ನಾಡಿನ ರೈತರ ಮನೆಮಾತಾಗಿರುವ ಕೃಷಿ ಜಾಗರಣ ಮಾಧ್ಯಮ ಸಂಸ್ಥೆಯು 25 ತುಂಬಿ ಇಂದಿಗೆ 26ನೇ ವರ್ಷಕ್ಕೆ ಕಾಲಿಟ್ಟಿದೆ. ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಕೃಷಿ ಜಾಗರಣದ ಕೇಂದ್ರ ಕಚೇರಿ ದೆಹಲಿಯಲ್ಲಿ. ಸಂಸ್ಥೆಯ ನಿರ್ದೇಶಕಿ ಶೈನಿ ಡೊಮೆನಿಕ್, ಸಂಸ್ಥೆಯ ಸಿಒಒ ಪಿ.ಕೆ.ಪಂತ್, ಕಾರ್ಪೋರೇಟ್ ವ್ಯವಹಾರಗಳ ಅಧ್ಯಕ್ಷ ಪಿ. ಎಸ್. ಸೈನಿ. ಕಂಟೆಟ್ ವಿಭಾಗದ ಉಪಾಧ್ಯಕ್ಷ ಸಂಜಯ್ ಕುಮಾರ್, ಸಂಸ್ಥೆಯ ಸಂಸ್ಥಾಪಕ ಪ್ರಧಾನ ಸಂಪಾದಕರಾದ ಎಂ.ಸಿ.ಡೊಮಿನಿಕ್ ಅವರ ನೇತೃತ್ವದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು..
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥಾಪಕ ಸಂಪಾದಕ ಎಂ.ಸಿ.ಡೊಮಿನಿಕ್ ರೈತರ ಜೊತೆಯ ನಮ್ಮ ಪಯಣಕ್ಕೆ ಇಂದಿಗೆ 26 ವಸಂತಗಳು ತುಂಬಿವೆ. ಇಷ್ಟು ವಷರ್ಗಳ ಕಾಲ ಸಂಸ್ಥೆಯು ತನ್ನದೆಯಾದ ವಿಶಿಷ್ಟ ದಾಖಲೆಗಳನ್ನು ನಿರ್ಮಿಸಿದೆ. ಮುಂದಿನ ದಿನಗಳಲ್ಲಿ ಕೂಡ ನಮ್ಮ ಧ್ಯೇಯ, ಹಾಗೂ ಗುರಿಯನ್ನು ತಲುಪಲು ನಾವೆಲ್ಲರು ಒಟ್ಟಾಗಿ ಶ್ರಮಿಸೋಣ. ಆ ಮೂಲಕ ನಮ್ಮ ಆಶಯವನ್ನು ಪೂರ್ಣ ಮಾಡೋಣ ಎಂದರು. ಅಷ್ಟೇ ಅಲ್ಲದೆ ಸಾಕಷ್ಟು ಸವಾಲುಗಳ ಜೊತೆ ಜೊತೆಯಾಗಿ ಸಂಸ್ಥೆ ಇಂದಿಗೆ ಹೆಮ್ಮರವಾಗಿ ಬೆಳೆದು ನಿಂತಿದೆ. ಈ ಸುದೀರ್ಘ ಪಯಣದಲ್ಲಿ ಭಾಗಿಯಾದ ಎಲ್ಲರಿಗೂ ಅವರು ಕೃತಜ್ಞತೆ ಸಲ್ಲಿಸಿದರು.
ಮುಂದಿನ ದಿನಗಳಲ್ಲಿ ಕೂಡ ನಾವು ಉತ್ತಮ ಕೆಲಸವನ್ನು ಮಾಡುವ ಮೂಲಕ ಹೊಸದಾದ ಇತಿಹಾಸಕ್ಕೆ ಮುನ್ನುಡಿಯನ್ನು ಬರೆಯೋಣ. ಅಷ್ಟೇ ಅಲ್ಲದೆ ರೈತರ ಜೊತೆ ನಿಂತು ಅವರ ಆದಾಯವನ್ನು ದ್ವಿಗುಣಗೊಳಿಸೋಣ. ಮತ್ತು ಅವರ ಧ್ವನಿಯನ್ನು ಮೂಲೆ ಮೂಲೆಗೆ ತಲುಪಿಸುವಲ್ಲಿ ಕಾರ್ಯಮಗ್ನರಾಗೋಣ. 26 ವರ್ಷಗಳ ಹಿಂದೆ ಇದೊಂದು ಕೇವಲ ಕನಸಾಗಿತ್ತು. ಆ ಕನಸನ್ನು ಬೆನ್ನು ಹತ್ತಿ ಇಂದು ಇಲ್ಲಿಗೆ ಬಂದು ತಲುಪಿದ್ದೇವೆ. ಇವತ್ತು ನಾಡಿನ ಮೂಲೆ ಮೂಲೆಯಲ್ಲೆ ಕೃಷಿ ಜಾಗರಣ ಧ್ವನಿ ಮಾಸ ಪತ್ರಿಕೆ ಹಾಗೂ ಡಿಜಿಟಲ್ ವೆಬ್‌ಸೈಟ್‌ನ ಮೂಲಕ ಮಾರ್ಧ್ವನಿಸುತ್ತಿದೆ. ಮಾಸ ಪತ್ರಿಕೆಯಿಂದ ಶುರುವಾದ ನಮ್ಮ ಜರ್ನಿ ಇನ್ನು ಬಲವಾಗಿ ಯುವ ತಂಡದೊಂದಿಗೆ ಮುನ್ನಗ್ಗಲು ಸಜ್ಜಾಗಿದೆ ಎಂದು ಅವರು ಹೇಳಿದರು.
ಇನ್ನು ಈ ಸಂಭ್ರಮಾಚರಣೆಯಲ್ಲಿ ಕಂಟೆಂಟ್ ಮ್ಯಾನೇಜರ್ ಪಂಕಜ್ ಖನ್ನಾ, ಸೋಷಿಯಲ್ ಮೀಡಿಯಾ ವಿಭಾಗದ ಜಿಎಂ ನಿಶಾಂತ್ ತಾಕ್ ಸೇರಿದಂತೆ ಕೃಷಿ ಜಾಗರಣದ ಎಲ್ಲ ಸಿಬ್ಬಂದಿ ಹಾಗೂ ಇನ್ನಿತರರು ಭಾಗವಹಿಸಿದ್ದರು.