News

1.4 ಕೋಟಿಗೂ ಹೆಚ್ಚು PF ಚಂದಾದರರಿಗೆ ಸಿಗಲಿದೆ ಬಡ್ಡಿ ಮೊತ್ತ!

02 November, 2022 10:00 AM IST By: Hitesh
pf

ನೀವು ಉದ್ಯೋಗಿಗಳಾಗಿದ್ದು ಭವಿಷ್ಯ ನಿಧಿಯನ್ನು ಹೊಂದಿದ್ದೀರ, ಇಲ್ಲಿ ನಿಮಗೊಂದು ಸಿಹಿಸುದ್ದಿ ಇದೆ….

 LPG ಗ್ರಾಹಕರಿಗೆ ಸಿಹಿಸುದ್ದಿ: ಸಿಲಿಂಡರ್‌ ದರದಲ್ಲಿ ಭಾರೀ ಇಳಿಕೆ!

PF ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) (EPFO) ಸಂಸ್ಥೆಯು 2021-22ನೇ ಹಣಕಾಸು ವರ್ಷದ ಬಡ್ಡಿ ಮೊತ್ತವನ್ನು ಚಂದಾದಾರರ ಖಾತೆಗೆ ಜಮೆ ಮಾಡಲು ಪ್ರಾರಂಭಿಸಿದೆ.  

ಎಲ್ಲ ಚಂದಾದರರ ಖಾತೆಗೆ ಪಿಎಫ್‌ ಬಡ್ಡಿಮೊತ್ತವು ಸೋಮವಾರದಿಂದಲೇ ಜಮೆ ಆಗಲು ಪ್ರಾರಂಭಿವಾಗಿದೆ.

ತಾಂತ್ರಿಕ ಕಾರಣಗಳಿಂದ ಚಂದಾದರರ ಖಾತೆಗೆ ಹಣ ಸಂದಾಯವಾಗಿರಲಿಲ್ಲ.

ಇದೀಗ ಹಣ ಜಮೆ ಮಾಡಲಾಗುತ್ತಿದೆ. ಶೀಘ್ರದಲ್ಲಿಯೇ ಚಂದಾದರರಿಗೆ ಜಮೆ ಮಾಡಿದ ಹಣದ ವಿವರವು ಯುಎಎನ್ ಇಪಿಎಫ್‌ಒ (EPFO)ಅಕೌಂಟ್‌ಗಳಲ್ಲಿ ಕಾಣಿಸಲಿದೆ.

ಬಡ್ಡಿಯನ್ನು ಜಮಾ ಮಾಡಲಾಗುತ್ತಿದ್ದು, ಸಂಪೂರ್ಣವಾಗಿ ಎಲ್ಲ ಮೊತ್ತವನ್ನು ಪಾವತಿ ಮಾಡಲಾಗುವುದು ಎಂದು ಇಪಿಎಫ್‌ಒ ತಿಳಿಸಿದೆ.

ಸಾಫ್ಟ್‌ ವೇರ್ ಅಪ್‌‌ ನಿಂದಾಗಿ ಕಳೆದ ಹಣಕಾಸು ವರ್ಷದಲ್ಲಿ ಬಡ್ತಿ ಜಮಾ ಮಾಡುವಲ್ಲಿ ವಿಳಂಬವಾಗಿತ್ತು ಎಂದು ಪ್ರಕಟಣೆ ತಿಳಿಸಿದೆ.  

ಕೊಡಗು ಸೇರಿದಂತೆ ವಿವಿಧೆಡೆ ಧಾರಾಕಾರ ಮಳೆ ಸಾಧ್ಯತೆ! 

ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ

ನೌಕರರ ಪಿಂಚಣಿ ಯೋಜನೆಯಾದ 1995 (ಐಪಿಎಗ್-95)ರಲ್ಲಿ ಹಣ ಹಿಂಪಡೆಯುವ ಇರುವ ನಿಯಮವನ್ನು ಸಡಿಲಗೊಳಿಸಲು ಇಪಿಎಫ್ (EPF) ಮುಂದಾಗಿದೆ.

ಸದ್ಯ ಆರು ತಿಂಗಳಿಗಿಂತ ಕಡಿಮೆ ಸೇವೆ ಹೊಂದಿರುವ ಉದ್ಯೋಗಿಗಳು ನೌಕರರ ಪಿಂಚಣೆಯನ್ನು ಪಡೆಯಲು ಕೆಲವು ನಿರ್ದಿಷ್ಟ ಷರತ್ತುಗಳನ್ನು ವಿಧಿಸಲಾಗಿದೆ.

ಈ ಷರತ್ತುಗಳನ್ನು ಸಡಿಲಗೊಳಿಸಲು ಮುಂದಾಗಿದ್ದು, ಇದು ಸಹ ಶೀಘ್ರವೇ ಚಾಲನೆಗೆ ಬರುವ ಸಾಧ್ಯತೆ ಇದೆ.

ಈಗ ಇರುವ ನಿಯಮದ ಅನುಸಾರ ಆರು ತಿಂಗಳಿಗಿಂತ ಕಡಿಮೆ ಸೇವೆ ಹೊಂದಿರುವವರು, ತಮ್ಮ ಉದ್ಯೋಗಿಗಳ ಭವಿಷ್ಯ ನಿಧಿ ಖಾತೆಯಿಂದ ಮಾತ್ರ ಹಣ ಹಿಂಪಡೆಯಲು ಅವಕಾಶ ಇದೆ. 

Rbi: ಆರ್‌ಬಿಐ: ದೇಶದ 9 ಬ್ಯಾಂಕ್‌ಗಳಲ್ಲಿ ಡಿಜಿಟಲ್‌ ಕರೆನ್ಸಿ ಲಭ್ಯ! 

Epfo

ಇಪಿಎಫ್‌ಒ (EPFO)ವ್ಯಾಪ್ತಿ ವಿಸ್ತರಣೆ

ಇನ್ನು ಇಪಿಎಫ್‌ಒ (EPFO)  ವ್ಯಾಪ್ತಿಯನ್ನು ಸಹ ಮುಂದುವರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಚಾಲ್ತಿಯಲ್ಲಿ 6.5 ಕೋಟೆ ಚಂದಾದರರು ಇಪಿಎಫ್‌ಒನಲ್ಲಿ ಇದ್ದು, ಚಂದಾದರರ ಸಂಖ್ಯೆಯನ್ನು 6.5 ಕೋಟಿಯಿಂದ 10 ಕೋಟಿಗೆ ವಿಸ್ತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಇಪಿಎಫ್‌ಒದ 70ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಕೇಂದ್ರ ಕಾರ್ಮಿಕ ಸಚಿವ ಭೂಪೇಂದ‌ ಯಾದವ್‌ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.  

 ವಾಟ್ಸಪ್‌ನಲ್ಲೂ ಲಭ್ಯ ಮೆಟ್ರೋ ಟಿಕೆಟ್‌; ಈ ಸೇವೆ ಪ್ರಾರಂಭಿಸಿದ ದೇಶದ ಮೊದಲ ಮೆಟ್ರೋ!