ಕೃಷಿ ಜಾಗರಣ ಕನ್ನಡ ಅಗ್ರಿನ್ಯೂಸ್ ರೈತರಿಗೆ “ಕೃಷಿ ಜಾಗರಣ ಕನ್ನಡ” ಯೂಟ್ಯೂಬ್‌ನ ಮೂಲಕವೂ ಉತ್ತಮವಾದ ಸುದ್ದಿಗಳನ್ನು ನೀಡುತ್ತಿದೆ.
ಈ ದಿನದ ಪ್ರಮುಖ ಸುದ್ದಿಗಳಲ್ಲಿ ಪೋಸ್ಟ್ ಆಫೀಸ್‌ನ ಬಿಗ್ ಅಪ್ಡೇಟ್ಸ್ ಸಹ ಇದೆ. ಇದರೊಂದಿಗೆ ಫಾಸ್ಟ್‌ಟ್ಯಾಗ್ ಅಪ್ಡೇಟ್‌ಗೆ ಸಾರಿಗೆ ಸಚಿವಾಲಯ
ಲಾಸ್ಟ್ ವಾರ್ನಿಂಗ್ ಕೊಟ್ಟಿದೆ. ಇನ್ನು ಭಾರತದಲ್ಲಿ ಬಡತನ ಪ್ರಮಾಣ ಭಾರೀ ಇಳಿಕೆ ಆಗಿದೆ ಅಂತಿದೆ
ನೀತಿ ಆಯೋಗದ ವರದಿಯ ಪ್ರಮುಖವಾದ ಮಾಹಿತಿಗಳನ್ನು ನೀಡಲಾಗಿದೆ.
ಮುಖ್ಯಾಂಶಗಳು ಈ ರೀತಿ ಇವೆ
1. ಭಾರತೀಯ ಪೋಸ್ಟ್ ಆಫೀಸ್: 8 ಕೋಟಿ ಜನ ಹಣ ವಹಿವಾಟು
2. ಫಾಸ್ಟ್‌ಟ್ಯಾಗ್ ಅಪ್ಡೇಟ್ ಮಾಡದಿದ್ದರೆ ಕ್ಯಾನ್ಸಲ್ !
3. ಮುಂದಿನ ತಿಂಗಳು ರಾಜ್ಯ ಬಜೆಟ್ ಮಂಡನೆ
4. ಭಾರತದಲ್ಲಿ ಬಡತನ ಪ್ರಮಾಣ ಭಾರೀ ಇಳಿಕೆ: ನೀತಿ ಆಯೋಗದ ವರದಿ
5. ರಾಜ್ಯದ ಹವಾಮಾನ ವರದಿ ರಿಪೋರ್ಟ್
6. ದೆಹಲಿ, ಪಂಜಾಬ್‌ನಲ್ಲಿ ಭಾರೀ ಚಳಿ, ಶಾಲೆಗಳಿಗೆ ರಜೆ
ಸುದ್ದಿಗಳ ವಿವರ ಈ ರೀತಿ ಇದೆ.
1. ಆಧುನಿಕ ಆಯಪ್ ಹಾಗೂ ತಂತ್ರಜ್ಞಾನಗಳು ಅಭಿವೃದ್ಧಿಯಾದರೂ ಜನ ಭಾರತೀಯ ಪೋಸ್ಟ್ ಆಫೀಸ್‌ನ್ನು ಬಳಸುವುದು ಕಡಿಮೆಯಾಗಿಲ್ಲ.
ಭಾರತೀಯ ಪೋಸ್ಟ್ ಆಫೀಸ್ ಅಂಚೆ ಪಾವತಿ ಬ್ಯಾಂಕ್ ಎಲ್ಲರನ್ನೂ ಒಳಗೊಳ್ಳುವ ಹಣಕಾಸು ಸೇವೆ ನೀಡುತ್ತಿದೆ. ಇದರಿಂದ 8 ಕೋಟಿಗೂ ಹೆಚ್ಚು
ಗ್ರಾಹಕರನ್ನು ನೊಂದಣಿ ಮಾಡಿಕೊಳ್ಳುವಂತಾಗಿದೆ ಎಂದು ಸಂಪರ್ಕ ಖಾತೆ ಸಚಿವಾಲಯ ತಿಳಿಸಿದೆ.
---------------------------------
ಫಾಸ್ಟ್‌ಟ್ಯಾಗ್ ಬಿಗ್‌ನ್ಯೂಸ್: ಜನವರಿ 31 ಕಡೆಯ ದಿನ
2. ಫಾಸ್ಟ್‌ಟ್ಯಾಗ್‌ಗೆ ಸಂಬಂಧಿಸಿದಂತೆ ಕೇಂದ್ರ ಸಾರಿಗೆ ಸಚಿವಾಲಯವು ಬಿಗ್ ಅಪ್ಡೇಟ್‌ವೊಂದನ್ನು ನೀಡಿದೆ.
ಜನವರಿ 31ರ ಒಳಗಾಗಿ ಫಾಸ್ಟ್‌ಟ್ಯಾಗ್‌ನ ಕೆವೈಸಿ ಮಾಡಿಸದೇ ಇದ್ದರೆ, ಫಾಸ್ಟ್‌ಟ್ಯಾಗ್‌ಗಳನ್ನು ನಿಷ್ಕ್ರಿಯಗೊಳಿಸಲಾಗುವುದು
ಅಥವಾ ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಸಿದೆ.
ಈಗಾಗಲೇ ನಿಮ್ಮ ಫಾಸ್ಟ್‌ಟ್ಯಾಗ್‌ನಲ್ಲಿ ಹಣ ಜಮೆ ಇದ್ದರೂ ಸಹ ಕೆ.ವೈ.ಸಿ ಮಾಡಿಸುವುದು ಕಡ್ಡಾಯವಾಗಿದೆ.
ವಾಹನ ಬಳಸುವವರು ಒಂದು ವಾಹನಕ್ಕೆ ಒಂದೇ ಫಾಸ್ಟ್‌ಟ್ಯಾಗ್ ಬಳಸಬೇಕು ಎಂದೂ ರಸ್ತೆ ಸಾರಿಗೆ ಸಚಿವಾಲಯ ಸೂಚಿಸಿದೆ.
---------------------------------
3. ರಾಜ್ಯದಲ್ಲಿ ಮುಂದಿನ ತಿಂಗಳು 2024-25ನೇ ಸಾಲಿನ ಬಜೆಟ್ ಮಂಡನೆ ಆಗಲಿದೆ.
ಈ ವರ್ಷ ಮಾರ್ಚ್ ಮೊದಲ ವಾರದೊಳಗೆ ಲೋಕಸಭಾ ಚುನಾವಣೆಗೆ ನೀತಿಸಂಹಿತೆ ಘೋಷಿಸುವ ಸಾಧ್ಯತೆ
ಇರುವುದರಿಂದ ಫೆಬ್ರವರಿಯಲ್ಲೇ ಬಜೆಟ್ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
---------------------------------
ಉತ್ತರ ಭಾರತದಲ್ಲಿ ಮುಂದುವರಿದ ಮೈಕೊರೆವ ಚಳಿ!
4. ಭಾರತದಲ್ಲಿನ ಬಡತನದ ಬಗ್ಗೆ ನೀತಿ ಆಯೋಗವು ಅಚ್ಚರಿಯ ಮಾಹಿತಿಯೊಂದನ್ನು ನೀಡಿದೆ.
ಕಳೆದ ಒಂಬತ್ತು ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಅಂದಾಜು 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ
ಎಂದಿದೆ ನೀತಿ ಆಯೋಗದ ವರದಿ. ಈ ವರದಿಯ ಪ್ರಕಾರ, ಕಳೆದ ಒಂಬತ್ತು ವರ್ಷಗಳಲ್ಲಿ ಬಡತನವು ಶೇಕಡಾ 29 ರಿಂದ ಶೇಕಡಾ 11ಕ್ಕೆ ಇಳಿದಿದೆ.
ಇನ್ನು ಉತ್ತರ ಪ್ರದೇಶದಲ್ಲಿ ಬಡತನ ಪ್ರಮಾಣ ಅತಿ ಹೆಚ್ಚು ಇಳಿಕೆಯಾಗಿದೆ.
ಉತ್ತರ ಪ್ರದೇಶದಲ್ಲಿ ಸುಮಾರು ಆರು ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ.
ಇನ್ನು ಬಿಹಾರ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲೂ ಬಡತನ ಇಳಿಕೆ ಕಂಡಿದೆ.
ಭಾರತದಲ್ಲಿ ಬಡತನವು ಶೀಘ್ರದಲ್ಲೇ ಶೇಕಡಾ 10ಕ್ಕೆ ಇಳಿಯಲಿದೆ ಎಂದು ನೀತಿ ಆಯೋಗದ ವರದಿ ಉಲ್ಲೇಖಿಸಿದೆ.
---------------------------------
5. ರಾಜ್ಯದಲ್ಲಿ ಮಳೆಯ ಮುನ್ಸೂಚನೆ ಇಲ್ಲ. ರಾಜ್ಯದ ವಿವಿಧೆಡೆ ಚಳಿ ವಾತಾವರಣ ಮುಂದುವರಿದಿದೆ.
ಉಳಿದಂತೆ ಬಹುತೇಕ ಪ್ರದೇಶದಲ್ಲಿ ಒಣಹವೆ ಮುಂದುವರಿದಿದೆ.
ಮುಂದಿನ 24 ಗಂಟೆಯ ಅವಧಿಯಲ್ಲಿ ಗರಿಷ್ಠ ಉಷ್ಣಾಂಶವು 29 ಮತ್ತು ಕನಿಷ್ಠ ಉಷ್ಣಾಂಶವು 16 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಇನ್ನು ಬೆಂಗಳೂರಿನಲ್ಲಿ ನಿರ್ಮಲ ಆಕಾಶವಿರುತ್ತದೆ. ಕೆಲವು ಕಡೆ ಬೆಳಗಿನ ಜಾವ ಮಂಜು ದಟ್ಟ ಮಂಜು ಮುಸುಕುವ ಬಹಳಷ್ಟು ಸಾಧ್ಯತೆ ಇದೆ
ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
---------------------------------
6. ಪಂಜಾಬ್, ಹರಿಯಾಣ, ದೆಹಲಿ ಮತ್ತು ಉತ್ತರಪ್ರದೇಶ ಸೇರಿದಂತೆ ಉತ್ತರ ಭಾರತದ ಭಾಗದಲ್ಲಿ ಭಾರೀ ಚಳಿ ಮುಂದುವರಿದಿದೆ.
ತೀವ್ರ ಚಳಿ ವಾತಾವರಣ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಪ್ರದೇಶಗಳಲ್ಲಿ ಚಳಿ ಪ್ರಮಾಣವು ಬಹುತೇಕ 3ರಿಂದ 7 ಡಿಗ್ರಿ ಸೆಲ್ಸಿಯೆಸ್ ಇರಲಿದೆ.
ಮುಂದಿನ 4 ರಿಂದ 5 ದಿನಗಳ ಕಾಲ ಉತ್ತರ ಭಾರತದ ಹಲವೆಡೆ ದಟ್ಟ ಮಂಜು ಕವಿಯುವ ಸಾಧ್ಯತೆಯಿದೆ
ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. ಅಲ್ಲದೇ ಮುಂದಿನ ಒಂದು ವಾರದ ಅವಧಿಗೂ ಹೆಚ್ಚು ಹಲವು ಪ್ರದೇಶಗಳಲ್ಲಿ
ತೀವ್ರ ಶೀತಗಾಳಿ ಪರಿಸ್ಥಿತಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ತೀವ್ರ ಚಳಿ ವಾತಾವರಣ ಇರುವ ಹಿನ್ನೆಲೆಯಲ್ಲಿ ಉತ್ತರ ಭಾರತದ ವಿವಿಧೆಡೆ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.
------------------------------
7. ಕರ್ನಾಟಕದ ರೈತರಿಗೆ ಬರಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿದ್ದಾರೆ.
ರೈತರರಿಗೆ ಪರಿಹಾರ ನೀಡಿಲ್ಲವೆಂದು ಪ್ರತಿಭಟನೆ ಮಾಡುತ್ತಿದ್ದಾರೆ. ರೈತರಿಗೆ 2,000 ಸಾವಿರ ರೂಪಾಯಿ
ತಾತ್ಕಾಲಿಕ ಪರಿಹಾರವನ್ನು ನೀಡಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ಎನ್.ಡಿ.ಆರ್.ಎಫ್ ನಡಿ ಬರ ಪರಿಹಾರ
ಬಂದ ಕೂಡಲೇ ನಿಯಮಾವಳಿಗಳ ಪ್ರಕಾರ ಪರಿಹಾರ ನೀಡುತ್ತೇವೆ ಎಂದಿದ್ದಾರೆ.
---------------------------------
8. ಚಾಮರಾಜನಗರ ಜಿಲ್ಲೆಯ ಬಂಡೀಪುರ ವ್ಯಾಪ್ತಿಯ ಹಾಡಿ ಜನರ ಅಭಿವೃದ್ಧಿಗಾಗಿ 1 ಕೋಟಿ 25 ಲಕ್ಷ ರೂಪಾಯಿ
ಅನುದಾನ ಮೀಸಲಿಡಲಾಗಿದೆ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಪಿ.ರಮೇಶ್ ಕುಮಾರ್ ತಿಳಿಸಿದ್ದಾರೆ.