News

ರಾಜ್ಯದಲ್ಲಿ ಹೆಚ್ಚಾಯ್ತು ಚಳಿ; ಬೆಂಗಳೂರಲ್ಲಿ ದಶಕದಲ್ಲೇ ಕನಿಷ್ಠ ತಾಪಮಾನ!

27 October, 2022 12:38 PM IST By: KJ Staff
Minimum temperature in the decade in Bangalore

ರಾಜ್ಯದಲ್ಲಿ ಮಳೆ ಕಡಿಮೆ ಆಗಿದ್ದು, ಒಣಹವೆ ಇದೆ. ಇದೇ ಸಂದರ್ಭದಲ್ಲಿ ಚಳಿ ಹೆಚ್ಚಾಗಿದೆ.

ಇದನ್ನೂ ಓದಿರಿ: KPSC recruitment: ಸಾಂಖ್ಯಿಕ ನಿರೀಕ್ಷಕ ಹುದ್ದೆಗೆ ಅರ್ಜಿ ಆಹ್ವಾನ

ರಾಜ್ಯದಲ್ಲಿ ಮುಂಗಾರು ಋತುವಿನಲ್ಲಿ ಶೇ20ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗಿತ್ತು. ಸದ್ಯ ಚಳಿಯು ಸಹ ದಾಖಲೆ ಪ್ರಮಾಣದಲ್ಲಿ ಆಗಿದೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಿಗ್ಗೆ ಕನಿಷ್ಠ 15.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ (ಚಳಿ) ದಾಖಲಾಗಿದೆ.

ಇದು 2008 ರಿಂದ 2022 ಈವರೆಗಿನ ವರ್ಷದ ಅಕ್ಟೋಬರ್ ತಿಂಗಳಲ್ಲಿ ದಾಖಲಾದ ಅತ್ಯಧಿಕ ಚಳಿ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

2011ರಿಂದ 2022ರವರೆಗೆ ಬೆಂಗಳೂರಲ್ಲಿ ಈ ಅಕ್ಟೋಬರ್ ತಿಂಗಳಲ್ಲಿ ಕನಿಷ್ಠ ತಾಪಮಾನ ಪ್ರತ್ಯೇಕ ದಿನಗಳಲ್ಲಿ 16.6ಡಿ.ಸೆ, 17ಡಿ.ಸೆ., 18 ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕಿಂತ ಕಡಿಮೆ ದಾಖಲಾಗಿರಲಿಲ್ಲ.

ಸುಮಾರು 11ವರ್ಷದ ಬಳಿಕ ಮತ್ತೆ ಅತೀ ಕನಿಷ್ಠ ತಾಪಮಾನ (15.4 ಡಿ.ಸೆ) ದಾಖಲಾಗಿದೆ. ಎಲ್ಲೆಡೆ ಬೆಳಗ್ಗೆ ಮಂಜು ಕವಿದ ವಾತಾವರಣ ಕಂಡು ಬರುತ್ತಿದೆ.  

ಇದನ್ನೂ ಓದಿರಿ: ಕಬ್ಬು ಬೆಳೆಗೆ ಬೆಂಬಲ ಬೆಲೆ ನೀಡಲು ಆಗ್ರಹ; ಇಂದು ರಾಷ್ಟ್ರೀಯ ಹೆದ್ದಾರಿ ಬಂದ್‌ 

ಅಕ್ಟೋಬರ್‌ನಲ್ಲಿ ನಿರೀಕ್ಷೆಯಂತೆ ತಾಪಮಾನವು 19-20 ಡಿಗ್ರಿ ಸೆಲ್ಸಿಯಸ್ ಇರಬೇಕು.

ಆದರೆ ವಾತಾವರಣದಲ್ಲಿ ಬದಲಾವಣೆಗಳಿಂದ ವಾಡಿಕೆಗಿಂತ ಹೆಚ್ಚು ಚಳಿ ಕಂಡು ಬರುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರ ಮಾಹಿತಿ ನೀಡಿದೆ.

ಈಶಾನ್ಯ ದಿಕ್ಕಿನ ಗಾಳಿಯ ಪ್ರಭಾವದಿಂದ ಚಳಿ ದಾಖಲು ಈಗಾಗಲೇ ಸೃಷ್ಟಿಯಾಗಿದ್ದ ಸಿತ್ರಾಂಗ್ ಚಂಡಮಾರುತ ಭೂಮೇಲ್ಮೈ ಸ್ಪರ್ಶಿಸಿದ್ದು, ಅಲ್ಲಿ ದುರ್ಬಲಗೊಂಡಿದೆ.

ಪರ್ಯಾಯ ದ್ವೀಪ ಪ್ರದೇಶದ ವಾತಾವರಣದ ತೇವಾಂಶ ಸಹಿ ಗಾಳಿಯು ಬಂಗಾಳಕೊಲ್ಲಿಯ ತೀವ್ರ ಈಶಾನ್ಯ ದಿಕ್ಕಿನ ಕಡೆಗೆ ಎಳೆಯುತ್ತಿದೆ.

ಹೀಗಾಗಿ ಬೆಂಗಳೂರಿನ ಅರಮನೆ ರಸ್ತೆಯ ಹವಾಮಾನ ಇಲಾಖೆ (IMD) ವೀಕ್ಷಣಾಲಯದಲ್ಲಿ ಕನಿಷ್ಠ ತಾಪಮಾನ 15.4 ಡಿ.ಸೆ. ದಾಖಲಾಗಿದೆ.

ಇದನ್ನೂ ಓದಿರಿ: ಭೂಕಂಪದಿಂದ ಕಟ್ಟಡ ರಕ್ಷಣೆಗೆ ಹೊಸ ಪ್ಲಾನ್‌ ಕಂಡುಕೊಂಡ ಸಂಶೋಧಕರು!  

ಉಪನಗರಗಳಲ್ಲಿ ಕನಿಷ್ಠ ತಾಪಮಾನವು ಮತ್ತಷ್ಟು ಕುಸಿದಿದೆ. ಸರ್ಜಾಪುರ ವ್ಯಾಪ್ತಿಯಲ್ಲಿ ಖಾಸಗಿ ಹವಾಮಾನ ಕೇಂದ್ರಗಳಲ್ಲಿ ಕನಿಷ್ಠ 12.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಬೆಂಗಳೂರು ವೆದರ್ ಟ್ವಿಟ್ಟರ್ (BngWeather Twitter) ಉಲ್ಲೇಖಿಸಿದೆ.  

ಇದನ್ನೂ ಓದಿರಿ: ಭೂಕಂಪದಿಂದ ಕಟ್ಟಡ ರಕ್ಷಣೆಗೆ ಹೊಸ ಪ್ಲಾನ್‌ ಕಂಡುಕೊಂಡ ಸಂಶೋಧಕರು!   

temperature

ರಾಜ್ಯದ ವಿವಿಧ ಜಿಲ್ಲೆಗಳ ಮೇಲೂ ಪರಿಣಾಮ

ದೇಶದ ಈಶಾನ್ಯ ಭಾಗದಿಂದ ಗಾಳಿ ಬೀಸಲು ಆರಂಭಿಸಿರುವುದರಿಂದ ರಾಜ್ಯ ರಾಜಧಾನಿ ಬೆಂಗಳೂರು ಮಾತ್ರವಲ್ಲದೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಚಳಿ ಪ್ರಮಾಣ ಹೆಚ್ಚಾಗುತ್ತಿದೆ.  

ಸಿತ್ರಾಂಗ್‌ ಚಂಡಮಾರುತ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಬೆಂಗಳೂರು ಸೇರಿದಂತೆ ಕರ್ನಾಟಕದ ದಕ್ಷಿಣ ಒಳನಾಡು, ಉತ್ತರ ಒಳನಾಡು ಭಾಗದಲ್ಲೂ ಚಳಿ ಹೆಚ್ಚಾಗಿದೆ.

ಮುಂಜಾನೆ ಸಮಯದಲ್ಲಿ ಮಂಜು ಬೀಳುತ್ತಿದ್ದು, ಚಳಿಯ ವಾತಾವರಣ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. 

ಇನ್ನು ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಕಲಬುರಗಿಯಲ್ಲಿ ಅತಿ ಹೆಚ್ಚಿನ ಗರಿಷ್ಠ ತಾಪಮಾನ 33.4 ಡಿಗ್ರಿ ಸೆಲ್ಸಿಯಸ್‌, ಬೀದರ್‌ನಲ್ಲಿ 12.4 ಡಿಗ್ರಿ ಸೆಲ್ಸಿಯಸ್‌ ಕಡಿಮೆ ತಾಪಮಾನ ದಾಖಲಾಗಿದೆ.

ಇನ್ನುಳಿದಂತೆ ರಾಜ್ಯದ ಹವಾಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ.

ಮುಂದಿನ 24 ಗಂಟೆಗಳ ಕಾಲ ರಾಜ್ಯದಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.