News

ಅಂಚೆ ಕಚೇರಿಯಲ್ಲಿ ದಿನಕ್ಕೆ 33 ರೂಪಾಯಿ ಹೂಡಿಕೆ ಮಾಡಿ 72 ಸಾವಿರ ಪಡೆಯಿರಿ..... ಇಲ್ಲಿದೆ ಮಾಹಿತಿ

07 April, 2021 9:12 PM IST By:
Post office

ಹಣ ಉಳಿತಾಯ ಮಾಡಲು ಕೆಲವರು ಬ್ಯಾಂಕ್ ನಲ್ಲಿ ಫಿಕ್ಸ್ ಡಿಪಾಸಿಟ್ ಇಡುತ್ತಾರೆ. ಇನ್ನೂ ಕೆಲವರು ಬೇರೆ ಬೇರೆ ವಿಧದಲ್ಲಿ ಹೂಡಿಕೆ ಮಾಡುತ್ತಾರೆ. ಆದರೆ ಇಲ್ಲಿ ಮರುಕಳಿಸುವ ಠೇವಣಿಯಲ್ಲಿ ದಿನಕ್ಕೆ 33 ರೂಪಾಯಿ ಹೂಡಿಕೆ ಮಾಡಿ 72 ಸಾವಿರ ರೂಪಾಯಿ ಪಡೆಯಬಹುದು.

ಹೌದು, ಅಂಚೆ ಕಚೇರಿಯಲ್ಲಿ ಈ ವಿಶಿಷ್ಟ ಮರುಕಳಿಸುವ ಯೋಜನೆ ಇದಾಗಿದೆ. ಒಂದು ನಿರ್ದಿಷ್ಟ ಅವಧಿಯಲ್ಲಿ ನಿಯಮಿತವಾಗಿ ಹೆಚ್ಚಿನ ಬಡ್ಡಿದರವನ್ನು ಗಳಿಸಲು ಬಯಸುವವರಿಗೆ ಉತ್ತಮ ಯೋಜನೆಯಾಗಿದೆ.  ನೀವು ಒಂದು ನಿರ್ದಿಷ್ಟ ಅವಧಿಗೆ ಸಣ್ಣ ಮೊತ್ತವನ್ನು ಠೇವಣಿ ಇರಿಸುವ ಮೂಲಕ ದೊಡ್ಡ ಹಣವನ್ನು ಸಂಗ್ರಹಿಸಲು ಬಯಸಿದರೆ ಅಂಚೆ ಕಚೇರಿಯ ಮರುಕಳಿಸುವ ಠೇವಣಿ ಯೋಜನೆ ನಿಮಗೆ ಸಹಾಯ ಮಾಡುತ್ತದೆ.

ಅಂಚೆ ಕಚೇರಿಯ ಮರುಕಳಿಸುವ ಯೋಜನೆಯಡಿಯಲ್ಲಿ ಶೇಕಡಾ 7.10 ರಷ್ಟು ಬಡ್ಡಿ ಸಿಗುತ್ತದೆ. ಇದರ ಮೂಲಕ ನೀವು ಸಣ್ಣ ಮೊತ್ತದೊಂದಿಗೆ ದೊಡ್ಡ ಹಣವನ್ನು ಮಾಡಬಹುದು. ಮರುಕಳಿಸುವ ಠೇವಣಿ ಯೋಜನೆಯಲ್ಲಿ,  ದಿನಕ್ಕೆ 33 ರೂಪಾಯಿ ಅಂದರೆ ತಿಂಗಳಿಗೆ 1000 ರೂಪಾಯಿಗಳನ್ನು ಹೂಡಿಕೆ ಮಾಡಿದರೆ ಶೇಕಡಾ 7.10 ರ ಬಡ್ಡಿಯೊಂದಿಗೆ ಅದು ಒಂದು ವರ್ಷದಲ್ಲಿ 12,468.84 ರೂಪಾಯಿಗಳಾಗಿರುತ್ತದೆ. ಇದನ್ನು 5 ವರ್ಷಗಳವರೆಗೆ ಹೆಚ್ಚಿಸಿದರೆ, 72, 122.97 ರೂಪಾಯಿಗಳಷ್ಟಾಗುತ್ತದೆ. ಪ್ರತಿ ತಿಂಗಳ ನಾವು ಐದು ವರ್ಷದವರೆಗೆ ಕಟ್ಟಿದ ಹಣ 60 ಸಾವಿರ ರೂಪಾಯಿಗಳು ನಿಮ್ಮ ಅಸಲು + 12,122.97 ರೂಪಾಯಿ ಬಡ್ಡಿ. ಅಸಲು ಬಡ್ಡಿ ಎರಡು ಸೇರಿ 72,123 ರೂಪಾಯಿ ಆಗುತ್ತದೆ.

ಉಳಿತಾಯ ಯೋಜನೆಗಳಲ್ಲಿ ಕಡಿಮೆ ಹಣವನ್ನು ಹೂಡಿಕೆ ಮಾಡಿದರೂ ಸಹ ಉತ್ತಮ ಲಾಭ ಸಿಗುತ್ತದೆ. ಅಂಚೆ ಕಚೇರಿಯ ಯಾವುದೇ ಕಚೇರಿಯಲ್ಲಿ ಖಾತೆ ತೆರೆಯಬಹುದು.. ಖಾತೆದಾರನು ಬಯಸಿದರೆ, 2 ಜನರು ಸಹ ಈ ಖಾತೆಯನ್ನು ಒಟ್ಟಿಗೆ ನಿರ್ವಹಿಸಬಹುದು.

ಏನಿದು ಮರುಕಳಿಸುವ ಠೇವಣಿ ?

ಮರುಕಳಿಸುವ ಠೇವಣಿ ಒಂದು ನಿರ್ದಿಷ್ಟ ಅವಧಿಯಲ್ಲಿ ನಿಯಮಿತವಾಗಿ ಉಳಿಸಲು ಮತ್ತು ಹೆಚ್ಚಿನ ಬಡ್ಡಿದರವನ್ನು ಗಳಿಸಲು ಬಯಸುವವರಿಗೆ ಹೂಡಿಕೆ ಮತ್ತು ಉಳಿತಾಯ ಆಯ್ಕೆಯಾಗಿದೆ.

ಆರ್ಡಿ ಖಾತೆಯ ವಿಶೇಷತೆ ಏನು?

ಈ ಯೋಜನೆ ಉಳಿತಾಯದ ಅಭ್ಯಾಸವನ್ನು ಉಂಟುಮಾಡುತ್ತದೆ ಮರುಕಳಿಸುವ ಠೇವಣಿಯಲ್ಲಿ ಬಡ್ಡಿದರ ಹೆಚ್ಚಾಗಿರುತ್ತದೆ. ಮರುಕಳಿಸುವ ಠೇವಣಿ (RD) ಮರುಕಳಿಸುವ ಠೇವಣಿ (RD) ಖಾತೆಯನ್ನು ನಗದು ಮತ್ತು ಚೆಕ್ ಮೂಲಕ ತೆರೆಯಬಹುದಾಗಿದೆ. ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ಖಾತೆಯನ್ನು ತೆರೆಯಲು ಕನಿಷ್ಠ ಮೊತ್ತ ರೂಪಾಯಿ 10 ತಿಂಗಳಿಗೆ ಪಾವತಿಸಬೇಕಾಗುತ್ತದೆ. ಪೋಸ್ಟ್ ಆಫೀಸ್ RD ಖಾತೆ ವರ್ಷಕ್ಕೆ ಶೇ. 7.3 ರಷ್ಟು ಬಡ್ಡಿದರವನ್ನು ನೀಡುತ್ತದೆ. ಅಂಚೆ ಕಛೇರಿ RD ಖಾತೆಯಲ್ಲಿನ ಬಡ್ಡಿಯ ದರ ವಾರ್ಷಿಕವಾಗಿ ಹೆಚ್ಚಾಗುತ್ತದೆ.