News

ಫಸಲ್‌ ಬಿಮಾ ಯೋಜನೆ: 6 ವರ್ಷದಲ್ಲಿ 2 ಸಾವಿರ ಕೋಟಿ..ಬಂಪರ್‌ ಲಾಭದಲ್ಲಿ ವಿಮಾ ಕಂಪನಿಗಳು

08 August, 2022 11:21 AM IST By: Maltesh
Insurance companies made ₹2000 crore from PM Fasal Bima in 6 years karnataka

ದೇಶದ ಅತ್ಯಂತ ಪ್ರಮುಖ ವಿಮೆ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ.. ರೈತರಿಗೆ ಕಷ್ಟ ಕಾಲದಲ್ಲಿ ಕೈ ಹಿಡಿದು ನಿಂತು ಅವರ ಕಷ್ಟಕ್ಕೆ ನೆರವಾಗಬೇಕಿದ್ದ  ಈ ವಿಮಾ ಯೋಜನೆ ಎಷ್ಟರ ಮಟ್ಟಿಗೆ ನೆರವು ನೀಡಿದೆ ಎಂಬುದು ಸದ್ಯದ ಪರಿಸ್ಥಿತಿಯಲ್ಲಿ ಪ್ರಶ್ನಾರ್ಹ..

ಹೌದು ರೈತರಿಗೆ ಈ ವಿಮಾ ಯೋಜನೆಯಿಂದ ಎಷ್ಟು ಪ್ರಯೋಜನೆ ಆಗಿದೆ ಅಥವಾ ಇಲ್ಲವೋ ಎಂಬುದರ ನಡುವೆ, ವಿಮಾ ಕಂಪನಿಗಳು ಮಾತ್ರ ಬಂಪರ್‌ ಲಾಭದಲ್ಲಿವೆ ಎಂದು ಅದರ ಅಂಕಿ ಸಂಖ್ಯೆಗಳೆ ಹೇಳುತ್ತಿವೆ.

ಏನಿದು ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ..?

ಬೆಳೆ ನಷ್ಟ, ಬೆಳೆ ವಿಫಲಗೊಂಡ ಸಂದರ್ಭದಲ್ಲಿ ನಷ್ಟ ಹೊಂದಿದ ರೈತರ ಕೈಹಿಡಿಯಲು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಕೇಂದ್ರ ಸರ್ಕಾರದ ಸಹಭಾಗೀತ್ವದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಅನುಷ್ಠಾನಗೊಳಿಸಿದೆ.

ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಕರ್ನಾಟಕ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯನ್ನು ಈಗಾಗಲೇ (PMFBY) ಜಾರಿಗೆ ತರಲಾಗಿದೆ. ಈ ಯೋಜನೆಯಡಿ ಹಿಂಗಾರು ಹಂಗಾಮಿನಲ್ಲಿ ನಿರ್ಧಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ ಮತ್ತು ಬೆಳೆ ಮುಳುಗಡೆ ಗಳಿಂದ ಉಂಟಾಗುವ ನಷ್ಟದ ನಿರ್ಧರಣೆಯನ್ನು ವೈಯಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ನೀಡಲಾಗುವುದು.

ಒಂದು ವೇಳೆ ಒಂದು ಅಧಿಸೂಚಿತ ಘಟಕದಲ್ಲಿ ಶೇಕಡಾ 25 ಕ್ಕಿಂತ ಹೆಚ್ಚು ವಿಸ್ತೀರ್ಣದಲ್ಲಿ ಬೆಳೆ ನಷ್ಟವಾದರೆ ಆ ಅಧಿಸೂಚಿತ ಘಟಕದಲ್ಲಿ ಬೆಳೆ ವಿಮೆಗೆ ಒಳಪಟ್ಟ ರೈತರಲ್ಲಿ ಬೆಳೆ ನಷ್ಟವಾದ ರೈತರಿಗೆ ಮಾತ್ರ ಮಾದರಿ ಸಮೀಕ್ಷೆಗನುಣವಾಗಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲಾಗುವುದು.

ಇದನ್ನೂ ಮಿಸ್‌ ಮಾಡ್ದೆ ಓದಿ:

ಕಡಿಮೆ ಖರ್ಚಿನಲ್ಲಿ ಈ ಗಿಡಗಳನ್ನು ಬೆಳೆಯಲು ಪ್ರಾರಂಭಿಸಿ 60 ವರ್ಷಗಳ ವರೆಗೆ ನಿರಂತರ ಆದಾಯ ಪಡೆಯಿರಿ

ವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ವಿಮಾ ಸಂಸ್ಥೆಯ ಕಚೇರಿಗಳಿಗೆ 48 ಗಂಟೆಯೊಳಗೆ ಮಾಹಿತಿ ನೀಡಬೇಕು. ಯಾವುದೇ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು, ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣವನ್ನು 48 ಗಂಟೆಗಳೊಳಗಾಗಿ ತಿಳಿಸಿದಲ್ಲಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು.

ಭರ್ಜರಿ ಲಾಭದಲ್ಲಿ ವಿಮಾ ಕಂಪನಿಗಳು

 ಸದ್ಯ ಒಟ್ಟು 6 ವರ್ಷಗಳಲ್ಲಿ ಕೇಂದ್ರ, ರಾಜ್ಯ ಮತ್ತು ರೈತರು ಪಾವತಿಸಿದ ಒಟು ಮೊತ್ತಸೇರಿ 9,443 ಕೋಟಿ ರೂ. ಇನ್ಸೂರೆನ್ಸ್ ಕಂತು ಪಾವತಿ ಆಗಿದೆ. ಇದರಲ್ಲಿ ಒಟ್ಟು 7,311 ಕೋಟಿ ರೂ. ವಿಮಾ ಪರಿಹಾರ ನೀಡಲಾಗಿದೆ ಎನ್ನಲಾಗಿದೆ.  ಇದರ ಪ್ರಕಾರ ನೋಡುವುದಾದರೆ ವಿಮಾ ಕಂಪನಿಗಳು ಬರೋಬ್ಬರಿ 2100 ಕೋಟಿ ರೂಪಾಯಿಗಳಷ್ಟು ಲಾಭದಲ್ಲಿವೆ ಎಂದು ಈ ಲೆಕ್ಕಾಚಾರದ ಮೇಲೆ ಗೊತ್ತಾಗುತ್ತದೆ.


2019-20ರಲ್ಲಿ 10,46,937 ಹೆಕ್ಟೇರ್, 2020-21ರಲ್ಲಿ 20.87 ಲಕ್ಷ, 2021-22ರಲ್ಲಿ ಅಂದಾಜು 6 ಲಕ್ಷ ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ ಎಂದು ಸ್ಪಷ್ಟಪಡಿಸಿದ ಸರಕಾರ ಬೆಳೆ ಪರಿಹಾರವನ್ನೂ ರೈತರಿಗೆ ನೀಡಿದೆ.