News

ಪ್ರತಿ ಲೀಟರ್ ಹಸುವಿನ ಹಾಲಿಗೆ 2 ರೂಪಾಯಿ ಹಾಗೂ ಎಮ್ಮೆ ಹಾಲಿಗೆ 3 ರೂಪಾಯಿ ಹಾಲು ಶೇಖರಣೆ ದರವನ್ನು ಹೆಚ್ಚಿಗೆ ಅವಧಿ ವಿಸ್ತರಣೆ

25 May, 2021 9:46 PM IST By:
Milk

ಕೋವಿಡ್-19 ಲಾಕ್‍ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಹಾಗೂ ಹಾಲು ಉತ್ಪಾದಕರಿಗೆ ಅನುಕೂಲವಾಗುವಂತೆ ಈ ಹಿಂದೆ ಪ್ರತಿ ಲೀಟರ್ ಹಸುವಿಗೆ ಹಾಲಿಗೆ 2 ರೂಪಾಯಿ ಹಾಗೂ ಎಮ್ಮೆ ಹಾಲಿಗೆ 3 ರೂಪಾಯಿ ಹಾಲು ಶೇಖರಣೆ ದರವನ್ನು ಹೆಚ್ಚಿಗೆ ಮಾಡಿರುವುದನ್ನು 2021ರ ಜೂನ್ 1 ರಿಂದ ಜುಲೈ 31ರವರೆಗೆ (ಎರಡು ತಿಂಗಳು ಕಾಲ) ವಿಸ್ತರಿಸಲಾಗಿದೆ ಎಂದು ಕಲಬುರಗಿ-ಬೀದರ ಹಾಗೂ ಯಾದಗಿರಿ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಆರ್.ಕೆ. ಪಾಟೀಲ್ ಅವರು ತಿಳಿಸಿದ್ದಾರೆ.

ಈ ಹಿಂದೆ ಹಾಲು ಶೇಖರಣೆ ದರವನ್ನು ಹೆಚ್ಚಳ ಮಾಡಿ 2021ರ ಫೆಬ್ರವರಿ 1 ರಿಂದ ಮೇ 31ರವರೆಗೆ ಅನ್ವಯಿಸುವಂತೆ ಜಾರಿ ಮಾಡಲಾಗಿತ್ತು. ಈಗ ಸಧ್ಯ ಲಾಕ್‍ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಹಾಲು ಉತ್ಪಾದಕರಿಗೆ ಅನುಕೂಲವಾಗುವಂತೆ ಈ ಅವಧಿಯನ್ನು ಮೇಲ್ಕಂಡಂತೆ ವಿಸ್ತರಿಸಲಾಗಿದೆ.

ಪಶು ಆಹಾರ ದರ ಪ್ರತಿ ಟನ್‍ಗೆ 1000 ರೂಪಾಯಿಗಳ ರಿಯಾಯಿತಿ ನೀಡಿರುವುದನ್ನು ಸಹ ಎರಡು ತಿಂಗಳ ಕಾಲ ಮುಂದುವರೆಸಲಾಗಿದೆ. ಆದ್ದರಿಂದ ಹಾಲು ಉತ್ಪಾದಕರು ಇದರ ಸದುಪಯೋಗಪಡೆದುಕೊಂಡು ಉತ್ತಮ ಗುಣಮಟ್ಟದ ಹಾಲನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಘಕ್ಕೆ ಪೂರೈಕೆ ಮಾಡಬೇಕೆಂದು ಅವರು ತಿಳಿಸಿದ್ದಾರೆ.