News

ಜೂನ್ 30ರವರೆಗಿನ ಎಲ್ಲ ಟಿಕೆಟ್ ಗಳನ್ನು ರದ್ದುಗೊಳಿಸಿದ ರೈಲು ಇಲಾಖೆ, ಶುಲ್ಕ ಕೂಡ ಮರುಪಾವತಿ

15 May, 2020 6:40 PM IST By:

ಕೊರೋನಾ ಸೋಂಕು ತಡೆಯುವದಕ್ಕಾಗಿ ಎಲ್ಲಾ ಪ್ರಯಾಣಿಕ ರೈಲುಗಳ ಟಿಕೆಟ್ ಅನ್ನು ಜೂನ್ 30ರವರೆಗೆ ರದ್ದುಗೊಳಿಸಿರುವುದಾಗಿ ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ.
ಅಷ್ಟೇ ಅಲ್ಲ ಕಾಯ್ದಿರಿಸಿದ ಎಲ್ಲಾ ಟಿಕೆಟ್ಗಳ ಮರುಪಾವತಿ  ನೀಡಲಾಗುವುದು. ಆದರೆ, ಈ ಮೊದಲು ಘೋಷಿಸಲಾಗಿರುವಂತೆ ವಿಶೇಷ ಹಾಗೂ ಶ್ರಮಿಕ್ ರೈಲುಗಳು ಎಂದಿನಂತೆ ತನ್ನ ಕಾರ್ಯ ಮುಂದುವರೆಸಲಿವೆ.

ಜೂನ್ 30ರೊಳಗಿನ ಪ್ರಯಾಣಕ್ಕಾಗಿ ಮಾರ್ಚ್ 22ಕ್ಕೂ ಮೊದಲು ಕಾಯ್ದಿರಿಸಿದ್ದ ರೈಲು ಟಿಕೆಟ್ ಅನ್ನು ರದ್ದುಪಡಿಸಲಾಗಿದೆ.

ಆದರೆ ಶ್ರಮಿಕ್ ವಿಶೇಷ ರೈಲು ಹಾಗೂ ವಿಶೇಷ ರೈಲು ಮೇ 12ರಿಂದ ಆರಂಭಗೊಂಡಿದ್ದು, ಲಾಕ್ ಡೌನ್ ನಿಂದ ವಿವಿಧ ಸ್ಥಳಗಳಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರು ಪ್ರಯಾಣಿಸಲು ಅನುಕೂಲವಾಗುವ ವಿಶೇಷ ರೈಲು ಸಂಚಾರ ಯಾನ ಮುಂದುವರಿಯಲಿದೆ ಎಂದು ಹೇಳಿದೆ.

ವಿವಿಧ ರಾಜ್ಯಗಳಲ್ಲಿ ಸಿಕ್ಕಿಹಾಕಿಕೊಂಡಿರುವ ವಲಸೆ ಕಾರ್ಮಿಕರನ್ನು ಕರೆದೊಯ್ಯಲು ದೇಶಾದ್ಯಂತ ಸುಮಾರು 15 ಮಾರ್ಗಗಳಲ್ಲಿ ವಿಶೇಷ ರೈಲು ಸಂಚರಿಸುತ್ತಿದೆ. ಆದರೆ ಪ್ರಯಾಣಿಕರ ರೈಲು ಟಿಕೆಟ್ ಅನ್ನು ರದ್ದುಪಡಿಸಲಾಗಿದೆ. ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಮಾರ್ಚ್ 25ರಿಂದ ಮೇಲ್, ಎಕ್ಸ್ ಪ್ರೆಸ್, ಪ್ರಯಾಣಿಕರ ಹಾಗೂ ಸಬ್ ಅರ್ಬನ್ ರೈಲು ಸಂಚಾರಗಳನ್ನು ರದ್ದುಪಡಿಸಲಾಗಿತ್ತು. ಕಾರ್ಮಿಕ ವಿಶೇಷ ರೈಲು ಸೇವೆ ಮೇ 1 ರಿಂದ ಪ್ರಾರಂಭವಾಗಿದ್ದರೆ, ವಿಶೇಷ ರೈಲುಗಳು ಮೇ 12 ರಿಂದ ತನ್ನ ಓಡಾಟ ಪ್ರಾರಂಭಿಸಿವೆ.