News

Cylinder subsidy ಸಿಲಿಂಡರ್‌ಗೆ ನೀಡುವ ಸಬ್ಸಿಡಿ ಪ್ರಮಾಣ ಹೆಚ್ಚಳ!

05 December, 2023 11:07 AM IST By: Hitesh
ಗ್ಯಾಸ್‌ ಸಿಲಿಂಡರ್‌ ಮೇಲೆ ಸಿಗಲಿದೆ ಸಬ್ಸಿಡಿ (ಚಿತ್ರಕೃಪೆ: ಸಮಾಜಿಕ ಜಾಲತಾಣ)

ಕೇಂದ್ರ ಸರ್ಕಾರವು ಸಿಲಿಂಡರ್‌ಗಳ ಮೇಲೆ ನೀಡುವ ಸಬ್ಸಿಡಿ ಪ್ರಮಾಣವನ್ನು ಹೆಚ್ಚಳ ಮಾಡುವ ಮೂಲಕ ಸಿಹಿ ಸುದ್ದಿಯನ್ನು ನೀಡಿದೆ.

ಇತ್ತೀಚಿನ ದಿನಗಳಲ್ಲಿ ದಿನಸಿ ಪದಾರ್ಥಗಳೂ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಜನ ಸಂಕಷ್ಟ ಎದುರಿಸುವಂತಾಗಿದೆ.

ಈ ಕಹಿ ಸುದ್ದಿಯ ನಡುವೆಯೇ ಇದೀಗ ಕೇಂದ್ರ ಸರ್ಕಾರವು ಸಿಲಿಂಡರ್‌ಗಳ ಮೇಲೆ ನೀಡುವ ಸಬ್ಸಿಡಿಯನ್ನು ಹೆಚ್ಚಳ ಮಾಡಿದೆ. 

ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY)ಯಡಿ ನೀಡುವ ಸಿಲಿಂಡರ್‌ ಸಬ್ಸಿಡಿ ದರವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದೆ.  

ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು 2016ರ ಮೇ ತಿಂಗಳಿನಲ್ಲಿ ದೇಶಾದ್ಯಂತ ಬಡ ಕುಟುಂಬಗಳಿಗೆ ಶುದ್ಧ ಅಡುಗೆ ಇಂಧನವನ್ನು

ಒದಗಿಸುವ ಉದ್ದೇಶದಿಂದ ಪ್ರಾರಂಭಿಸಲಾಯಿತು.

PMUY ಅಡಿಯಲ್ಲಿ, ಬಡ ಕುಟುಂಬಗಳ ಮಹಿಳೆಯರಿಗೆ ಠೇವಣಿ ಉಚಿತ LPG ಸಂಪರ್ಕವನ್ನು ಒದಗಿಸಲಾಗಿದೆ.

31.10.2023 ರಂತೆ, ಪ್ರಧಾನ್ ಮಂತ್ರಿ ಉಜ್ವಲ ಯೋಜನೆ (PMUY) ಅಡಿಯಲ್ಲಿ 9.67 ಕೋಟಿ ಸಕ್ರಿಯ LPG ಸಂಪರ್ಕಗಳಿವೆ.

ಅತೀ ಹೆಚ್ಚಿನ ಪ್ರಮಾಣದಲ್ಲಿ ರಾಜಸ್ಥಾನದಲ್ಲಿ 69.26 ಲಕ್ಷ ಸಂಪರ್ಕಗಳನ್ನು ನೀಡಲಾಗಿದೆ.

ಸಿಲಿಂಡರ್‌ ಸಬ್ಸಿಡಿ 100 ರೂಪಾಯಿ ಹೆಚ್ಚಳ!

ಸರ್ಕಾರವು 14.2 ಕೆಜಿ ಸಿಲಿಂಡರ್‌ಗೆ ಪ್ರತಿ ವರ್ಷಕ್ಕೆ 12 ರೀಫಿಲ್‌ಗಳಿಗೆ (ಮತ್ತು 5 ಕೆಜಿ ಸಂಪರ್ಕಗಳಿಗೆ ಪ್ರಮಾಣಾನುಗುಣವಾಗಿ ಅನುಪಾತದಲ್ಲಿ 5 ಕೆಜಿ ಸಂಪರ್ಕಗಳಿಗೆ)

ಪ್ರತಿ 14.2 ಕೆಜಿ ಸಿಲಿಂಡರ್‌ಗೆ ₹ 200/- ರಷ್ಟು   ಸಬ್ಸಿಡಿಯನ್ನು ನೀಡುತ್ತಿದೆ.

ಅಕ್ಟೋಬರ್ 2023 ರಲ್ಲಿ, ಸರ್ಕಾರವು ಉದ್ದೇಶಿತ ಸಬ್ಸಿಡಿಯನ್ನು ಹೆಚ್ಚಿಸಿದೆ.

ಪ್ರತಿ ವರ್ಷಕ್ಕೆ 12 ರೀಫಿಲ್‌ಗಳಿಗೆ 14.2 ಕೆಜಿ ಸಿಲಿಂಡರ್‌ಗೆ 300 (ಮತ್ತು 5 ಕೆಜಿ ಸಂಪರ್ಕಗಳಿಗೆ ಪ್ರಮಾಣಾನುಗುಣವಾಗಿ ಪ್ರೊ-ರೇಟ್ ಮಾಡಲಾಗಿದೆ). ನೀಡಲು ನಿರ್ಧರಿಸಿದೆ. 

ಇದಲ್ಲದೆ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ ಅಡಿಯಲ್ಲಿ ಏಪ್ರಿಲ್ 2020 ರಿಂದ ಡಿಸೆಂಬರ್ 2020 ರವರೆಗೆ ಪಿಎಂಯುವೈ 

ಫಲಾನುಭವಿಗಳಿಗೆ ಸರ್ಕಾರವು 3 ಉಚಿತ ಮರುಪೂರಣಗಳನ್ನು ಒದಗಿಸಿದೆ.

ಈ ಯೋಜನೆಯಡಿಯಲ್ಲಿ, ದೇಶಾದ್ಯಂತ 14.17 ಕೋಟಿ ಉಚಿತ ಸಿಲಿಂಡರ್‌ಗಳನ್ನೂ (ಮರುಪೂರಣ) ಒದಗಿಸಲಾಗಿದೆ. 

ಪೆಟ್ರೋಲಿಯಂ ಮತ್ತು ನೈಸರ್ಗಿಕ ಸಚಿವಾಲಯದ ರಾಜ್ಯ ಸಚಿವರು ಗಸ್ಶ್ರೀ ರಾಮೇಶ್ವರ್ ತೇಲಿ ಅವರು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.