News

ಭಾರತದಲ್ಲಿ ಈ ವರ್ಷ ಮೊಬೈಲ್ ಫೋನ್‌ ರಫ್ತು 9 ಲಕ್ಷ ಕೋಟಿ ರೂ.!

18 May, 2023 3:33 PM IST By: Hitesh
India's mobile phone export this year is Rs 9 lakh crore!

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬುಧವಾರ ನಡೆದ ಸಭೆಯಲ್ಲಿ ಹಲವು ವಿಷಯಗಳಿಗೆ ಅನುಮೋದನೆ ನೀಡಲಾಗಿದೆ.

ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿರುವುದರಲ್ಲಿ 17,000 ಕೋಟಿ ರೂ.ಗಳ ಬಜೆಟ್

ವೆಚ್ಚದೊಂದಿಗೆ ಐಟಿ ಹಾರ್ಡ್‌ವೇರ್‌ಗಾಗಿ ಉತ್ಪಾದನೆ ಆಧಾರಿತ ಪ್ರೋತ್ಸಾಹಧನ ಯೋಜನೆ-2.0ಗೆ ಅನುಮೋದನೆ ನೀಡಿರುವುದು ಸಹ ವಿಶೇಷವಾಗಿದೆ.   

ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಯು ಕಳೆದ 8 ವರ್ಷಗಳಲ್ಲಿ 17% ಸಮಗ್ರ ವಾರ್ಷಿ ಬೆಳವಣಿಗೆ ದರದೊಂದಿಗೆ (ಸಿಎಜಿಆರ್) ಸ್ಥಿರವಾದ ಬೆಳವಣಿಗೆಯನ್ನು ಕಂಡಿದೆ.

ಈ ವರ್ಷ ಇದು ಉತ್ಪಾದನೆಯಲ್ಲಿ ಪ್ರಮುಖ ಮಾನದಂಡ - 105 ಶತಕೋಟಿ ಅಮೆರಿಕನ್‌ ಡಾಲರ್‌ (ಸುಮಾರು 9 ಲಕ್ಷ ಕೋಟಿ ರೂ.) ಆಗಿದೆ.

ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಫೋನ್ ತಯಾರಕ ರಾಷ್ಟ್ರವಾಗಿದೆ.

ಮೊಬೈಲ್ ಫೋನ್‌ಗಳ ರಫ್ತು ಈ ವರ್ಷ 11 ಶತಕೋಟಿ ಅಮೆರಿಕನ್‌ ಡಾಲರ್‌ಗಳ (ಸುಮಾರು 90 ಸಾವಿರ ಕೋಟಿ ರೂ.) ಪ್ರಮುಖ ಮೈಲುಗಲ್ಲನ್ನು ದಾಟಿದೆ. 

ಜಾಗತಿಕ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆಯು ಭಾರತಕ್ಕೆ ಆಗಮಿಸುತ್ತಿದ್ದು,

ಭಾರತವು ಪ್ರಮುಖ ಎಲೆಕ್ಟ್ರಾನಿಕ್ಸ್ ಉತ್ಪಾದನಾ ದೇಶವಾಗಿ ಹೊರಹೊಮ್ಮುತ್ತಿದೆ.

ಮೊಬೈಲ್ ಫೋನ್‌ಗಳಿಗಾಗಿ ಉತ್ಪಾದನೆ ಆಧಾರಿತ ಪ್ರೋತ್ಸಾಹಧನ ಯೋಜನೆಯ(ಪಿಎಲ್‌ಐ) ಯಶಸ್ಸನ್ನು ಆಧರಿಸಿ,

ಐಟಿ ಹಾರ್ಡ್‌ವೇರ್‌ಗಾಗಿ ʻಪಿಎಲ್‌ಐ ಯೋಜನೆ 2.0ʼಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. 

ಪ್ರಮುಖ ಲಕ್ಷಣಗಳು:

ಐಟಿ ಹಾರ್ಡ್‌ವೇರ್‌ಗಾಗಿ ʻಪಿಎಲ್‌ಐ ಯೋಜನೆ-2.0ʼ,  ಲ್ಯಾಪ್ ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಆಲ್-ಇನ್-ಒನ್ ಪಿಸಿಗಳು,

ಸರ್ವರ್‌ಗಳು ಮತ್ತು ಅಲ್ಟ್ರಾ ಸ್ಮಾಲ್ ಫಾರ್ಮ್ ಫ್ಯಾಕ್ಟರ್ ಸಾಧನಗಳನ್ನು ಒಳಗೊಂಡಿದೆ

ಈ ಯೋಜನೆಯ ಆಯವ್ಯಯ ವೆಚ್ಚ 17,000 ಕೋಟಿ ರೂ.ಗಳು.

ಈ ಯೋಜನೆಯ ಅವಧಿ 6 ವರ್ಷಗಳು.

ನಿರೀಕ್ಷಿತ ಉತ್ಪಾದನೆ ಹೆಚ್ಚಳ 3.35 ಲಕ್ಷ ಕೋಟಿ ರೂ.

ನಿರೀಕ್ಷಿತ ಹೂಡಿಕೆ ಹೆಚ್ಚಳ 2,430 ಕೋಟಿ ರೂ.

ನಿರೀಕ್ಷಿತ ನೇರ ಉದ್ಯೋಗ ಹೆಚ್ಚಳ 75,000

ಪ್ರಾಮುಖ್ಯತೆ:

ಭಾರತವು ಎಲ್ಲಾ ಜಾಗತಿಕ ಪ್ರಮುಖ ಕಂಪನಿಗಳಿಗೆ ವಿಶ್ವಾಸಾರ್ಹ ಪೂರೈಕೆ ಸರಪಳಿ ಪಾಲುದಾರರಾಗಿ ಹೊರಹೊಮ್ಮುತ್ತಿದೆ.

ದೊಡ್ಡ ಐಟಿ ಹಾರ್ಡ್‌ವೇರ್ ಕಂಪನಿಗಳು ಭಾರತದಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ತೀವ್ರ ಆಸಕ್ತಿ ತೋರಿಸಿವೆ.

ದೇಶದಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿರುವ ಬಲವಾದ ಐಟಿ ಸೇವಾ ಉದ್ಯಮದಿಂದ ಇದಕ್ಕೆ ಮತ್ತಷ್ಟು ಬೆಂಬಲ ದೊರೆತಿದೆ ಎಂದು ಹೇಳಲಾಗಿದೆ.

ಇನ್ನು ಬಹುತೇಕ ಪ್ರಮುಖ ಕಂಪನಿಗಳು ಭಾರತದಲ್ಲಿರುವ ಘಟಕಗಳಿಂದ ಉತ್ಪಾದನೆಯಾದ ಉತ್ಪನ್ನವನು

ಭಾರತದೊಳಗಿನ ದೇಶೀಯ ಮಾರುಕಟ್ಟೆಗಳಿಗೆ ಪೂರೈಸಲು ಮತ್ತು ಭಾರತವನ್ನು ರಫ್ತು ಕೇಂದ್ರವನ್ನಾಗಿ ಮಾಡಲು ಯೋಜನೆ ರೂಪಿಸುತ್ತಿವೆ.  

ಸಹಾಯಕ ತಂತ್ರಜ್ಞಾನ ಕುರಿತಂತೆ ಆರೋಗ್ಯ ಸಂಶೋಧನಾ ಇಲಾಖೆ (ಡಿಎಚ್.ಆರ್) ಮತ್ತು

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು.ಎಚ್ ಒ) ನಡುವೆ ಯೋಜನಾ ಸಹಯೋಗ ಒಪ್ಪಂದಕ್ಕೆ ಅಂಕಿತ ಹಾಕಲು ಸಂಪುಟ ಅನುಮೋದನೆ ನೀಡಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ,

ಸಂಶೋಧನೆ, ನಾವೀನ್ಯತೆ ಮತ್ತು ಸಾಮರ್ಥ್ಯವರ್ಧನೆಯನ್ನು ಉತ್ತೇಜಿಸುವ ಮೂಲಕ ಉನ್ನತ ಗುಣಮಟ್ಟದ ಕೈಗೆಟುಕುವ

ಸಹಾಯಕ ತಂತ್ರಜ್ಞಾನದ ಲಭ್ಯತೆಯನ್ನು ಉತ್ತೇಜಿಸಲು ಆರೋಗ್ಯ ಸಂಶೋಧನಾ ಇಲಾಖೆ (ಡಿಎಚ್.ಆರ್) ಮತ್ತು

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ ಒ) ನಡುವೆ ಯೋಜನಾ ಸಹಯೋಗ ಒಪ್ಪಂದಕ್ಕೆ ಅಂಕಿತ ಹಾಕಿರುವ ಕುರಿತಂತೆ ವಿವರಿಸಲಾಯಿತು.

ಯೋಜನಾ ಸಹಯೋಗ ಒಪ್ಪಂದಕ್ಕೆ (ಪಿಸಿಎ) ವಿಶ್ವ ಆರೋಗ್ಯ ಸಂಸ್ಥೆ 10.10.2022 ರಂದು ಮತ್ತು

ಆರೋಗ್ಯ ಸಂಶೋಧನಾ ಇಲಾಖೆ (ಡಿಎಚ್ಆರ್) 18.10.2022 ರಂದು ಸಹಿ ಹಾಕಿದ್ದವು.

ಈ ಸಹಯೋಗವು ಸಹಾಯಕ ತಂತ್ರಜ್ಞಾನದ ಲಭ್ಯತೆಯ ನಿಟ್ಟಿನಲ್ಲಿ ಜಾಗತಿಕ ಗಮನವನ್ನು ಸೆಳೆಯಲು,

ಸಂಶೋಧನೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು ಮತ್ತು ಸೂಕ್ತ ತರಬೇತಿ ಕಾರ್ಯಕ್ರಮಗಳನ್ನು

ಅಭಿವೃದ್ಧಿಪಡಿಸುವ ಮತ್ತು ಪ್ರಸಾರ ಮಾಡುವ ಗುರಿಯನ್ನು ಹೊಂದಿದೆ. 

Pic Credits: pexels