News

ಹಿರಿಯ ನಾಗರಿಕರಿಗೆ ಜಾಕ್‌ಪಾಟ್: ಸಣ್ಣ ಉಳಿತಾಯ ಯೋಜನೆ ಮೇಲಿನ ಬಡ್ಡಿ ಹೆಚ್ಚಳ!

01 January, 2023 4:43 PM IST By: Maltesh
AddThis Website Tools
Interest increase on small savings plan!
Interest increase on small savings plan!

ಇಂದಿನಿಂದ (ಜನವರಿ 1) ಹೊಸ ವರ್ಷ 2023 ಆರಂಭವಾಗಿದೆ. ಈ ಸಂದರ್ಭದಲ್ಲಿ ಸಣ್ಣ ಉಳಿತಾಯ ಯೋಜನೆಗಳಾದ ಹಿರಿಯ ನಾಗರಿಕರ ಉಳಿತಾಯ ಯೋಜನೆ ಮತ್ತು, ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಯೋಜನೆಯ ಬಡ್ಡಿ ದರವನ್ನು ಇಂದಿನಿಂದ ಹೆಚ್ಚಿಸಲಾಗಿದೆ. ಹೀಗಾಗಿ ಫಲಾನುಭವಿಗಳಿಗೆ ಹೆಚ್ಚುವರಿ ಆದಾಯ ಸಿಗಲಿದೆ.

ವಾಯುಭಾರ ಕುಸಿತ: ರಾಜ್ಯದ ಈ ಭಾಗಗಳಲ್ಲಿ 2 ದಿನ ತುಂತುರು ಮಳೆ

ಸಣ್ಣ ಉಳಿತಾಯ ಯೋಜನೆ

ಹಿರಿಯ ನಾಗರಿಕರ ಉಳಿತಾಯ ಯೋಜನೆ, ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ, ಕಿಸಾನ್ ವಿಕಾಸ್ ಬಾಂಡ್, ಉಳಿತಾಯ ಯೋಜನೆ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳಿಗೆ ತ್ರೈಮಾಸಿಕವಾಗಿ ಬಡ್ಡಿ ದರವನ್ನು ಪರಿಷ್ಕರಿಸಲಾಗುತ್ತದೆ. ಈ ಸಂದರ್ಭದಲ್ಲಿ ಇಂದಿನಿಂದ  ಕೆಲವು ಸಣ್ಣ ಉಳಿತಾಯ ಯೋಜನೆಗಳಿಗೆ ಮಾತ್ರ ಬಡ್ಡಿ ದರವನ್ನು ಹೆಚ್ಚಿಸಲಾಗಿದೆ.

ಬಡ್ಡಿ ಏರಿಕೆ

ಹಿರಿಯ ನಾಗರಿಕರ ಉಳಿತಾಯ ಯೋಜನೆ, ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಸೇರಿದಂತೆ ಯೋಜನೆಗಳ ಬಡ್ಡಿ ದರವನ್ನು ಶೇ.1.1ರಷ್ಟು ಹೆಚ್ಚಿಸಲಾಗಿದೆ. ಈ ಬಡ್ಡಿದರ ಏರಿಕೆ ಇಂದಿನಿಂದಲೇ ಜಾರಿಗೆ ಬಂದಿದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.

ರಿಲಯನ್ಸ್‌ ಫೌಂಡೇಶನ್‌ ಸ್ಕಾಲರ್‌ಶಿಪ್‌..ಪದವಿ ಓದುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಬಡ್ಡಿ ದರವನ್ನು ಶೇ.7.6ರಿಂದ ಶೇ.8ಕ್ಕೆ ಹೆಚ್ಚಿಸಲಾಗಿದೆ. ಮಾಸಿಕ ಆದಾಯ ಯೋಜನೆಯ ಬಡ್ಡಿ ದರವನ್ನು ಶೇ.6.7ರಿಂದ ಶೇ.7.1ಕ್ಕೆ ಹೆಚ್ಚಿಸಲಾಗಿದೆ. ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರದ ಮೇಲಿನ ಬಡ್ಡಿ ದರವನ್ನು ಶೇ.6.8ರಿಂದ ಶೇ.7ಕ್ಕೆ ಹೆಚ್ಚಿಸಲಾಗಿದೆ. ಕಿಸಾನ್ ವಿಕಾಸ್ ಬಾಂಡ್‌ಗಳು 7.2% ಬಡ್ಡಿಯನ್ನು ಗಳಿಸುತ್ತವೆ.

ಸ್ಥಿರ ಠೇವಣಿಗಳಿಗಾಗಿ

1 ವರ್ಷದ ಠೇವಣಿಗೆ ಶೇ.6.6, 2 ವರ್ಷದ ಠೇವಣಿಗೆ ಶೇ.6.8, 3 ವರ್ಷದ ಠೇವಣಿಗೆ ಶೇ.6.9 ಮತ್ತು 5 ವರ್ಷದ ಠೇವಣಿಗೆ ಶೇ.7ಕ್ಕೆ ಬಡ್ಡಿ ದರವನ್ನು ಹೆಚ್ಚಿಸಲಾಗಿದೆ.

ಇತರ ಯೋಜನೆಗಳಿಗೆ

ಉಳಿತಾಯ ಖಾತೆ, 5 ವರ್ಷಗಳ ಮರುಕಳಿಸುವ ಠೇವಣಿ ನಿಧಿ (RD), ಸಾರ್ವಜನಿಕ ಭವಿಷ್ಯ ನಿಧಿ (PPF), ಸಂಪತ್ತು ಉಳಿತಾಯ ಯೋಜನೆಗೆ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಇಲ್ಲ.