ಭಾರತದ ಯುವ ತಂಡ ಆಸ್ಟ್ರೇಲಿಯಾದ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಗೆಲುವನ್ನು ಸಾಧಿಸುವ ಮೂಲಕ ಭಾರತೀಯರಿಗೆ ಒಂದು ಹಬ್ಬದ ವಾತಾವರಣವನ್ನು ನೀಡಿದೆ, ಅದು ಕೊನೆಯ ದಿನದಲ್ಲಿ ನಡೆದ ಅಂತಹ ಅದ್ಭುತ ಆಟದಿಂದ ಭಾರತ ನಮಗೆಲ್ಲ ಒಂದು ಒಳ್ಳೆಯ ರೀತಿ ಮನೋರಂಜನೆ ಹಾಗೂ ಸ್ಫೂರ್ತಿಯನ್ನು ನೀಡಿದೆ, ಆದರೆ ಇದೀಗ ಭಾರತ ತಂಡ ತನ್ನ ಮುಂದಿನ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದ್ದು ಅದಕ್ಕಾಗಿ ಮೊದಲ ಎರಡು ಟೆಸ್ಟ್ ಗಳಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ.
ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿ ಮೊದಲ ಎರಡು ಟೆಸ್ಟ್ ಗಳಿಗೆ ಭಾರತ ತಂಡವನ್ನು ಆಯ್ಕೆ ಮಾಡಿದ್ದು ಭಾರತದ ನಾಯಕನಾದ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಹಾಗೂ ಇಶಾಂತ್ ಶರ್ಮಾ ತಂಡಕ್ಕೆ ಮರಳಿದ್ದಾರೆ. ಇನ್ನು ರಾಹುಲ್ ಅವರನ್ನು ಕೂಡ ತಂಡಕ್ಕೆ ಆಯ್ಕೆ ಮಾಡಿದ್ದು ಅವರು ಫಿಟ್ಟಸ್ ಪರೀಕ್ಷೆ ಒಳಪಡಬೇಕಾಗುತ್ತದೆ.ಆದರೆ ಅಚ್ಚರಿಯೆಂದರೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ ನೀಡಿದ ಯುವ ಪ್ರತಿಭೆ ಟಿ. ನಟರಾಜನ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ.
ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಗಳಿಗೆ ಭಾರತ ತಂಡ ಈ ರೀತಿ ಇದೆ.
ಭಾರತ ತಂಡ- ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ್ ಪೂಜಾರ, ಅಜಿಂಕ್ಯಾ ರಹಾನೆ, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ,ಮಯಂಕ್ ಅಗರ್ವಲ್,ವೃದ್ಧಿಮಾನ್ ಸಹಾ, ಹಾರ್ದಿಕ್ ಪಾಂಡ್ಯ, ಕೆ ಎಲ್ ರಾಹುಲ್,ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮ, ಶಾರ್ದುಲ್ ಠಾಕೂರ್, ಮಹಮ್ಮದ್ ಸಿರಾಜ್, ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಅಕ್ಷರ ಪಟೇಲ್, ವಾಶಿಂಗ್ಟನ್ ಸುಂದರ್.