News

SSLC puc ಪಾಸಾದವರಿಗೆ ಸಂತಸದ ಸುದ್ದಿ- ರೈಲ್ವೆಯಲ್ಲಿ 1000 ಹುದ್ದೆಗಳಿಗೆ ಅರ್ಜಿ ಆಹ್ವಾನ

09 September, 2020 6:38 PM IST By:

ರೈಲ್ವೆ ಇಲಾಖೆಯ ಚೆನ್ನೈನ ಇಂಟಿಗ್ರೆಲ್‌ ಕೋಚ್‌ ವಿಭಾಗದಲ್ಲಿ ಖಾಲಿ ಇರುವ 1000 ಟ್ರೇಡ್ ಅಪ್ರೆಂಟಿಸ್‌ಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.  .

ಕರ್ನಾಟಕ, ಆಂಧ್ರ, ಕೇರಳ ಸೇರಿದಂತೆ ತಮಿಳುನಾಡು ರಾಜ್ಯಗಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇದು ನೇರ ನೇಮಕಾತಿಯಾಗಿರುತ್ತದೆ. ಆಸಕ್ತರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು

ಖಾಲಿ ಹುದ್ದೆಗಳ ವಿವರ

ಕಾರ್ಪೆಂಟರ್

80

ಇಲೆಕ್ಟ್ರೀಷಿಯನ್

200

ಫಿಟ್ಟರ್

260

ಮೆಕ್ಯಾನಿಸ್ಟ್‌

80

ಪೇಂಟರ್

80

ವೆಲ್ಡರ್

290

ಎಂಎಲ್‌ಟಿ ರೇಡಿಯೋಲಜಿ

04

ಎಂಎಲ್‌ಟಿ ಪ್ಯಾಥೋಲಜಿ

04

Pasaa

02

ಒಟ್ಟು ಹುದ್ದೆಗಳ ಸಂಖ್ಯೆ

1000

 

ವಿದ್ಯಾರ್ಹತೆ: 

ಹುದ್ದೆಗಳಿಗೆ ಅನುಗುಣವಾಗಿ ಕಾರ್ಪೆಂಟರ್ / ಇಲೆಕ್ಟ್ರೀಷಿಯನ್ / ಫಿಟ್ಟರ್ / ಮೆಕ್ಯಾನಿಸ್ಟ್‌ / ಪೇಂಟರ್ / ವೆಲ್ಡರ್ / ಎಂಎಲ್‌ಟಿ ರೇಡಿಯೋಲಜಿ / ಎಂಎಲ್‌ಟಿ ಪ್ಯಾಥೋಲಜಿ / ಟ್ರೇಡ್‌ನಲ್ಲಿ ಐಟಿಐ ವಿದ್ಯಾರ್ಹತೆ ಪಡೆದವರು ಅರ್ಜಿ ಸಲ್ಲಿಸಬಹುದು.

ತರಬೇತಿ ಭತ್ಯೆ: 

 ಭಾರತ ಸರ್ಕಾರದ ನಿಯಮಗಳ ಅನ್ವಯ ತರಬೇತಿ ಭತ್ಯೆ ನೀಡಲಾಗುವುದು. ಮಾಸಿಕ 6,000 ರಿಂದ 7,000 ಭತ್ಯೆ ನೀಡಲಾಗುವುದು.

ವಯೋಮಿತಿ ಸಡಿಲಿಕೆ:

 2020ಕ್ಕೆ ಅನ್ವಯವಾಗುವಂತೆ ಕನಿಷ್ಠ 15, ಗರಿಷ್ಠ 24 ವರ್ಷದರಾಗಿರಬೇಕು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲರಿಗೆ 10 ವರ್ಷಗಳ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ನೇಮಕಾತಿ ವಿಧಾನ: ಎಸ್‌ಎಸ್‌ಎಲ್‌ಸಿ ಹಾಗೂ ಐಟಿಐ, ಪಿಯುಸಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್‌ ಲಿಸ್ಟ್‌ ತಯಾರಿಸಿ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. 

ಅಪ್ಲಿಕೇಶನ್‌ ಶುಲ್ಕ:

ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಪ್ರೋಸೆಸಿಂಗ್ ಫೀಸ್‌ ರೂ.100 ಪಾವತಿಸಬೇಕು. ಆನ್‌ಲೈನ್‌ ಮೂಲಕ ಸರ್ವೀಸ್‌ ಚಾರ್ಜ್ ಅನ್ನು ಪಾವತಿಸಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನ: 25 ಸೆಪ್ಟೆಂಬರ್‌ 2020

ವೆಬ್‌ಸೈಟ್‌: https://indianrailwayrecruitment.in  ಅಧಿಸೂಚನೆಯಲ್ಲಿ ಹುದ್ದೆಗಳ ವಿವರ, ಅರ್ಜಿಸಲ್ಲಿಸುವ ವಿಧಾನ ಸೇರಿದಂತೆ ಇತರ ಮಾಹಿತಿಗಳನ್ನು ನೋಡಬಹುದು.

ಅರ್ಜಿ ಸಲ್ಲಿಸುವ ವಿಧಾನ:  ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. ಅಧಿಕೃತ ವೆಬ್‌ಸೈಟ್‌  https://indianrailwayrecruitment.in ಗೆ ಲಾಗಿನ್‌ ಆಗಿ ಅರ್ಜಿ ಸಲ್ಲಿಸುವ ಮಾಹಿತಿಯನ್ನು ಪಡೆಯಬಹುದು. ಇತರೆ ವಿಧಾನದಲ್ಲಿ ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.