News

'ಈ' ಬೆಳೆಗೆ ಕೇವಲ 2 ಲಕ್ಷ ರೂಪಾಯಿ ಖರ್ಚು ಮಾಡಿ 1 ಕೋಟಿ ವರೆಗೆ ಬಂಪರ್‌ ಆದಾಯ

13 August, 2022 3:56 PM IST By: Maltesh
Invest just 2 lakh rupees on 'this' crop and get a bumper income of up to 1 crore

ಪ್ರತಿಯೊಬ್ಬರೂ ಕಡಿಮೆ ಹೂಡಿಕೆಯಲ್ಲಿ ಹೆಚ್ಚು ಲಾಭ ಗಳಿಸಲು ಬಯಸುತ್ತಾರೆ. ರೈತರು ಕೃಷಿಯಿಂದ ಹೆಚ್ಚಿನ ಲಾಭ ಗಳಿಸಬೇಕಾದರೆ ಸಾಂಪ್ರದಾಯಿಕ ಬೆಳೆಗಗಳ ಜೊತೆ ಜೊತೆಗೆ ಬೇರೆ ಬೆಳೆಗಳನ್ನು ಹಾಕಬೇಕು. ಅಂತಹ ಒಂದು ಬೆಳೆ ಶ್ರೀಗಂಧ. ರೈತರು ಖಂಡಿತವಾಗಿಯೂ ಈ ಬೆಳೆಯಿಂದ ಸಾಕಷ್ಟು ಲಾಭ ಪಡೆಯಬಹುದು. ರೈತರು ಶ್ರೀಗಂಧದ ಜೊತೆಗೆ ಇತರೆ ಬೆಳೆಗಳನ್ನು ಬೆಳೆಯಬಹುದು.

ಶ್ರೀಗಂಧದ ಕೃಷಿ ಮಾಡುವುದು ಹೇಗೆ..?

ಒಂದು ಎಕರೆಯಲ್ಲಿ ಚಂದನ ಬೆಳೆಸಿದರೆ ಕೇವಲ ಒಂದು ಲಕ್ಷ ರೂಪಾಯಿ ಹೂಡಿಕೆ ಮಾಡಿ 60 ಲಕ್ಷ ರೂಪಾಯಿ ಗಳಿಸಬಹುದು. ಈ ರೀತಿ ಒಂದು ಹೆಕ್ಟೇರ್ ಅಂದರೆ ಎರಡೂವರೆ ಎಕರೆಯಲ್ಲಿ ಚಂದನ ಬೆಳೆಸಿದರೆ ಎರಡೂವರೆ ಲಕ್ಷ ರೂಪಾಯಿ ವೆಚ್ಚವಾಗಲಿದ್ದು, ಇದರಿಂದ 1.5 ಕೋಟಿ ರೂ. ಆದಾಯ ಲಭ್ಯವಾಗುತ್ತದೆ.  ಭಾರತದಲ್ಲಿ ಚಂದನದ ಮರದ ಸರಾಸರಿ ಬೆಲೆ ಕೆಜಿಗೆ 8 ರಿಂದ 10 ಸಾವಿರ ರೂ. ಹೊರ ದೇಶಗಳಲ್ಲಿ ಇದರ ದರ 20ರಿಂದ 25 ಸಾವಿರ ರೂಪಾಯಿ ಹೋಗಬಹುದು.

ನಾವು ಎರಡೂವರೆ ಎಕರೆಯಿಂದ ಸರಾಸರಿ 1.5 ಕೋಟಿ ಗಳಿಸಬಹುದು. ಆದರೆ ಶ್ರೀಗಂಧ ಕೃಷಿ ಜತೆಗೆ ಇತರೆ ಬೆಳೆಗಳನ್ನು ಬೆಳೆಸಿ ಆದಾಯ ಗಳಿಸಿದರೆ ಲಾಭ ಮತ್ತಷ್ಟು ಹೆಚ್ಚುತ್ತದೆ. ಶ್ರೀಗಂಧದ ಮರಕ್ಕೂ ಅನುಕೂಲವಾಗುವ ಬೆಳೆಗಳನ್ನು ನೆಡಿ. ನೀವು ಅದರಲ್ಲಿ ತುರಿಯನ್ನು ನೆಡಬಹುದು. ಇದು ಖಂಡಿತವಾಗಿಯೂ ನಿಮ್ಮ ಆದಾಯವನ್ನು ಹೆಚ್ಚಿಸುತ್ತದೆ. ನೀವು ಶ್ರೀಗಂಧವನ್ನು ಬೆಳೆಸುವ ಆಲೋಚನೆಯಲ್ಲಿದ್ದರೆ, ನೀವು ತಜ್ಞರನ್ನು ಭೇಟಿ ಮಾಡಿ ಮತ್ತು ಅದರ ಸೂಕ್ಷ್ಮ ವ್ಯತ್ಯಾಸಗಳನ್ನು ತಿಳಿದುಕೊಳ್ಳಬೇಕು.

ಶ್ರೀಗಂಧದ ಬೆಳೆಯಿಂದ ಲಾಭ ಪಡೆಯಲು 12-15 ವರ್ಷ ಕಾಯಬೇಕು ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಗಂಧದ ಗಿಡದ ಸರಾಸರಿ ಬೆಲೆ 400 ರೂ. ಶ್ರೀಗಂಧದ ಕೃಷಿಯ ದೊಡ್ಡ ಪ್ರಯೋಜನವೆಂದರೆ ಶ್ರೀಗಂಧಕ್ಕೆ ಹೆಚ್ಚಿನ ಕಾಳಜಿ ಅಗತ್ಯವಿಲ್ಲ. ಆದಾಗ್ಯೂ, ಮೊದಲ ವರ್ಷದಲ್ಲಿ ನೀವು ಶ್ರೀಗಂಧದ ಗಿಡಗಳನ್ನು ಕಾಳಜಿ ವಹಿಸಬೇಕು. ಹಾಗೆಯೇ ಶ್ರೀಗಂಧದ ಮರಕ್ಕೆ ಹೆಚ್ಚು ನೀರಿನ ಅವಶ್ಯಕತೆ ಇರುವುದಿಲ್ಲ. ಖುಷ್ಕಿ ಭೂಮಿಯಲ್ಲಿಯೂ ಶ್ರೀಗಂಧವನ್ನು ನೆಟ್ಟರೆ ಕೃಷಿ ಅಭಿವೃದ್ಧಿ ಹೊಂದಬಹುದು.

ಮಹತ್ವದ ಸುದ್ದಿ: ಅಟಲ್‌ ಪೆನ್ಷನ್‌ ಯೋಜನೆಯಲ್ಲಿ ಭಾರೀ ಬದಲಾವಣೆ

ಶ್ರೀಗಂಧದ ಉಪಯೋಗಗಳೇನು?

ಶ್ರೀಗಂಧದ ಮರಗಳನ್ನು ನಿತ್ಯಹರಿದ್ವರ್ಣ ಎಂದು ಪರಿಗಣಿಸಲಾಗುತ್ತದೆ. ಅದರಿಂದ ತೆಗೆದ ಎಣ್ಣೆ ಮತ್ತು ಮರದಿಂದ ಅನೇಕ ಔಷಧೀಯ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಇದರೊಂದಿಗೆ, ಚಂದನವನ್ನು ಸಾಬೂನು, ಸೌಂದರ್ಯವರ್ಧಕಗಳು ಮತ್ತು ಸುಗಂಧ ದ್ರವ್ಯಗಳನ್ನು ತಯಾರಿಸಲು ಬಳಸಲಾಗುತ್ತದೆ, ಏಕೆಂದರೆ ಎಣ್ಣೆಯು ಉತ್ತಮ ಪರಿಮಳವನ್ನು ಹೊಂದಿರುತ್ತದೆ. ಶ್ರೀಗಂಧವನ್ನು ಹವನಕ್ಕೆ ವ್ಯಾಪಕವಾಗಿ ಬಳಸಲಾಗುತ್ತದೆ. ವಿದೇಶಗಳಲ್ಲೂ ಚಂದನಕ್ಕೆ ಸಖತ್ ಬೇಡಿಕೆಯಿದೆ.