ದೇಶದ ಕೃಷಿ ಸಮುದಾಯಕ್ಕೆ ದೀರ್ಘಾವಧಿಯಲ್ಲಿ ಅಗತ್ಯ ಪ್ರಮಾಣದಲ್ಲಿ ರಸಗೊಬ್ಬರ ಪೂರೈಕೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಭಾರತೀಯ ರಸಗೊಬ್ಬರ ಕಂಪೆನಿಗಳಾದ ಕೋರಮಂಡಲ ಇಂಟರ್‌ನ್ಯಾಷನಲ್, ಚಂಬಲ್ ಫರ್ಟಿಲೈಸರ್ಸ್ ಹಾಗೂ ಇಂಡಿಯನ್ ಪೊಟ್ಯಾಶ್ ಲಿಮಿಟೆಡ್ ಕೆನಡಾದ ಪ್ರತಿಷ್ಠಿತ ಕ್ಯಾನ್‌ಪೊಟೆಕ್ಸ್ ಕಂಪೆನಿಯೊಂದಿಗೆ ಮಹತ್ವದ ಒಡಂಬಡಿಕೆಗೆ ಮಂಗಳವಾರ ಸಹಿ ಹಾಕಿವೆ.
ಇದನ್ನೂ ಓದಿರಿ: ಇದನ್ನೂ ಓದಿರಿ: 7ನೇ ವೇತನ ಆಯೋಗ: 48 ಲಕ್ಷ ನೌಕರರಿಗೆ ದೀಪಾವಳಿ ನಿಮಿತ್ತ ಇಲ್ಲಿದೆ ಸಿಹಿಸುದ್ದಿ!
ಒಡಂಬಡಿಕೆ ಪತ್ರಗಳನ್ನು ಇಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಡಾ.ಮನ್ಸುಖ್ ಮಾಂಡವೀಯಾ ಅವರಿಗೆ ಸಲ್ಲಿಸಲಾಯಿತು. ಒಡಂಬಡಿಕೆ ಮಾಡಿಕೊಳ್ಳಲಾದ ಕೆನಡಾದ ಕ್ಯಾನ್‌ಪೊಟೆಕ್ಸ್ ಕಂಪೆನಿಯು ವಾರ್ಷಿಕವಾಗಿ 130 ಲಕ್ಷ ಮೆಟ್ರಿಕ್ ಟನ್ ಪೊಟ್ಯಾಶ್ ರಫ್ತು ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಬೃಹತ್ ಪ್ರಮಾಣದಲ್ಲಿ ಪೊಟ್ಯಾಶ್ ಪೂರೈಕೆ ಕಂಪೆನಿ ಎಂಬುದು ವಿಶೇಷ.
ಭಾರತೀಯ ರೈತರಿಗೆ ಸಕಾಲದಲ್ಲಿ ಅಗತ್ಯ ಪ್ರಮಾಣದಲ್ಲಿ ಎಂಒಪಿ (ಮ್ಯೂರೇಟ್ ಆಫ್ ಪೊಟ್ಯಾಶ್) ಪೂರೈಕೆ ಸಂಬಂಧ ಏರ್ಪಟ್ಟ ಒಡಂಬಡಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಶ್ರೀ ಮನ್ಸುಖ್ ಮಾಂಡವೀಯಾ ಅವರು, "ಇದೊಂದು ಮಹತ್ವದ ಹೆಜ್ಜೆಯಾಗಿದೆ.
ಈ ಒಡಂಬಡಿಕೆಯು ಪೂರೈಕೆ ಹಾಗೂ ದರದ ಅನಿಶ್ಚಿತತೆಯನ್ನು ತಗ್ಗಿಸುವ ಜತೆಗೆ ದೇಶಕ್ಕೆ ಪೊಟ್ಯಾಶ್ ಸಹಿತ ರಸಗೊಬ್ಬರ ಪೂರೈಕೆಯಲ್ಲಿ ಸುಸ್ಥಿರತೆ ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ.
11 ಕೋಟಿಗೂ ಹೆಚ್ಚು ರೈತರ ಖಾತೆಗೆ ಈ ದಿನ ಬರಲಿದೆ ಪಿಎಂ ಕಿಸಾನ್ 12ನೇ ಕಂತಿನ ಹಣ!
ಭಾರತ ಸರ್ಕಾರವು ದೇಶೀಯ ರಸಗೊಬ್ಬರ ಕಂಪೆನಿಗಳು ತಮ್ಮ ಪೂರೈಕೆ ಸಂಪರ್ಕ ಜಾಲವನ್ನು ವೃದ್ಧಿಸಿಕೊಳ್ಳಲು ಪೂರಕವಾಗುವಂತೆ ದೊಡ್ಡ ಪ್ರಮಾಣದಲ್ಲಿ ಪೊಟ್ಯಾಶ್ ಪೂರೈಕೆ ದೇಶಗಳ ಕಂಪೆನಿಗಳೊಂದಿಗೆ ದೀರ್ಘಾವಧಿ ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಉತ್ತೇಜಿಸಲಾಗುತ್ತಿದೆ.
ಕಚ್ಚಾ ಸಾಮಗ್ರಿ, ರಸಗೊಬ್ಬರಕ್ಕೆ ಅಗತ್ಯವಾದ ಖನಿಜಾಂಶಗಳನ್ನು ಆಮದು ಮಾಡಿಕೊಳ್ಳಲು ವಿಶೇಷ ಒತ್ತು ನೀಡಲಾಗಿದ್ದು, ಈ ರೀತಿಯ ಒಡಂಬಡಿಕೆಯು ಕ್ರಮೇಣ ಅಗತ್ಯ ಪ್ರಮಾಣದಲ್ಲಿ ರಸಗೊಬ್ಬರ ಹಾಗೂ ಕಚ್ಚಾ ಸಾಮಗ್ರಿಯ ಲಭ್ಯತೆಯಲ್ಲಿ ಸುರಕ್ಷತೆ ಕಾಯ್ದುಕೊಳ್ಳಲು ಉಪಯುಕ್ತವಾಗಲಿದೆ. ಜತೆಗೆ ದರ ಏರಿಳಿತದ ಮಾರುಕಟ್ಟೆಯಲ್ಲಿ ಸುಸ್ಥಿರತೆ ಸಾಧಿಸಲು ಸಹಕಾರಿಯಾಗಲಿದೆ,ʼʼ ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ಒಡಂಬಡಿಕೆಯ ಪ್ರಕಾರ ಕೆನಡಾದ ಕ್ಯಾನ್‌ಪೊಟೆಕ್ಸ್ ಕಂಪೆನಿಯು ವಾರ್ಷಿಕವಾಗಿ ೧೫ ಲಕ್ಷ ಮೆಟ್ರಿಕ್ ಟನ್‌ವರೆಗೆ ಪೊಟ್ಯಾಶ್‌ಅನ್ನು ಭಾರತೀಯ ರಸಗೊಬ್ಬರ ಕಂಪೆನಿಗಳಿಗೆ ಪೂರೈಸಿದೆ. ಈ ಪೂರೈಕೆ ಪಾಲುದಾರಿಕೆಯು ದೇಶದೊಳಗೆ ರಸಗೊಬ್ಬರ ಲಭ್ಯತೆ ಸ್ಥಿತಿಯನ್ನು ಸುಧಾರಿಸುವ ಜತೆಗೆ ಪೂರೈಕೆ ಹಾಗೂ ದರದಲ್ಲಿನ ಏರಿಳಿತವನ್ನು ತಗ್ಗಿಸುವ ನಿರೀಕ್ಷೆ ಇದೆ,ʼʼ ಎಂದು ಹೇಳಿದರು.
"ಮುಂಬರುವ ಬೆಳೆ ಋತುಮಾನದ ದೃಷ್ಟಿಯಿಂದ ಈ ಒಡಂಬಡಿಕೆ ಮಹತ್ವದ್ದೆನಿಸಿದೆ" ಎಂದ ಶ್ರೀ ಡಾ.ಮನ್ಸುಖ್ ಮಾಂಡವೀಯಾ, "ಕೃಷಿಕ ಸಮುದಾಯದವರಿಗೆ ಸಕಾಲದಲ್ಲಿ ಎಂಒಪಿ ಲಭ್ಯತೆ ದೃಷ್ಟಿಯಿಂದ ಒಡಂಬಡಿಕೆ ಪ್ರಮುಖವೆನಿಸಿದೆ.
Recruitment: ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ನೇಮಕಾತಿ, 42,000 ಸಂಬಳ!
ರೈತರ ಕಲ್ಯಾಣಕ್ಕೆ ನೆರವಾಗುವ ಜತೆಗೆ ದೇಶದ ಆಹಾರ ಭದ್ರತೆಯನ್ನು ಹೆಚ್ಚಿಸಿಕೊಳ್ಳಲು ವರದಾನವಾಗಲಿದೆ. ಮಾತ್ರವಲ್ಲದೆ, ಈ ಒಡಂಬಡಿಕೆ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ವೃದ್ಧಿಸುವ ಜತೆಗೆ ಮುಂದೆಯೂ ದ್ವಿಪಕ್ಷೀಯ ಸಂಬಂಧ ಬೆಳವಣಿಗೆಗೆ ಪೂರಕವಾಗಿರಲಿದೆ,ʼʼ ಎಂದು ಆಶಾಭಾವನೆ ವ್ಯಕ್ತಡಿಸಿದರು.
ಪೊಟ್ಯಾಶ್ ಸೇರಿದಂತೆ ಇತರೆ ರಸಗೊಬ್ಬರ ಪೂರೈಕೆ ಸಂಬಂಧ ರಷ್ಯಾ, ಇಸ್ರೇಲ್ ಸೇರಿದಂತೆ ಇತರೆ ರಾಷ್ಟ್ರಗಳೊಂದಿಗೆ ದೀರ್ಘಾವಧಿಯ ಒಡಂಬಡಿಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಭಾರತ ಸರಕಾರ ಪರಿಶೀಲನೆ ನಡೆಸುವ ಮೂಲಕ ಒತ್ತು ನೀಡಿದೆ ಎಂದು ಹೇಳಿದ ಡಾ. ಮನ್ಸುಖ್ ಮಾಂಡವಿಯಾ ಅವರು, "ಆಮದು ಅವಲಂಬನೆಯನ್ನು ಕ್ರಮೇಣ ತಗ್ಗಿಸುವ ಗುರಿಯೂ ಇದೆ.
ರಸಗೊಬ್ಬರ ಇಲಾಖೆಯು ಪೌಷ್ಟಿಕಾಂಶ ಆಧಾರಿತ ಪ್ರೋತ್ಸಾಹಕ (ಸಬ್ಸಿಡಿ) ಎನ್‌ಬಿಎಸ್ ಯೋಜನೆಯಲ್ಲಿ ಪಿಡಿಎಂ (ಕಾಕಂಬಿಯಿಂದ ರೂಪುಗೊಂಡ ಪೊಟ್ಯಾಶ್- ಪೊಟ್ಯಾಶ್ ಡಿರೈವ್ಡ್ ಫ್ರಂ ಮೊಲಾಸಸ್) ಅನ್ನು ಸೇರ್ಪಡೆ ಮಾಡುವ ಮೂಲಕ ದೇಶೀಯ ಮೂಲದ ಪೊಟ್ಯಾಶ್ ಉತ್ಪಾದನೆಗೂ ಉತ್ತೇಜಿಸುತ್ತಿದೆ.
ಹಾಗೆಯೇ ಮದ್ಯ ತಯಾರಿಕೆಯಲ್ಲಿ ಉತ್ಪತ್ತಿಯಾಗುವ ಉಳಿಕೆ ದ್ರವವನ್ನು ( ಸ್ಪೆಂಟ್ ವಾಷ್) ಪೊಟ್ಯಾಶ್ ಆಗಿ ಪರಿವರ್ತಿಸುವ ನಿಟ್ಟಿನಲ್ಲಿಯೂ ರಸಗೊಬ್ಬರ ಕಾರ್ಖಾನೆಗಳಲ್ಲಿ ಪ್ರಯತ್ನ ನಡೆದಿದೆ ಎಂದು ವಿವರಿಸಿದರು.