News

4, 9, 2, 0, 4, 0, 8, 4, 0, 4, 1 ಒಟ್ಟು 36 ಭಾರತ ಆಟಗಾರರ ರನ್ ಗಳಿವು

19 December, 2020 3:41 PM IST By:

ಇದೇನು ಮೊಬೈಲ್ ನಂಬರಗಳಲ್ಲ, ಸಿಕ್ರೇಟ್ ನಂಬರ್ ಅಂತು ಅಲ್ಲವೇ ಅಲ್ಲ, ಲಕ್ಕಿ ನಂಬರೂ ಅಲ್ಲ, ಇದು ಆಸ್ಟ್ರೇಲಿಯಾ ವಿರದ್ಧ ಭಾರತ ಮೊದಲ ಟೆಸ್ ಪಂದ್ಯದಲ್ಲಿ ಗಳಿಸಿದ ರನ್,

ಟೆಸ್ಟ್ ಇತಿಹಾಸದಲ್ಲಿಯೇ ಇನ್ಸಿಂಗ್ಸ್ ಒಂದರಲ್ಲಿ ಭಾರತ ಗಳಿಸಿದ ಅತೀ ಕಡಿಮೆ ಮೊತ್ತ ಇದಾಗಿದೆ.  ಕ್ರಿಕೇಟ್ ಪ್ರೇಮಿಗಳು ಭಾರತೀಯ ತಂಡದ ಇಷ್ಟೊಂದು ಹೀನಾಯ ಪ್ರದರ್ಶನ ಎಂದೂ ನೋಡಿರಲಿಕ್ಕಿಲ್ಲ. ಆದರೆ ಇದು ಸತ್ಯ.

ಆಸ್ಟ್ರೇಲಿಯಾ ತಂಡದ ಮಾರಕ ದಾಳಿಗೆ ತತ್ತರಿಸಿದ ಭಾರತ ತಂಡ ಇನ್ನೂ ಎರಡು ದಿನಗಳು ಬಾಕಿ ಇರುವಾಗಲೇ ಮೊದಲನೇ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಹೀನಾಯ ಸೋಲು ಅನುಭವಿಸಿತು.  ಆ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ 0-1 ಹಿನ್ನಡೆಯನ್ನು ಅನುಭವಿಸಿತು.

ಮೊದಲನೇ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ್ದ ಭಾರತದ ಬ್ಯಾಟ್ಸ್‌ಮನ್‌ಗಳು, ದ್ವಿತೀಯ ಇನಿಂಗ್ಸ್‌ನಲ್ಲಿ ವಿಫಲರಾದರು. ಮಯಾಂಕ್‌ ಅಗರ್ವಾಲ್‌ 9 ರನ್‌, ವಿರಾಟ್‌ ಕೊಹ್ಲಿ 4 ರನ್‌, ಪೃಥ್ವಿ ಶಾ 4 ರನ್ ‌ಗಳಿಸಿದರೆ‌, ಚೇತೇಶ್ವರ ಪೂಜಾರ ಹಾಗೂ ರಹಾನೆ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದರು.

ಭಾರತೀಯ ಬ್ಯಾಟ್ಸ್‌ಮನ್‌ಗಳ ಸ್ಕೋರ್ ಪಟ್ಟಿ ಇಂತಿದೆ (ದ್ವಿತೀಯ ಇನ್ನಿಂಗ್ಸ್):
ಪೃಥ್ವಿ ಶಾ: 4
ಮಯಂಕ್ ಅಗರವಾಲ್: 9
ಜಸ್‌ಪ್ರೀತ್ ಬುಮ್ರಾ: 2
ಚೇತೇಶ್ವರ ಪೂಜಾರ: 0
ವಿರಾಟ್ ಕೊಹ್ಲಿ: 4
ಅಜಿಂಕ್ಯ ರಹಾನೆ: 0
ಹನುಮ ವಿಹಾರಿ: 8
ವೃದ್ಧಿಮಾನ್ ಸಹಾ: 4
ರವಿಚಂದ್ರನ್ ಅಶ್ವಿನ್: 0
ಉಮೇಶ್ ಯಾದವ್: 4*
ಮೊಹಮ್ಮದ್ ಶಮಿ: 1 (ನಿವೃತ್ತಿ)