News

ನೈಸರ್ಗಿಕ ಕೃಷಿ ಅಳವಡಿಸಿಕೊಂಡು ಮಾರಕ ರೋಗಗಳಿಂದ ಮುಕ್ತಿಹೊಂದಿ

12 July, 2020 4:55 PM IST By:

ಹದಗೆಡುತ್ತಿರುವ ಮನುಷ್ಯನ ಆರೋಗ್ಯ ಕಾಪಾಡಬೇಕಾದರೆ ಮೊದಲು ಭೂಮಿಯ ಆರೋಗ್ಯ ಕಾಪಾಡಬೇಕು. ಅದಕ್ಕಾಗಿ ನೈಸರ್ಗಿಕ ಕೃಷಿ ಪದ್ಧತಿ ಅನುಸರಿಸಬೇಕು. ನೈಸರ್ಗಿಕ ಕೃಷಿಯಿಂದ ಮಾತ್ರ ಭೂಮಿ ಫಲವತ್ತತೆ ಕಾಪಾಡಲು ಸಾಧ್ಯ. ಕೃಷಿಯಲ್ಲಿ ಅತೀಯಾದ ರಾಸಾಯನಿಕ ಬಳಕೆಯಿಂದಾಗಿ ಇಂದು ಆಹಾರ ಪದಾರ್ಥದಲ್ಲೂ ವಿಷ ಸೇರ್ಪಡೆಗೊಂಡಿದೆ. ವಿಷಯುಕ್ತ ಆಹಾರ ಸೇವನೆಯಿಂದ ಹೃಯ ಸಂಬಂಧಿ ಕಾಯಿಲೆ, ಸಕ್ಕರೆ ಕಾಯಿಲೆ, ಕ್ಯಾನ್ಸರ್ ನಂತಹ ಭಯಾನಕ ರೋಗಗಳು ಮನುಷ್ಯನನ್ನು ಬಾಧಿಸುತ್ತಿವೆ ಎನ್ನುತ್ತಾರೆ ಭತ್ತದ ಬೋರೇಗೌಡ (Bhattada Boregowda). ಇವರು ಓದಿದ್ದು ಕೇವಲ ಹತ್ತನೇ ತರಗತಿ. ಆಧರೆ ಕೃಷಿ ಪಂಡಿತ, ವಿಜ್ಞಾನಿಗಳಂತೆ ಅಪಾರ ಪಾಂಡಿತ್ಯ ಹೊಂದಿದ್ದಾರೆ. ಇವರು ತನ್ನ ಬಿಡುವಿಲ್ಲದ ಸಮಯದಲ್ಲಿಯೂ  ಕೃಷಿ ಜಾಗರಣ (Krishi Jagaran) ಮಾಸಪತ್ರಿಕೆಯ ಪ್ರತಿನಿಧಿಯೊಂದಿಗೆ ತಮ್ಮ ಅಭಿಪ್ರಾಯ (Opinion) ಹಂಚಿಕೊಂಡಿದ್ದು ಹೀಗೆ..

1.ನೈಸರ್ಗಿಕ ಕೃಷಿ  ಇಂದಿನ ಪರಿಸ್ಥಿತಿಗೆ ಅನುಕೂಲವಾಗಲಿದೆಯೇ?

ಆಹಾರ ಬಿಕ್ಕಟ್ಟುಜಾಗತಿಕ ತಾಪಮಾನಹವಾಮಾನ ಬದಲಾವಣೆಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಗಳಿಗೆ ವಲಸೆ ಮತ್ತು ಆರ್ಥಿಕ ಹಿಂಜರಿತ ಈ ಎಲ್ಲ ಸಮಸ್ಯೆಗಳ ನಡುವೆಯೂ ನಾವು ಶೂನ್ಯ ಬಂಡವಾಳದಲ್ಲಿ ನೈಸರ್ಗಿಕ ಕೃಷಿ ಮಾಡಿ ಹೆಚ್ಚು ಇಳುವರಿ ಪಡೆಯಲು ಸಾಧ್ಯ. ಅದಕ್ಕೆ ತಾಳ್ಮೆ ಬೇಕಾಗುತ್ತದೆ. ಶೂನ್ಯ ಬಂಡವಾಳ ಕೃಷಿಯಿಂದ ಮಾತ್ರ ಆಹಾರ ಬಿಕ್ಕಟ್ಟು ಪರಿಹರಿಸಬಹುದು. ಸೀಮಿತ ಭೂಮಿಯಲ್ಲಿ ನಾವು ಹೆಚ್ಚು ಇಳುವರಿ ಪಡೆಯುವುದರೊಂದಿಗೆ ಖರ್ಚು ಸಹ ತುಂಬಾ ಕಡಿಮೆಯಾಗಲಿದೆ. ದುಪ್ಪಟ್ಟು ಆಹಾರೋತ್ಪಾದನೆ ಬೇಕಾದಲ್ಲಿ ರಾಸಾಯನಿಕ ಕೃಷಿನಿಷೇಧಿಸಿಶೂನ್ಯ ಬಂಡವಾಳ ಕೃಷಿಯನ್ನು ಪ್ರೋತ್ಸಾಹಿಸಬೇಕಿದೆ.

2. ರಾಸಾಯನಿ ಕೃಷಿಯಿಂದ ಹೆಚ್ಚು ಇಳುವರಿ ಪಡೆಯುವ ಭ್ರಮೆಯಲ್ಲಿರುವ ರೈತರು ನೈಸರ್ಗಿಕ ಕೃಷಿಗೆ ಮೊರೆಹೋಗುತ್ತಿದ್ದಾರೆಯೇ?

ನನ್ನ ಅನುಭವದ ಪ್ರಕಾರ ನೈಸರ್ಗಿಕ ಕೃಷಿಯಲ್ಲಿ ತುಂಬಾ ಕಡಿಮೆ ರೈತರು ತೊಡಗಿದ್ದಾರೆ. ಇಂದು ಬೆಳೆದ ಬೆಳೆಗೆ ಮರುದಿನವೇ ಉತ್ಪಾದನೆ ಬೇಕೆಂಬ ಧಾವಂತದಲ್ಲಿ ರಾಸಾಯನಿಕ ಕೃಷಿ ಮಾಡಿ ಭೂಮಿಯ ಫಲವತ್ತತೆಯನ್ನು ಹಾಳು ಮಾಡುತ್ತಿರುವುದು ಖೇದಕಕ ಸಂಗತಿ. ರಾಸಾಯನಿಕ ಕೃಷಿಗೆ ಹೆಚ್ಚು ಮೊರೆಹೋಗಲು ಮಾರುಕಟ್ಟೆ ಇದಕ್ಕೆ ಕಾರಣ. ರಾಸಾಯನಿಕವಾದರೂ ಬೆಳೆಸಿ ಸಾವಯವವಾದರೂ ಬೆಳೆಸಿ ಅದಕ್ಕೆ ವ್ಯತ್ಯಾಸ ತಿಳಿಯದೇ ಬೆಲೆ ನಿರ್ಧಾರವಾಗುತ್ತದೆ. ಸಾವಯವ ಹೆಸರಿನ ಮೇಲೆ ಮದ್ಯವರ್ತಿಗಳೇ ಹೆಚ್ಚು ಲಾಭ ಮಾಡಿಕೊಳ್ಳುತ್ತಿದ್ದಾರೆ.

4.ರೈತರು ನೇರವಾಗಿ ಮಾರಾಟ ಮಾಡಿದರೆ ಲಾಭ ಸಿಗುವುದೇ?

ಹಗಲು ರಾತ್ರಿಯೆನ್ನದೆ ರೈತರು ಶ್ರಮವಹಿಸಿ ಬೆಳೆಯುತ್ತಾರೆ. ಮಳೆ, ಛಳಿ ಬಿಸಿಲೆನ್ನದೆ ಬಿತ್ತಿದ ಬೆಳೆ ಪಡೆಯುವಲ್ಲಿ ರೈತರ (Farmer) ಶ್ರಮ ಅಪಾರವಾಗಿರುತ್ತದೆ. ಆದರೆ ಮದ್ಯವರ್ತಿಗಳ ಹಾವಳಿಯಿಂದಾಗಿ ರೈತರಿಗೆ ಲಾಭ ಸಿಗುತ್ತಿಲ್ಲ. ಇದರಿಂದಾಗಿ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ರೈತರು ಬೆಳದ ಬೆಳೆಗಳನ್ನು ಮದ್ಯವರ್ತಿಗಳಿಗೆ ಕೊಟ್ಟರೆ ಅವರು ಕೂತಲ್ಲೇ ರೈತರಿಗಿಂತ ದುಪ್ಪಟ್ಟ ಹಣ ಗಳಿಸುತ್ತಾರೆ. ಮಾರುಕಟ್ಟೆಯ ಈ ರೀತಿಯ ದುಷ್ಪರಿಣಾಮದಿಂದಾಗಿ ರೈತರಿಗೆ ಹಾನಿಯಾಗುತ್ತದೆ. ಹಾಗಾಗಿ ರೈತರೇ ನೇರವಾಗಿ ಮಾರುಕಟ್ಟೆಗೆ ಇಳಿಯಬೇಕು.

5ನೈಸರ್ಗಿಕ ಕೃಷಿಯಲ್ಲಿ ಹೆಚ್ಚು ಬಂಡವಾಳ ಖರ್ಚು ಬೇಕಿಲ್ಲವೇ?

ಬಂಡವಾಳವಿಲ್ಲದೆ ನೈಸರ್ಗಿಕ ಕೃಷಿ ಮಾಡಬಹುದು. ಹಿಂದೆ 30-40 ವರ್ಷಗಳ ಹಿಂದೆ ಶೇ. 90 ರಷ್ಟು ರೈತರು ರಾಸಾಯನಿಕ ಬಳಸುತ್ತಿರಲಿಲ್ಲ. ಕೊಟ್ಟಿಗೆ ಗೊಬ್ಬರವನ್ನೇ ಬಳಸುತ್ತಿದ್ದರು. ಪ್ರತಿಯೊಬ್ಬರ ಮನೆಯ ಮುಂದೆ ದನಕರುಗಳಿರುತ್ತಿದ್ದವು. ಆದರೆ ಈಗ ತೀರಾ ಕಡಿಮೆಯಾಗಿದೆ. ಒಂದೆರೆಡು ಎಕರೆ ಜಮೀನಿಗೆ ಮನೆಯ ಮುಂದೆ ಒಂದೆರಡು ನಾಟಿ ಆಕಳು ಹೊಂದಿದ್ದರೆ ಸಾಕು. ತಿಪ್ಪೆಗೊಬ್ಬರವನ್ನಾಗಲೀರಾಸಾಯನಿಕ ಗೊಬ್ಬರವನ್ನಾಗಲೀ ಖರೀದಿಸುವ ಅಗತ್ಯ ಇಲ್ಲ. ಕೀಟನಾಶಕವೂ ಬೇಕಿಲ್ಲ. ಉತ್ಪಾದನಾ ವೆಚ್ಚ ಇಲ್ಲದೆ ಕೀಟ ನಾಶಕದ ಬದಲಿಗೆ ನಾವು ಮನೆಯಲ್ಲಿಯೇ ಕೀಟನಾಶಕ ತಯಾರಿಸಬಹುದು. ಉತ್ಪಾದನಾ ವೆಚ್ಚವೂ ಕಡಿಮೆಯಾಗುತ್ತದೆ. ಜತೆಗೆ ಉತ್ಪಾದನೆ ಪ್ರಮಾಣ ಹೆಚ್ಚುತ್ತದೆ.

6ನೈಸರ್ಗಿಕ ಕೃಷಿಗೆ ದೇಸಿ ಆಕಳು ಏಕೆ ಬೇಕು?

ನೈಸರ್ಗಿಕ ಕೃಷಿಗೆ ದೇಸೀ ಆಕಳು ಅತ್ಯಗತ್ಯ. ದೇಸಿ ಆಕಳ ಗಂಜಳ ಎಲ್ಲ ಪೋಷಕಾಂಶಗಳನ್ನು ಒಳಗೊಂಡಿದೆ. ಗರಿಷ್ಠ ಪ್ರಮಾಣದ ಜೀವಾಣುಗಳು ದೇಸಿ ಆಕಳ (Cow) ಸಗಣಿಯಲ್ಲಿವೆ. ಒಂದು ಗ್ರಾಂ ಸಗಣಿಯಲ್ಲಿ ಕೋಟ್ಯಂತರ ಜೀವಾಣು ಪಡೆಯಬಹುದು. ಒಂದು ದೇಸಿ ಹಸು ದಿನವೊಂದಕ್ಕೆ ಸುಮಾರು 10 ಕೆ.ಜಿ ಸಗಣಿ ಹಾಕುತ್ತದೆ.. ಜೀವಾಮೃತದಿಂದ ಗೊಬ್ಬರದಿಂದ ಹೆಚ್ಚು ರೋಗ ಬಾಧಿಸುವುದಿಲ್ಲ. ಹೊಲದಲ್ಲಿ ಜೀವಾಮೃತ ಪೂರೈಕೆಯಾದ ಅನಂತರ ಹಿಕ್ಕೆಯ ರೂಪದ ಅನ್ಯದ್ರವ್ಯಗಳನ್ನು ಎರೆಹುಳುಗಳು ಭೂಮಿಯ ಮೇಲ್ಪದರಕ್ಕೆ ತಂದು ಹಾಕುತ್ತವೆ. ಇದರಲ್ಲಿ ಕೋಟ್ಯಂತರ ಸೂಕ್ಷ್ಮ ಜೀವಿಗಳು ಕಾರ್ಯನಿರ್ವಹಿಸುತ್ತವೆ. ಭೂಮಿಯ ಫಲವತ್ತತೆಯೂ ಹೆಚ್ಚಾಗುತ್ತದೆ.

7.ನೈಸರ್ಗಿಕ ಕೃಷಿಯಿಂದ ಫಲವತ್ತತೆ ಹೆಚ್ಚಾಗುತ್ತದಯೇ?

ರಾಸಾಯನಿಕ ಗೊಬ್ಬರದಿಂದ ಆ ಕ್ಷಣದಲ್ಲಿ ಹೆಚ್ಚು ಇಳುವರಿ ಪಡೆಯಬಹುದು. ಆದರೆ ಭೂಮಿಯ ಫಲವತ್ತತೆ ನಾಶವಾಗುತ್ತದೆ. ಆದರೆ ಕೊಟ್ಟಿಗೆ ಗೊಬ್ಬರಿಂದ ಪಲವತ್ತತೆ ಹೆಚ್ಚಾಗುವುದಿಲ್ಲದೆ ಇಳುವರಿಯೂ ಕೊಡುತ್ತದೆ. ಬೆಳವಣಿಗೆ ಸಹ ಉತ್ತಮವಾಗಿರುತ್ತದೆ.

ರಾಸಾಯನಿಕ ಕೃಷಿಯಿಂದ ಹೆಚ್ಚು ಇಳುವರಿ ಪಡೆಯುತ್ತೇವೆಂಬುದು ಭ್ರಮೆ. ಇದರಿಂದ ಹಾನಿಯೂ ಹೆಚ್ಚಾಗುತ್ತದೆ. ಭೂಮಿಯ ಫಲವತ್ತದೆ ಹಾಳಾಗುವುದಲ್ಲದೆ ವಿಷಯುಕ್ತ ಆಹಾರ ಪಡೆಯುತ್ತೇವೆ. ಇದರಿಂದಾಗಿ ಹಲವಾರು ರೋಗಗಳಿಗೆ ತುತ್ತಾಗಬೇಕಾಗುತ್ತದೆ

8ಸರ್ಕಾರಗಳು ನೈಸರ್ಗಿಕ ಕೃಷಿಗೆ ಪ್ರೋತ್ಸಾಹ ನೀಡುತ್ತಿವೆಯೇ?

ಸಾವಯವ ನೈಸರ್ಗಿಕ ಹೆಸರಿನಲ್ಲಿ ಪ್ರೋತ್ಸಾಹ ಧನ ಕೊಡುತ್ತಾರೆ.  ಆಡಳಿತ ವೆಚ್ಚಕ್ಕೆ ಹೆಚ್ಚು ಹಣ ಖರ್ಚಾಗುತ್ತದೆ. ಆದರೆ ತಳಮಟ್ಟದ ರೈತರಿಗೆ ಸಿಗುತ್ತಿಲ್ಲ. ಯೋಜನೆಗಳು ರೂಪಿಸುವುದರಿಂದ ನಿರ್ವಹಣ ಖರ್ಚಿಗೆ ಶೇ. 90 ರಷ್ಟು ಹಣ ಹೋಗುತ್ತದೆ ವಿನಃ ತಳಮಟ್ಟದ ರೈತರಿಗೆ ಏನೂ ಸಿಗುವುದಿಲ್ಲ.

9.ನೈಸರ್ಗಿಕ ಕೃಷಿಯಿಂದ ಆರೋಗ್ಯ ಸಮಸ್ಯೆಯಾಗುವುದಿಲ್ಲವೇ?

ಬಿತ್ತನೆ ಬೀಜಕೀಟನಾಶಕ ಎಂದು ಸಬ್ಸಿಡಿಯಲ್ಲಿ ದೊರೆಯುವ ರಸಗೊಬ್ಬರಕ್ಕಾಗಿ ಸರದಿಯಲ್ಲಿ ಕಾದು ನಿಂತು ಹಣ ಖರ್ಚು ಮಾಡಿ ಬೆಳೆ ಬೆಳೆಯುವುದರ ಬದಲು ಕೊಟ್ಟಿಗೆಯಲ್ಲಿನ ಆಕಳಿನ ಸಗಣಿಗಂಜಲಬದುವಿನ ಮಣ್ಣು ಉಪಯೋಗಿಸಿ ನೈಸರ್ಗಿಕ ಕೃಷಿ ಅಳವಡಿಸಿಕೊಂಡರೆ ಎಲ್ಲಾ ರೋಗಗಳಿಂದಲೂ ಮುಕ್ತಿ ಹೊಂದಬಹುದು. ಇಲ್ಲಿ ರಸಗೊಬ್ಬರಕೀಟನಾಶಕಗಳ ಅಗತ್ಯವಿಲ್ಲ. ಆದಷ್ಟು ನೈಸರ್ಗಿಕ ಕೃಷಿ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ. ನೈಸರ್ಗಿಕ ಕೃಷಿಯಿಂದ ಇಳುವರಿಯೂ ಹೆಚ್ಚಾಗುತ್ತದೆ. ಉತ್ತಮ ಗುಣಮಟ್ಟದೊಂದಿಗೆ ಹೆಚ್ಚು ಉತ್ಪಾದನೆ ಹಾಗೂ ಲಾಭವೂ ಆಗುತ್ತದೆ.

 

ಭತ್ತದ ಬೋರೇಗೌಡ (Bhattada Boregowda)

ಮಂಡ್ಯ ತಾಲೂಕು

ಮೊ.8971438272

ಬಾಳೆ (Banana) ಬೆಳೆದು ವ್ಯಾಪಾರ ಮಾಡಿ ಕೈತುಂಬ ಕಾಸು ಪಡೆಯುತ್ತಿರುವ ಸೋಮಶೇಖರ