News

ಭಾರತೀಯ ಮೂಲದ ಯುವಕನಿಗೆ ಸಿಂಗಾಪುರದಲ್ಲಿ ಗಲ್ಲು, ಕಾರಣವೇನು?

26 April, 2023 4:35 PM IST By: Hitesh
Indian origin youth hanged in Singapore, what is the reason?

ಭಾರತೀಯ ಮೂಲದ ಯುವಕರೊಬ್ಬರನ್ನು ಸಿಂಗಾಪುರ ಗಲ್ಲಿಗೇರಿಸಿದೆ. ಆರೋಪವೇನು, ಯಾವ ಕಾರಣಕ್ಕೆ ಗಲ್ಲು ಶಿಕ್ಷೆ ವಿಧಿಸಲಾಯಿತು. ಇಲ್ಲಿದೆ ವಿವರ.

ವಿಶ್ವಸಂಸ್ಥೆಯಿಂದ ಕ್ಷಮಾದಾನಕ್ಕಾಗಿ ಮನವಿ ಹಾಗೂ ವಿವಿಧ ರಾಷ್ಟ್ರಗಳ ಮನವಿಯ ಹೊರತಾಗಿಯೂ ಗಾಂಜಾ ಕಳ್ಳಸಾಗಾಣಿಕೆಗೆ

ಸಂಚು ರೂಪಿಸಿದ್ದಕ್ಕಾಗಿ ಸಿಂಗಾಪುರ ಸರ್ಕಾರ ಭಾರತೀಯ ವ್ಯಕ್ತಿಯನ್ನು ಗಲ್ಲಿಗೇರಿಸಿದೆ.

46 ವರ್ಷದ ತಂಗರಾಜು ಸುಪ್ಪಯ್ಯ ಅವರು ಅಂದಾಜು 1 ಕೆ.ಜಿ ಗಾಂಜಾವನ್ನು ಕಳ್ಳಸಾಗಣೆ

ಮಾಡಲು ಸಂಚು ರೂಪಿಸಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದರು. 

ತಂಗರಾಜು ಅವರು ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನುವುದಕ್ಕೆ ಪ್ರಬಲವಾದ ಸಾಕ್ಷಿ ಇಲ್ಲ ಎಂದು ಕುಟುಂಬಸ್ಥರು ಹಾಗೂ ಕೆಲವರು ಆರೋಪಿಸಿದ್ದರು.

ಆದರೆ,ಸಿಂಗಾಪುರದ ಅಧಿಕಾರಿಗಳು ನ್ಯಾಯಯುತ ವಿಚಾರಣೆಯನ್ನು ನಡೆಸಲಾಗಿದೆ ಎಂದಿದ್ದಾರೆ.

ವಿಶ್ವದ ಕೆಲವು ಕಠಿಣ ಮಾದಕವಸ್ತು ವಿರೋಧಿ ಕಾನೂನುಗಳನ್ನು ಸಿಂಗಾಪುರದಲ್ಲಿ ಅಳವಡಿಸಿಕೊಳ್ಳಲಾಗಿದೆ.

ಆಗ್ನೇಯ ಏಷ್ಯಾದಾದ್ಯಂತ ಪ್ರಮುಖ ಸಮಸ್ಯೆಯಾಗಿರುವ ಮಾದಕವಸ್ತು ಅಪರಾಧವನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಅಗತ್ಯವಾಗಿದೆ ಎಂದು ಅಲ್ಲಿನ ಸರ್ಕಾರ ವಾದಿಸುತ್ತದೆ.     

ತಂಗರಾಜು ಅವರ ವಿರುದ್ಧದ ಸಾಕ್ಷ್ಯಗಳ ಬಗ್ಗೆ ಇನ್ನೂ ಹಲವು ಬಗೆಹರಿಯದ ಪ್ರಶ್ನೆಗಳಿವೆ ಎಂದು ಮರಣದಂಡನೆ ವಿರೋಧಿ ಕಾರ್ಯಕರ್ತ ಕರ್ಸ್ಟನ್ ಹ್ಯಾನ್ ತಿಳಿಸಿದ್ದಾರೆ. 

ಕಳೆದ ವರ್ಷ ಸಿಂಗಾಪುರ ಸರ್ಕಾರವು ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟದ ಆರೋಪದ ಮೇಲೆ 11 ಜನರನ್ನು ಗಲ್ಲಿಗೇರಿಸಿತು.

ಇನ್ನು ಮಂಗಳವಾರ ಸಿಂಗಾಪುರದ ನ್ಯಾಯಾಲಯವು ತಂಗರಾಜು ಸುಪ್ಪಯ್ಯ ಅವರ ಅಪರಾಧದವನ್ನು

ಕೈಬಿಡುವಂತೆ ಅವರ ಕುಟುಂಬದಿಂದ ಮಾಡಲಾಗಿದ್ದ ಮನವಿಯನ್ನು ಕೊನೆಯ ಕ್ಷಣದಲ್ಲಿ ತಿರಸ್ಕರಿಸಿವೆ.

ಇನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಮಂಗಳವಾರ ಮರಣದಂಡನೆಯನ್ನು "ತುರ್ತಾಗಿ ಮರುಪರಿಶೀಲಿಸುವಂತೆ" ಸಿಂಗಾಪುರಕ್ಕೆ ತಿಳಿಸಿತ್ತು.

ಅಲ್ಲದೇ ಮರಣದಂಡನೆಯು ಅಂತರರಾಷ್ಟ್ರೀಯ ಮಾನದಂಡಗಳನ್ನು ಉಲ್ಲಂಘಿಸಿದೆ ಎಂದು ಹೇಳಿದೆ.

ತಂಗರಾಜು ಸುಪ್ಪಯ್ಯ ಅವರು 2013ರಲ್ಲಿ ಮಲೇಷ್ಯಾದಿಂದ ಸಿಂಗಾಪುರಕ್ಕೆ ಸುಮಾರು 1 ಕೆಜಿ ಗಾಂಜಾವನ್ನು ಕಳ್ಳಸಾಗಾಣಿಕೆ ಮಾಡಲು ಕುಮ್ಮಕ್ಕು ನೀಡಿದ್ದರು ಎನ್ನಲಾಗಿದೆ.  

ಗಾಂಜಾ, ಕುಕೇನ್, ಹೆರಾಯಿನ್ ಮತ್ತು ಕೆಟಮೈನ್ ಸೇರಿದಂತೆ - ನಿರ್ದಿಷ್ಟ ಪ್ರಮಾಣವನ್ನು ಮೀರಿ ಮಾದಕವಸ್ತುಗಳ ಕಳ್ಳಸಾಗಣೆಯಲ್ಲಿ

ತಪ್ಪಿತಸ್ಥರಿಗೆ ಮರಣದಂಡನೆಯನ್ನು ಸಿಂಗಾಪುರದ ಕಾನೂನು ಕಡ್ಡಾಯಗೊಳಿಸಿದೆ.

ಅವರಿಗೆ ತಮಿಳು ಭಾಷಾಂತರಕಾರರಿಗೆ ಸಾಕಷ್ಟು ಪ್ರವೇಶವನ್ನು ನೀಡಲಾಗಿಲ್ಲ ಮತ್ತು ಅವರ

ಕುಟುಂಬವು ವಕೀಲರನ್ನು ಪಡೆಯಲು ಸಾಧ್ಯವಾಗದ ಕಾರಣ ಅವರ ಕೊನೆಯ ಮನವಿಯಲ್ಲಿ ತನ್ನನ್ನು ಪ್ರತಿನಿಧಿಸಲು

ಒತ್ತಾಯಿಸಲಾಯಿತು ಎಂದು ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದರು.

ಸಿಂಗಾಪುರದ ಅಧಿಕಾರಿಗಳು ಅವರು ವಿಚಾರಣೆಯ ಸಮಯದಲ್ಲಿ ಮಾತ್ರ ಇಂಟಪ್ರಿಟ ರ್ ಅನ್ನು ವಿನಂತಿಸಿದ್ದಾರೆ ಇನ್ನು

ಇದು ಮೊದಲಲ್ಲ ಎಂದೂ ಹೇಳಲಾಗಿದೆ. ಈ  ಪ್ರಕ್ರಿಯೆಯ ಉದ್ದಕ್ಕೂ ಅವರು ಕಾನೂನು ಸಲಹೆಗಾರರ ಆಯ್ಕೆಯನ್ನು ಹೊಂದಿದ್ದರು ಎಂದು ಹೇಳಲಾಗಿದೆ.   

Photo Credit: India Posts English