News

ಕಬ್ಬು ಬೆಳೆಗಾರರಿಂದ ಮುಖ್ಯಮಂತ್ರಿ ಮನೆಯ ಮುಂದೆ ವಿನೂತನ ಪ್ರತಿಭಟನೆ!

22 November, 2022 4:46 PM IST By: Hitesh
Innovative protest by sugarcane growers in front of the Chief Minister's house!

ಕಬ್ಬು ಎಫ್ಆರ್‌ಪಿ ದರ ಏರಿಕೆ, ಕಬ್ಬು ಬೆಳೆಗಾರ ರೈತರಿಂದ ಉಗುಳುವ ಚಳವಳಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆ ಮುಂದೆ ಆಹೋ ರಾತ್ರಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.  

Elephant Task Force: ರಾಜ್ಯದಲ್ಲಿ ಮನುಷ್ಯ- ಕಾಡಾನೆ ಸಂಘರ್ಷ ತಡೆಗೆ ನಾಲ್ಕು ಜಿಲ್ಲೆಗಳಲ್ಲಿ ಟಾಸ್ಕ್‌ ಪೋರ್ಸ್‌ ರಚನೆ

ಕಬ್ಬಿನ ಎಫ್ಆರ್‌ಪಿ ಹೆಚ್ಚುವರಿ ದರ ನಿಗದಿಗೆ ಒತ್ತಾಯಿಸಿ ರಾಜ್ಯ ಸರ್ಕಾರದ ವಿಳಂಬ ನೀತಿ ಖಂಡಿಸಿ ಈ ಪ್ರತಿಭಟನೆಯನ್ನು ಮಾಡಲಾಗುತ್ತಿದೆ. 

ಮುಖ್ಯಮಂತ್ರಿ ಗೃಹಕಚೇರಿ ಎದುರು ಧರಣಿ ನಡೆಸಲು ತಯಾರಿ ನಡೆಸುತ್ತಿದ್ದ ರೈತ ಮುಖಂಡರ ಚೂತೆ‌ ಉಪ್ಪರಪೇಟೆ ಪೂಲಿಸ್ ಠಾಣೆಯ ಡಿಸಿಪಿ ಮಾತುಕತೆ ನಡೆಸಿ,

ರೈತರ ಮನವೂಲಿಸಿ ಮುಖ್ಯಮಂತ್ರಿ ಪರವಾಗಿ ಸರ್ಕಾರದ ಮುಖ್ಯಸ್ಥರನ್ನು ಚಳುವಳಿ ಜಾಗಕೆ ಕರೆದು ತಂದು ಸಮಸ್ಯೆ ಬಗೆಹರಿಸಲು ಯತ್ನಿಸುವುದಾಗಿ ಭರವಸೆ ನೀಡಿ,ಸ್ವತಂತ್ರ ಉದ್ಯಾನವನದಲ್ಲಿ ಚಳುವಳಿ ನಡೆಸುವಂತೆ ಕೇಳಿಕೂಂಡ ಕಾರಣ, ನಿರಂತರ ಆಹೋ ರಾತ್ರಿ ಧರಣಿ ಆರಂಭಿಸಲಾಗಿದೆ.

ಕಬ್ಬು ಹೆಚ್ಚುವರಿ ದರ ನಿಗದಿ ಬಗ್ಗೆ ರಾಜ್ಯ ಸರ್ಕಾರ ತಜ್ಞರ ಸಮಿತಿ ರಚಿಸಿ ಐದು ದಿನದಲ್ಲಿ ವರದಿ ಪಡೆದು 20ರ ಒಳಗಾಗಿ ತಿರ್ಮಾನ ಕೈಗೂಳುವ ಭರವಸೆ ನೀಡಿದ ಕಾರಣ ನಾವು ಎಲ್ಲಾ ಜಿಲ್ಲೆಯಲ್ಲಿ ನಡೆಯುತ್ತಿದ 11ದಿನಗಳ ಚಳುವಳಿ ತಾತ್ಕಾಲಿಕವಾಗಿ ಕೈ ಬಿಡಲಾಗಿತ್ತು.

ಸಕ್ಕರೆ ಸಚಿವರು ನುಡಿದಂತೆ ನಡೆಯದೆ ಇರುವುದನ್ನು ಖಂಡಿಸಿ, ರೈತರಿಗೆ ನ್ಯಾಯ ನೀಡುವುದಾಗಿ ಭರವಸೆ ನೀಡಿ ಹುಸಿಗೂಳಿಸಿದ ವರ್ತನೆಗೆ ಬೇಸತ್ತು , ಸರ್ಕಾರವನ್ನ ಭೆತ್ತಲು ಮಾಡಲು ಈ ರೀತಿ ಚಳುವಳಿ  ಹಮ್ಮಿಕೊಳ್ಳಲಾಗಿದೆ, ಎಂದು  ಅವರು ಹೇಳಿದ್ದಾರೆ.

ಅಡಿಕೆ ಬೆಳೆಗೆ ಎಲೆಚುಕ್ಕಿ ರೋಗ: ಕ್ರಿಮಿನಾಶಕ ಸಿಂಪಡಣೆಗೆ 10 ಕೋಟಿ ಅನುದಾನ; ಸಿ.ಎಂ ಬೊಮ್ಮಾಯಿ   

ಕಬ್ಬು ಬೆಳೆಗಾರರು “ರೈತದ್ರೋಹಿ ಸರ್ಕಾರಕ್ಕೆ ಥೂ ಥೂ ಚೀ ಚೀ, ಸುಳ್ಳು ಹೇಳುವ ಮಂತ್ರಿಗೆ ಥೂ ಥೂ ಚೀ ಚೀ, ಸಕ್ಕರೆ ಕಾರ್ಖಾನೆ ಮಾಲೀಕರ ಗುಲಾಮಗಿರಿ ಸರ್ಕಾರಕ್ಕೆ ಥೂ ಥೂ ಚೀ ಚೀ, ಹಗಲು ನಾಟಕವಾಡುವ ಸರ್ಕಾರಕ್ಕೆ ಚೀ ಚೀ” ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.  

ಕರ್ನಾಟಕ ರಾಜ್ಯಕ್ಕಿಂತ ಸಕ್ಕರೆ ಇಳುವರಿ ಕಡಿಮೆ ಇರುವ ಪಂಜಾಬ್ ರಾಜ್ಯದಲ್ಲಿ 3800, ಹರಿಯಾಣದಲ್ಲಿ 3750  ಉತ್ತರ ಪ್ರದೇಶದಲ್ಲಿ 3500 ಗುಜರಾತ್ ನಲ್ಲಿ 4400 ಮಹಾರಾಷ್ಟ್ರದಲ್ಲಿ ಕಟವ್ ಕೂಲಿ ಸಾಗಾಣಿಕೆ ಹೂರತುಪಡಿಸಿ 3200 ದರ ರಾಜ್ಯ ಸರ್ಕಾರಗಳೇ ನಿಗದಿ ಮಾಡಿದ್ದಾರೆ.

ತಮಿಳುನಾಡಿನಲ್ಲಿ ಕಬ್ಬು ಸಾಗಾಣಿಕೆ  ವೆಚ್ಚವನ್ನು ಸಕ್ಕರೆ ಕಾರ್ಖಾನೆಗಳೆ ಬರಿಸಿ 3150 ನಿಗದಿಪಡಿಸಿ ದ್ದಾರೆ, ರಾಜ್ಯದಲ್ಲಿ ಮಾತ್ರ ಕಡಿಮೆ ಯಾಕೆ,  ಕಬ್ಬಿನ ಕಟಾವು ಸಾಗಾಣಿಕೆ ವೆಚ್ಚದಲ್ಲಿ ರೈತರನ್ನು ಸುಲಿಗೆ ಮಾಡುತ್ತಿದ್ದ ಲಗಾಣಿ ಹೆಚ್ಚು ಪಡೆಯುತ್ತಿದ್ದಾರೆ

ಕಬ್ಬು ಕಟಾವು 16 ತಿಂಗಳಾಗುತ್ತಿದೆ ಸಾಗಾಣಿಕೆ ವೆಚ್ಚ ಎಲ್ಲ ದೂರಕ್ಕೂ ಒಂದೆ ದರ ನಿಗದಿ ಸರಿಯಲ್ಲ ರೈತನ ಜಮೀನಿನಿಂದ ಕಾರ್ಖಾನೆ ನಡುವೆ ಇರುವ ಕಿಲೋಮೀಟರ್  ಆಧಾರದ ದರ ಕಡಿತ ಮಾಡಬೇಕು, ಕಾನೂನು ಬಾಹಿರವಾಗಿ ಹೆಚ್ಚುವರಿ ಮಾಡಿದರೆ ಆಯಾ ಜಿಲ್ಲಾಧಿಕಾರಿಗಳು ಕಾರ್ಖಾನೆಗಳ ಮೇಲೆ ಚೀಟಿಂಗ್ ಕೇಸ್ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.  

ಕಬ್ಬು ಕಟಾವು16-18 ತಿಂಗಳು ವಿಳಂಬವಾಗುತ್ತಿದೆ ಈ ರೀತಿ ವಿಳಂಬವಾಗಿ ಕಟಾವು ಮಾಡಿದ ಕಬ್ಬಿಗೆ ವಿಳಂಬದ ಅವಧಿಗೆ ಶೇಕಡ 15 ಬಡ್ಡಿ ಸೇರಿಸಿ ಹೆಚ್ಚುವರಿ ಹಣ ಕಾರ್ಖಾನೆಗಳು ನೀಡುವಂತಾಗಬೇಕು.

PaddyPrice | ಕ್ವಿಂಟಲ್ ಭತ್ತಕ್ಕೆ ₹2450 ನಿಗದಿ; ಜಿಲ್ಲಾಡಳಿತ ಸ್ಪಷ್ಟನೆ|ಇಲ್ಲಿವೆ ಈ ದಿನದ ಪ್ರಮುಖ ಕೃಷಿ ಸುದ್ದಿಗಳು

ರೈತ ಮತ್ತು ಕಾರ್ಖಾನೆ ನಡುವೆ ಸರ್ಕಾರ ಜಾರಿಗೆ ತಂದಿರುವ ದ್ವಿಪಕ್ಷೀಯ ಒಪ್ಪಂದಪತ್ರ ಜಾರಿ ಮಾಡಬೇಕು, ಒಪ್ಪಂದ ಪತ್ರ ಎಲ್ಲಾ ರೈತರಿಗೂ ಕಡ್ಡಾಯವಾಗಿ ಕೊಡಬೇಕು, ಧರಣಿ ನಿರತರ  ಬಳಿ ಬಂದ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಅಯುಕ್ತ ಶಿವಾನಂದ ಕಿಲಕೇರಿ, ತಜ್ಞರ ವರದಿ ಬಂದಿದೆ ಪರಿಶೀಲನೆ ನಡೆಸಲಾಗುತ್ತಿದೆ, 24ರಂದು ಕಾರ್ಖಾನೆ ಮಾಲೀಕರ ಮತ್ತೊಂದು ಸಭೆ ಕರೆಯಲಾಗಿದೆ, ಎಂದಾಗ ರೈತರು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು.

ಸರ್ಕಾರ ಹೆಚ್ಚುವರಿ ದರ ನಿಗದಿ ಮಾಡುವ ತನಕ ಚಳುವಳಿ ಕೈ ಬಿಡುವುದಿಲ್ಲ, ಹುಸಿಬರವಸೆಗಳು ಬೇಡ, ಮುಖ್ಯಮಂತ್ರಿಗಳಿಗೆ ವರದಿ ಕೊಟ್ಟು ನ್ಯಾಯಯುತ ದರ ನಿಗದಿಪಡಿಸಿ,ಎಂದು ಅಕ್ರೋಶ ವ್ಯಕ್ತಪಡಿಸಿದರು ಬಂಧ ದಾರಿಗೆ ಸೂಕ್ತವಿಲ್ಲದಂತೆ ಆಯುಕ್ತರು ವಾಪಸ್ ಹೋದರು.

ಅತಿವೃಷ್ಟಿ ಮಳೆಹಾನಿ ಕಾರಣ ಭತ್ತದ ಬೆಳೆ ಸ್ವಲ್ಪಮಟ್ಟಿಗೆ ಇಳುವರಿ ಕಡಿಮೆಯಾಗುತ್ತಿದೆ, ಬೆಲೆ ಕಡಿಮೆಯಾಗುವ ಕಾರಣ ಕೂಡಲೇ ಭತ್ತ ಖರೀದಿ ಕೇಂದ್ರಗಳನ್ನು ತಕ್ಷಣ ತೆರೆಯಬೇಕು ಹೆಚ್ಚುವರಿ ಪ್ರೂತ್ಸಹಧನ ಕ್ವಿಂಟಾಲ್ ಗೆ 500 ನೀಡಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.  

ಬ್ಯಾಂಕುಗಳು ರೈತರಿಗೆ ಸಾಲ ನೀಡುವಾಗ ಸಿಬಿಲ್ ಸ್ಕೋರ್ ಪರಿಗಣಿಸಿ ಸಾಲ ನೀಡುವ ಪದ್ಧತಿ ಕೈಬಿಡಬೇಕು ಎಂದು 5ತಿಂಗಳ ಹಿಂದೆ ರಿಸರ್ವ್ ಬ್ಯಾಂಕ್ ಮುಂದೆ ಚಳುವಳಿ ನಡೆಸಿದಾಗ ,ಮುಖ್ಯಸ್ಥರು ಸಭೆ ಕರೆಯುವ ಭರವಸೆ ನೀಡಿದಂತೆ ಸಭೆ ಕರೆದು

ಸಮಸ್ಯೆ ಬಗೆಹರಿಸದ ಕಾರಣ ಮೈಸೂರು ಜಿಲ್ಲೆಯಲ್ಲಿ ರೈತನೂಬ್ಬ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಸಾಲ ಸಿಗುತ್ತಿಲ್ಲ ಎಂದು ವಿಷ ಸೇವಿಸಿ ಸಾವು ಬದುಕಿನ ನಡುವೆ ಹೂರಡುತ್ತಿದ್ದಾನೆ, ಈ ರೀತಿ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಆಕ್ರೋಶ ಹೊರಹಾಕಿದರು.   

ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳುವವರೆಗೆ ನಿರಂತರ ಆಹೋ ರಾತ್ರಿ ಹೋರಾಟ ಒಂದೂಂದು ಜಿಲ್ಲೆಯವರು ಒಂದು ದಿನ ಧರಣಿ ನಡೆಸಲು ತೀರ್ಮಾನಿಸಲಾಗಿದೆ.

 ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷ ನಾರಾಯಣರೆಡ್ಡಿ, ಸುರೇಶ್ ಮ ಪಾಟೀಲ್, ಬರಡನಪುರ ನಾಗರಾಜ್,

ಪರಸುರಾಮ,ಕಿರಗಸೂರು ಶಂಕರ್ ,ನವನಿರ್ಮಾಣ ಸೇನೆ ಅಧ್ಯಕ್ಷ ಯತಿರಾಜ್ ನಾಯ್ಡು, ಗುರುಸಿದ್ದಪಕೂಟಗಿ ,

ಕಲ್ಲಪ್ಪ ಬಿರಾದಾರ,ಸಿದ್ದೇಶ್, ಹಾಡ್ಯರವಿ, ಮಂಜುನಾಥ್, ಎಸ್ ಬಿ ಸಿದ್ನಾಳ, ಪರಶಿವಮೂರ್ತಿ ಮುಂತಾದ ನೂರಾರು ರೈತರು ಇದ್ದರು.