News

ರಾಜ್ಯದಲ್ಲಿ ಇಷ್ಟರಲ್ಲೇ ಹಾಲು ಖರೀದಿ ದರ ಹೆಚ್ಚಳ: ಸಚಿವ ಕೆ. ವೆಂಕಟೇಶ್‌!

12 July, 2023 10:34 AM IST By: Hitesh
Increase in milk purchase price in the state: Minister K. Venkatesh!

ರಾಜ್ಯದಲ್ಲಿ ಹಾಲು ಖರೀದಿ ದರ ಇಷ್ಟರಲ್ಲೇ ಹೆಚ್ಚಳವಾಗಲಿದೆ. ಈ ಸಂಬಂಧ ಖುದ್ದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರು ಮಾಹಿತಿ ನೀಡಿದ್ದಾರೆ.

ರಾಜ್ಯ ಸರ್ಕಾರವು ಹಾಲು ಉತ್ಪಾದಕರಿಂದ ಖರೀದಿಸುವ ಹಾಲಿನ ದರವನ್ನು ಹೆಚ್ಚಳ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಹಾಲಿನ ದರ ಹೆಚ್ಚಳ ಮಾಡುವ ಸಂಬಂಧ ಮಾತನಾಡಿರುವ  ರಾಜ್ಯ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರು ಹಾಲು ಉತ್ಪಾದಕರಿಂದ ಖರೀದಿಸುವ

ಹಾಲಿನ ದರವನ್ನು ಹೆಚ್ಚಳ ಮಾಡಲಾಗುವುದು ಎಂದಿದ್ದಾರೆ. ಈ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿದ್ದು, ಚರ್ಚೆಯ ನಂತರದಲ್ಲಿ ಪರಿಷ್ಕೃತ ದರ

ನಿಗದಿ ಮಾಡಲಿದ್ದೇವೆ ಎಂದು ಹೇಳಿದ್ದಾರೆ.  

ಮಂಗಳವಾರ ವಿಧಾನಪರಿಷತ್ತಿನಲ್ಲಿ ಜೆಡಿಎಸ್‌ನ ಕೆ.ಎ.ತಿಪ್ಪೇಸ್ವಾಮಿ, ಎಸ್‌.ಎಲ್‌. ಭೋಜೇಗೌಡ ಅವರ ಗಮನ ಪ್ರಸ್ತಾವನೆಗೆ ಸಚಿವರು ಉತ್ತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿ ಲೀಟರ್ ಹಾಲಿಗೆ ಒಕ್ಕೂಟಗಳು 128 ನೀಡುತ್ತಿದ್ದು,

ಸರ್ಕಾರದಿಂದ 15 ರೂಪಾಯಿಯನ್ನು ಪ್ರೋತ್ಸಾಹ ಧನದ ರೂಪದಲ್ಲಿ ನೀಡಲಾಗುತ್ತಿದೆ. ರಾಜ್ಯದಲ್ಲಿ ಹಾಲಿನ ಕೊರತೆ

ಇರುವ ಪ್ರದೇಶದಲ್ಲಿ ಖಾಸಗಿಯವರು ರೈತರಿಂದ ಅಧಿಕ ದರ ನೀಡಿ ಹಾಲು ಖರೀದಿ ಮಾಡುತ್ತಿದ್ದಾರೆ ಎಂದು ವಿವರಿಸಿದರು. 

ಹಾಲು ಒಕ್ಕೂಟಗಳು ಹೆಚ್ಚಿನ ದರ ನೀಡಿ ಹಾಲು ಖರೀದಿ ಮಾಡುವುದರಿಂದಾಗಿ   ಖಾಸಗಿ ಅವರೊಂದಿಗೆ ಪೈಪೋಟಿ ಮಾಡಲು ಸಾಧ್ಯವಾಗುತ್ತದೆ.

ಇದೇ ಸಂದರ್ಭದಲ್ಲಿ  ಬೆಲೆ ಏರಿಕೆಯಿಂದಾಗಿ ಹಸು, ಎಮ್ಮೆ ಸಾಕುವುದಕ್ಕೆ ಹೆಚ್ಚು ಖರ್ಚಾಗುತ್ತಿರುವುದರಿಂದ ದರ ಹೆಚ್ಚಳ ಖಚಿತ ಎಂದು ಹೇಳಿದರು. 

ಇನ್ನು ಇದೇ ಸಂದರ್ಭದಲ್ಲಿ ಹಾಲಿನ ದರ ಹೆಚ್ಚಳವಾಗುವ ಸಾಧ್ಯತೆಯೂ ಇದೆ. ಹಾಲಿನ ದರವನ್ನು 5 ರೂಪಾಯಿ ಹೆಚ್ಚಳ ಮಾಡುವುದಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ, 

ಇದು ಒಮ್ಮೆಗೇ ಭಾರೀ ಪ್ರಮಾಣವಾಗುವುದರಿಂದ ಈ ಮೊತ್ತದ ದರ ಏರಿಕೆ ಸಾಧ್ಯತೆ ವಿರಳ.  

Photo Source: pexels.com