನ ಹಣ್ಣು; ಕೊಪ್ಪಳದಲ್ಲಿ

ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಎಂದೇ ಪರಿಗಣಿಸಲಾಗಿರುವ ಮಿಯಾಝಾಕಿ ತಳಿಯ ಮಾವಿನ ಹಣ್ಣನ್ನು ಕೊಪ್ಪಳದ ಕೃಷಿ ಮೇಳದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ.

ಈ ಹಣ್ಣಿನ ಬೆಲೆ ಬರೋಬ್ಬರಿ 40,000 ರೂಪಾಯಿ! ಅಂದರೆ ಕೆ.ಜಿಗೆ ಬರೋಬ್ಬರಿ 2.5 ಲಕ್ಷ ರೂಪಾಯಿ ಇದೆ.

ಕೊಪ್ಪಳ ಜಿಲ್ಲೆಯಲ್ಲಿ ಮಿಯಾಝಾಕಿ ಮಾವಿನ ಹಣ್ಣಿನ ಕೃಷಿಯನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ರಾಜ್ಯ ತೋಟಗಾರಿಕಾ ಇಲಾಖೆ

ಒಂದು ಹಣ್ಣನ್ನು ಪ್ರದರ್ಶನಕ್ಕೆ ಇರಿಸಿದೆ. ಮೇ 31 ರವರೆಗೆ ಮೇಳ ನಡೆಯಲಿದ್ದು, ಮಾವಿನ ಹಣ್ಣು ನೋಡುವುದಕ್ಕೆಂದೇ

ಸಾವಿರಾರು ಜನ ರೈತರು ಹಾಗೂ ಸಾರ್ವಜನಿಕರು ಬರುತ್ತಿದ್ದಾರೆ. ದುಬಾರಿ ಮಾವಿನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು ಸಾಮಾನ್ಯವಾಗಿದೆ.

ಅಲ್ಲದೇ ಇದೀಗ  ಕೆಂಪು ಮಿಯಾಜಾಕಿಯ ಚಿತ್ರಗಳು ಕರ್ನಾಟಕದಲ್ಲಿ ಪ್ರಸಿದ್ಧಿ ಪಡೆದುಕೊಂಡಿದೆ.

ಮಿಯಾಜಾಕಿ ಮಾವಿನ ಹಣ್ಣನ್ನು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಧ್ಯಪ್ರದೇಶದಿಂದ

ತಂದಿದ್ದು,ಈ ತಳಿಯನ್ನು ಜಪಾನ್‌ನಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. 

pic credits: CMofKarnataka and pexels