News

2023ರವರೆಗೆ ದೇಶಾದ್ಯಂತ ಹಳಿಗಳ ಮೇಲೆ ಸಂಚರಿಸಲಿವೆ ಖಾಸಗಿ ಟ್ರೇನ್

04 July, 2020 8:27 PM IST By:

ಭಾರತೀಯ ರೈಲ್ವೇ ಇಲಾಖೆಯು ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಖಾಸ­ಗೀ­ಕರಣಕ್ಕೆ ಮುಂದಾಗಿದೆ. ರೈಲ್ವೆ ಇಲಾಖೆ ತನ್ನ ನೆಟ್‌ವರ್ಕ್‌ನಲ್ಲಿ ಖಾಸಗಿ ರೈಲುಗಳನ್ನು ಓಡಿಸುವ ಯೋಜನೆ ಹಾಕಿಕೊಂಡಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಏಪ್ರಿಲ್ 2023 ರ ಹೊತ್ತಿಗೆ ಖಾಸಗಿ ರೈಲುಗಳು ರೈಲ್ವೆ ಹಳಿಗಳಲ್ಲಿ ಸಂಚರಿಸಲಿವೆ..

ಅದರ ಭಾಗವಾಗಿ, ದೇಶದ ಆಯ್ದ 109 ಜೋಡಿ ರೈಲು ಮಾರ್ಗ­ಗಳಲ್ಲಿ 151 ಅತ್ಯಾಧುನಿಕ ರೈಲುಗಳ ಸೇವೆ­ಯನ್ನು ನೀಡುವ ನಿಟ್ಟಿನಲ್ಲಿ ಖಾಸಗಿ ವಲಯ­ಗಳಿಂದ ಟೆಂಡರ್‌ ಆಹ್ವಾನಿಸಿದೆ.

ನಿರೀಕ್ಷೆಯಂತೆ ಎಲ್ಲವೂ ಕೈಗೂಡಿದರೆ ಇಲಾಖೆಗೆ 30,000 ಕೋಟಿ ರೂ. ಬಂಡವಾಳ ಹರಿದುಬರುವ ನಿರೀಕ್ಷೆಯಿದೆ. ಖಾಸಗಿ ಕಂಪನಿಗಳ ಸ್ಪರ್ಧಾತ್ಮಕತೆಯನ್ನು ಆಧರಿಸಿ ಖಾಸಗಿ ರೈಲಿನ ಶುಲ್ಕವನ್ನು ನಿರ್ಧರಿಸಲಾಗುವುದು ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ. ಯಾದವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನಾವು ಪ್ರಸ್ತುತ ಪ್ರಯಾಣಿಕರ ವಿಭಾಗದ ಕಾರ್ಯಾಚರಣೆಗಳಲ್ಲಿ ನಷ್ಟವನ್ನು ಅನುಭವಿಸುತ್ತಿದ್ದೇವೆ. ಈ ನಿರ್ದಿಷ್ಟ ಯೋಜನೆಯಲ್ಲಿ  ರೈಲ್ವೆಗೆ ಏನೂ ಹಾನಿಯಾಗುವುದಿಲ್ಲ. ಇಂತಹ  ಪರಿಸ್ಥಿತಿಯಲ್ಲಿ ಇದು ರೈಲ್ವೆಯ ವೆಚ್ಚವನ್ನು ಪೂರೈಸಲು ಸಾಧ್ಯವಾಗುತ್ತದೆ ಮತ್ತು ರೈಲ್ವೆಗೆ ಆದಾಯವೂ ಹೆಚ್ಚುತ್ತದೆ ಎಂದು ಯಾದವ್ ಹೇಳಿದ್ದಾರೆ