News

ಮನರೇಗಾ ಯೋಜನೆಯಡಿ ಮೊಬೈಲ್‌ನಲ್ಲೇ ಉದ್ಯೋಗಕ್ಕೆಅರ್ಜಿ ಸಲ್ಲಿಸಿ

19 July, 2020 8:21 PM IST By:

ಕೊರೋನಾ ಸಾಂಕ್ರಾಮಿಕ ರೋಗವು ಲಕ್ಷಾಂತರ ಜನರ ಉದ್ಯೋಗವನ್ನು ಕಸಿದುಕೊಂಡಿದೆ. ಇದರಿಂದಾಗಿ ವ್ಯಾಪಾರಸ್ಥರಿಗೆ ಅಲ್ಪಸ್ವಲ್ಪ ಹಾನಿಯಾಗಿರಬಹುದು ಆದರೆ ಬಡವರಿಗೆ ಅತೀ ಹೆಚ್ಚು ಹಾನಿಯಾಗಿದೆ. ಇಂತಹ  ಸಂಕಷ್ಟಕ್ಕೆ ಸಿಲುಕಿರುವ ಗ್ರಾಮೀಣ ಭಾಗದ ಜನತೆಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNREGA)ಯಡಿ ಕೆಲಸ ನೀಡುವಂತೆ ಸೂಚಿಸಿದ ಕೇಂದ್ರ ಸರಕಾರ ಇದೀಗ ಉದ್ಯೋಗದ (Employment) ಬೇಡಿಕೆಯನ್ನು ಮೊಬೈಲ್‌ನಿಂದಲೇ ಸಲ್ಲಿಕೆ ಮಾಡಲು ಅವಕಾಶ ಕಲ್ಪಿಸಿದೆ.

ಲಾಕ್ಡೌನ್ ನಂತರ ಲಕ್ಷಾಂತರ ಜನ ಜಾಬ್ ಕಾರ್ಡ್ ಪಡೆದಿದ್ದಾರೆ. ಈಗಾಗಲೇ ಕೆಲಸಗಳು ಆರಂಭವಾಗಿದೆ. ಆದರೆ ಇನ್ನೂ ಬಹಳಷ್ಟು ಬಡ ಜನರಿಗೆ ಮನರೇಗಾ ಕುರಿತು ಸರಿಯಾದ ಮಾಹಿತಿ ಸಿಗುತ್ತಿಲ್ಲ. ಬಹಳಷ್ಟು ಜನರ ಹತ್ತಿರ ಸ್ಮಾರ್ಟ್ ಫೋನ್ (Smartphone)  ಇದೆ, ಆದರೆ ಮಾಹಿತಿಯಿಲ್ಲ, ಮೊಬೈಲ್‌ನಿಂದಲೇ ಮನರೇಗಾ ಕುರಿತು ಸಂಪೂರ್ಣ ಮಾಹಿತಿ ಸಿಗಲಿದೆ. ಅದು ಹೇಗೆ ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿದ್ದರೆ ಈ ಕೆಳಗಿನ ಮಾಹಿತಿ ಓದಿ...

 ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಅಡಿ ಉದ್ಯೋಗದ ಬೇಡಿಕೆ ಸಲ್ಲಿಸಲು ಇನ್ನು ಗ್ರಾಮ ಪಂಚಾಯಿತಿ ಕಚೇರಿಗೆ ಅಲೆಯುವ ಅಗತ್ಯವಿಲ್ಲ. ಇದಕ್ಕಾಗಿಯೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಕಾಯಕ ಮಿತ್ರ’ (kayakamitra) ಎಂಬ ಮೊಬೈಲ್‌ ಅಪ್ಲಿಕೇಶನ್‌ ಅಭಿವೃದ್ಧಿಪಡಿಸಿದ್ದುಎಷ್ಟು ದಿನ ಬೇಕೋ ಅಷ್ಟು ದಿನ ಉದ್ಯೋಗದ ಬೇಡಿಕೆ ಸಲ್ಲಿಸಬಹುದು. ಈ ಮೊಬೈಲ್‌ ಅಪ್ಲಿಕೇಶನ್‌ ಅನ್ನು ಇಲಾಖೆ ವೆಬ್‌ಸೈಟ್‌ನ ಲಿಂಕ್‌ ಅಥವಾ ಗೂಗಲ್ ಪ್ಲೇಸ್ಟೋರ್‌ನಿಂದ (Playstore) ಡೌನ್‌ಲೋಡ್(Download) ಮಾಡಿಕೊಳ್ಳಬಹುದು.

ಕಾಯಕ ಮಿತ್ರ (Kayakamitra):

ಸರಕಾರ ಕಾಯಕ ಮಿತ್ರ ಆ್ಯಪ್‌ ಮೂಲಕ ಕಾರ್ಮಿಕರ ಹತ್ರ ಬರಲು ಪ್ರಯತ್ನಿಸಿದೆ. ಇದ್ದಲ್ಲೇ ಅವರಿಗೆ ಕೂಲಿ ಕೊಟ್ಟು ಸಮಾಜವನ್ನು ಸಬಲವಾಗಿಸಲು, ಗ್ರಾಮಗಳ ಅಭಿವೃದ್ಧಿಗೊಳಿಸಲು, ರೈತರಿಗೆ ಸಹಾಯ ಕಲ್ಪಿಸಲು ಈ 'ಕಾಯಕ ಮಿತ್ರ ಆ್ಯಪ್‌' ನೆರವಾಗಿದೆ.

ಕೂಲಿಕಾರರು ತಮಗೆ ಎಷ್ಟು ದಿನಗಳವರೆಗೆ ಕೆಲಸ ಬೇಕು ಎಂಬುದನ್ನು ನಮೂನೆ 6ರ ಮೂಲಕ ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಬೇಕಿತ್ತು. ಅದನ್ನು ಆಧರಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಎನ್‌ಎಂಆರ್‌ ತಯಾರಿಸಿ ಕೆಲಸವನ್ನು ಹಂಚಿಕೆ ಮಾಡುತ್ತಿದ್ದರು. ಈ ಅಪ್ಲಿಕೇಶನ್‌ ಪರಿಚಯಿಸಿರುವುದರಿಂದ ಪಂಚಾಯಿತಿಗೆ ತೆರಳಿ ಅರ್ಜಿ ಸಲ್ಲಿಸುವ ಕೆಲಸ ತಪ್ಪಲಿದೆ. 

ಕಾರ್ಯವಿಧಾನ ಹೇಗೆ? ಕಾಯಕ ಮಿತ್ರ ಆ್ಯಪ್‌ ಡೌನ್‌ಲೋಡ್‌ ಮಾಡಿದ ಬಳಿಕ ಜಾಬ್‌ ಕಾರ್ಡ್‌ ಹೊಂದಿರುವವರು ಒಟ್ಟು ಏಳು ಹಂತಗಳ ಮಾಹಿತಿಯನ್ನು ಅಪ್‌ಲೋಡ್‌ (upload) ಮಾಡಬೇಕುತಮ್ಮ ಹೆಸರುತಂದೆಯ ಹೆಸರುಮೊಬೈಲ್‌ ಸಂಖ್ಯೆ ನಮೂದಿಸಿದ ಬಳಿಕ ಜಿಲ್ಲೆತಾಲ್ಲೂಕುಗ್ರಾಮ ಪಂಚಾಯಿತಿ ಮಾಹಿತಿಯನ್ನು ನೀಡಬೇಕು. ಪಂಚಾಯಿತಿ ಹೆಸರು ಕ್ಲಿಕ್‌ ಮಾಡಿದ ಬಳಿಕ ಗ್ರಾ.ಪಂ. ವ್ಯಾಪ್ತಿಯಲ್ಲಿ ಜಾಬ್‌ ಕಾರ್ಡ್‌ ಪಡೆದವರ ಹೆಸರು ಹಾಗೂ ಅವರ ಕಾರ್ಡ್‌ ಸಂಖ್ಯೆ ಕಾಣಿಸುತ್ತವೆ.

ಅದರಲ್ಲಿ ತಮ್ಮ ಹೆಸರನ್ನು ಆಯ್ಕೆ ಮಾಡಿದರೆ ಎಷ್ಟು ದಿನಗಳವರೆಗೆ ಕೂಲಿ ಬೇಕು ಎಂಬ ಸಂದೇಶ ಬರುತ್ತದೆ. ಅಗತ್ಯವಿದ್ದಷ್ಟು ಉದ್ಯೋಗದ ದಿನಗಳನ್ನು ದಾಖಲಿಸಿದ ಬಳಿಕ ಯಾವಾಗಿನಿಂದ ಕೆಲಸ ಬೇಕು ಎಂಬುದನ್ನೂ ತಿಳಿಸಿದರೆ ಆ್ಯಪ್‌ ಮೂಲಕ ಅಷ್ಟೂ ಮಾಹಿತಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿಯನ್ನು ತಲುಪುತ್ತದೆ. ವಿವರಗಳನ್ನು ಪರಿಶೀಲಿಸಿದ ಬಳಿಕ ಪಿಡಿಒ ಎನ್‌ಎಂಆರ್‌ ಸೃಷ್ಟಿಸಿ ಕೆಲಸ ಕೊಡುತ್ತಾರೆ. ಅರ್ಜಿ ಸಲ್ಲಿಸಿದ ದಿನದಿಂದ 15 ದಿನಗಳ ಒಳಗಾಗಿ ಕೆಲಸ ಕೊಡದಿದ್ದರೆ ನಿರುದ್ಯೋಗ ಭತ್ಯೆ ಕೊಡಬೇಕಾಗುತ್ತದೆ.