ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನದ ಸಿಕಾರ್‌ನಲ್ಲಿ ಗುರುವಾರ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.
ಈ ಯೋಜನೆಗಳಲ್ಲಿ 1.25 ಲಕ್ಷಕ್ಕೂ ಅಧಿಕ ಪಿಎಂ ಕಿಸಾನ್ ಸಮೃದ್ಧಿ ಕೇಂದ್ರ (ಪಿಎಂಕೆಎಸ್ ಕೆ)ಗಳ ಲೋಕಾರ್ಪಣೆ,
ಸಲ್ಫರ್ ಲೇಪಿತ ಹೊಸ ಬಗೆಯ ಯೂರಿಯಾ – ಯೂರಿಯಾ ಗೋಲ್ಡ್ ಬಿಡುಗಡೆ, 1600 ರೈತ ಉತ್ಪನ್ನ ಸಂಸ್ಥೆಗಳುಗಳನ್ನು
ಡಿಜಿಟಲ್ ವ್ಯವಹಾರಕ್ಕೆ ಮುಕ್ತಜಾಲ ವೇದಿಕೆಗೆ ತರುವುದು, ಪಿಎಂ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್)ಅಡಿ
8.5 ಕೋಟಿ ಫಲಾನುಭವಿಗಳಿಗೆ 14ನೇ ಕಂತಿನ 17,000 ಕೋಟಿ ರೂ. ಬಿಡುಗಡೆ ಮಾಡುವುದು ಸೇರಿದಂತೆ ಹಲವು ಯೋಜನೆಗಳು ಸೇರಿವೆ
ಚಿತ್ತೋರ್ ಗಢ, ಧೋಲಾಪುರ್, ಸಿರೋಹಿ, ಸಿಕಾರ್ ಮತ್ತು ಶ್ರೀಗಂಗಾನಗರಗಳಲ್ಲಿ 5 ಹೊಸ ವೈದ್ಯಕೀಯ ಕಾಲೇಜುಗಳ ಉದ್ಘಾಟನೆ,
ಬರಾನ್, ಬುಂಡಿ, ಕರೌಲಿ, ಜುನ್ ಜಹುನು, ಸವಾಯಿ ಮಾಧೋಪುರ್, ಜೈಸಲ್ಮೇರ್, ಟೋಂಕ್ ನಲ್ಲಿ 7 ಹೊಸ ವೈದ್ಯಕೀಯ
ಕಾಲೇಜುಗಳಿಗೆ ಶಂಕುಸ್ಥಾಪನೆ, ಉದಯ್ ಪುರ, ಬನ್ಸವಾರ್, ಪ್ರತಾಪ್ ಗಡ್ ಮತ್ತು ಡುಂಗಾರ್ಪುರ
ಜಿಲ್ಲೆಗಳಲ್ಲಿ ಮತ್ತು ಜೋಧ್ ಪುರ್ ನ ಕೇಂದ್ರೀಯ ವಿದ್ಯಾಲಯ ತಿವರಿಯಲ್ಲಿ 6 ಏಕಲವ್ಯ ಮಾದರಿ ವಸತಿ ಶಾಲೆಗಳ ಉದ್ಘಾಟನೆಯೂ ಸೇರಿದೆ.
ದೇಶಕ್ಕೆ 1.25 ಲಕ್ಷಕ್ಕೂ ಅಧಿಕ ಪಿಎಂ-ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ಸಮರ್ಪಿಸಿದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ ಅವರು,
ಇವು ಗ್ರಾಮಗಳು ಹಾಗೂ ಬ್ಲಾಕ್ ಮಟ್ಟದಲ್ಲಿ ಕೋಟ್ಯಾಂತರ ರೈತರಿಗೆ ನೇರ ಅನುಕೂಲಗಳನ್ನು ಒದಗಿಸುತ್ತದೆ ಎಂದರು.
ಅಲ್ಲದೆ ರೈತ ಉತ್ಪನ್ನ ಸಂಸ್ಥೆಗಳು(ಎಫ್ ಪಿಒ)ಗಳನ್ನು ಡಿಜಿಟಲ್ ವಹಿವಾಟಿನ ಮುಕ್ತ ಜಾಲಕ್ಕೆ(ಒಎನ್ ಡಿಸಿ) ವ್ಯಾಪ್ತಿಗೆ
ತಂದಿರುವುದನ್ನು ಉಲ್ಲೇಖಿಸಿದರು ಮತ್ತು ಇದರಿಂದ ರೈತರು ತಮ್ಮ ಉತ್ಪನ್ನಗಳನ್ನು ದೇಶದ ಯಾವುದೇ ಮೂಲೆಯ
ಮಾರುಕಟ್ಟೆಗೆ ಬೇಕಾದರೂ ಕೊಂಡೊಯ್ಯಲು ಸುಲಭವಾಗುತ್ತದೆ ಎಂದರು. ಅಲ್ಲದೆ ಹೊಸ ಬಗೆಯ ಯೂರಿಯಾ ಗೋಲ್ಡ್ ಬಿಡುಗಡೆ,
ಹೊಸ ವೈದ್ಯಕೀಯ ಕಾಲೇಜುಗಳು ಮತ್ತು ಏಕಲವ್ಯ ಮಾದರಿ ಕಾಲೇಜುಗಳ ಉದ್ಘಾಟನೆಯನ್ನು ಅವರು ಉಲ್ಲೇಖಿಸಿದರು.
ಕಳೆದ 9 ವರ್ಷಗಳ್ಲಲಿ ಬೀಜದಿಂದ ಮಾರುಕಟ್ಟೆವರೆಗೆ(ಬೀಜ್ ಸೆ ಬಜಾರ್ ತಕ್) ವರೆಗೆ
ಹೊಸ ವ್ಯವಸ್ಥೆಯನ್ನು ಸೃಷ್ಟಿಸಿರುವ ಬಗ್ಗೆ ಪ್ರಧಾನಮಂತ್ರಿ ವಿವರಿಸಿದರು.
2015ರಲ್ಲಿ ಸೂರತ್ ಗರ್ ನಲ್ಲಿ ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆಗೆ ಚಾಲನೆ ನೀಡಿದ್ದನ್ನು ಪ್ರಧಾನಮಂತ್ರಿ ಸ್ಮರಿಸಿದರು.
ಈ ಯೋಜನೆಯ ಮೂಲಕ ಮಣ್ಣಿನ ಆರೋಗ್ಯದ ಬಗ್ಗೆ ತಿಳಿದುಕೊಂಡು, ಕೋಟ್ಯಾಂತರ ರೈತರು ಸಕಾರಾತ್ಮಕ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂದರು.
1.25ಲಕ್ಷ ಪಿಎಂ – ಕಿಸಾನ್ ಸಮೃದ್ಧಿ ಕೇಂದ್ರಗಳು(ಪಿಎಂಕೆಎಸ್ ಕೆ)ಗಳು ರೈತರ ಅಭ್ಯುದಯಕ್ಕೆ ದಾರಿಮಾಡಿಕೊಡಲಿವೆ ಎಂದು ಅವರು ಹೇಳಿದರು.
ಈ ಕೇಂದ್ರಗಳನ್ನು ರೈತರ ಎಲ್ಲ ಅಗತ್ಯತೆಗಳನ್ನು ಪೂರೈಸುವ ಏಕೈಕ ತಾಣವನ್ನಾಗಿ ಅಭಿವೃದ್ಧಿಪಡಿಸಲಾಗುವುದು.
ಈ ಕೇಂದ್ರಗಳು ಕೃಷಿಗೆ ಸಂಬಂಧಿಸಿದಂತೆ ರೈತರಿಗೆ ಎಲ್ಲಾ ಅತ್ಯಾಧುನಿಕ ಮತ್ತು ಇತ್ತೀಚಿನ ಮಾಹಿತಿಯನ್ನು ಒದಗಿಸಲಿವೆ ಎಂದರು.
ಅಲ್ಲದೆ ಈ ಕೇಂದ್ರಗಳು ಸರ್ಕಾರದ ಕೃಷಿ ಯೋಜನೆಗಳ ಬಗ್ಗೆ ಸಕಾಲದಲ್ಲಿ ಸೂಕ್ತ ಮಾಹಿತಿಯನ್ನು ಒದಗಿಸುತ್ತವೆ.
ರೈತರು ಈ ಕೇಂದ್ರಗಳಿಗೆ ಆಗಾಗ್ಗೆ ಭೇಟಿ ನೀಡುತ್ತಿರಬೇಕು ಮತ್ತು ಅಲ್ಲಿ ಲಭ್ಯವಿರುವ ಜ್ಞಾನದ ಪ್ರಯೋಜನ ಪಡೆಯಬೇಕು ಎಂದು ಪ್ರಧಾನಿ ರೈತರಿಗೆ ಸಲಹೆ ನೀಡಿದರು.
ಈ ವರ್ಷಾಂತ್ಯಕ್ಕೂ ಮುನ್ನ ದೇಶಾದ್ಯಂತ ಇನ್ನೂ 1.75 ಲಕ್ಷ ಪಿಎಂ-ಕಿಸಾನ್ ಸಮೃದ್ಧಿ ಕೇಂದ್ರ(ಪಿಎಂಕೆಎಸ್ ಕೆ)ಗಳನ್ನು
ಹೆಚ್ಚುವರಿಯಾಗಿ ಆರಂಭಿಸಲಾಗುವುದು ಎಂದು ಅವರು ಹೇಳಿದರು.
ಸದ್ಯದ ಕೇಂದ್ರ ಸರ್ಕಾರ ರೈತರ ವೆಚ್ಚವನ್ನು ತಗ್ಗಿಸಲು ಎಲ್ಲಾ ಹಂತದಲ್ಲೂ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ
ಮತ್ತು ಅವರ ಅಗತ್ಯಕ್ಕೆ ಸ್ಪಂದಿಸುವ ಎಲ್ಲ ನೆರವು ನೀಡಲಾಗುತ್ತಿದೆ ಎಂದರು.
ಪಿಎಂ ಕಿಸಾನ್ ಸಮ್ಮಾನ್ ನಿಧಿಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ರೈತರು ಬ್ಯಾಂಕ್ ಖಾತೆಗಳಿಗೆ ನೇರ ಹಣ ವರ್ಗಾಯಿಸುವ
ಈ ಯೋಜನೆ ವಿಶ್ವದ ಅತ್ಯಂತ ಅತಿದೊಡ್ಡ ಯೋಜನೆಯಾಗಿದೆ ಎಂದರು.
ರೈತರ ಬ್ಯಾಂಕ್ ಖಾತೆಗಳಿಗೆ 14ನೇ ಕಂತನ್ನು ಬಿಡುಗಡೆ ಮಾಡಲಾಗಿದೆ. ಈವರೆಗೆ 2 ಲಕ್ಷ 60 ಸಾವಿರ ಕೋಟಿ ರೂಪಾಯಿಗೂ
ಅಧಿಕ ಹಣವನ್ನು ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ.
ಇದು ರೈತರಿಗೆ ಅವರಿಗೆ ಇತರೆ ವೆಚ್ಚವನ್ನು ಸರಿದೂಗಿಸಿಕೊಳ್ಳಲು ನೆರವಾಗಲಿದೆ ಎಂದರು.
ಸರ್ಕಾರ ರೈತರ ವೆಚ್ಚವನ್ನು ಉಳಿತಾಯ ಮಾಡುತ್ತಿದೆ ಎಂಬುದಕ್ಕೆ ದೇಶದಲ್ಲಿನ ಯೂರಿಯಾ ಬೆಲೆಯೇ ಸಾಕ್ಷಿ ಎಂದು ಅವರು ಹೇಳಿದರು.
ಕೊರೊನಾ ಸಾಂಕ್ರಾಮಿಕ ಮತ್ತು ರಷ್ಯಾ ಉಕ್ರೇನ್ ಯುದ್ಧವನ್ನು ಉಲ್ಲೇಖಿಸಿದ ಅವರು, ಇದರಿಂದ ರಸಗೊಬ್ಬರ ವಲಯದಲ್ಲಿ ಭಾರೀ ವ್ಯತ್ಯಯವಾಗಿದೆ.
ಆದರೆ ಪ್ರಸಕ್ತ ಸರ್ಕಾರ ಇದರಿಂದ ದೇಶದ ರೈತರಿಗೆ ಯಾವುದೇ ತೊಂದೆಯಾಗದಂತೆ ನೋಡಿಕೊಂಡಿದೆ
ಎಂದು ಪ್ರಧಾನಮಂತ್ರಿ ಹೇಳಿದರು. ರಸಗೊಬ್ಬರಗಳ ಬೆಲೆ ಕುರಿತಂತೆ ಮಾತನಾಡಿದ ಪ್ರಧಾನಮಂತ್ರಿ, ಒಂದು ಚೀಲ ಯೂರಿಯಾ
ಬೆಲೆ ಭಾರತದಲ್ಲಿ 266 ರೂ. ಇದ್ದರೆ, ಪಾಕಿಸ್ತಾನದಲ್ಲಿ 800 ರೂ, ಬಾಂಗ್ಲಾದೇಶದಲ್ಲಿ 720 ರೂ,
ಚೀನಾದಲ್ಲಿ 2100 ರೂ. ಮತ್ತು ಅಮೆರಿಕದಲ್ಲ 3000 ರೂ.ಗಳಿಗೂ ಅಧಿಕ ದರವಿದೆ ಎಂದರು.
“ಯೂರಿಯಾ ಬೆಲೆ ನಮ್ಮ ರೈತರನ್ನು ಬಾಧಿಸಲು ಸರ್ಕಾರ ಬಿಡುವುದಿಲ್ಲ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ನಮ್ಮ ರೈತರು ಯೂರಿಯಾ ಖರೀದಿಸಲು ಹೋದರೆ ಅವರಿಗೆ ಮೋದಿ ಅವರ ಗ್ಯಾರಂಟಿ ಇದೆ ಎನ್ನುವ ನಂಬಿಕೆ ಇರಬೇಕಾಗಿದೆ ಎಂದು ಹೇಳಿದರು.
ಸಿರಿಧಾನ್ಯಗಳ ಉತ್ತೇಜನ ಮತ್ತು ಅವುಗಳ ಬ್ಯಾಂಡಿಂಗ್ ಅನ್ನು ಶ್ರೀ ಅನ್ನ ಯೋಜನೆಯಡಿಯಲ್ಲಿ ಮಾಡುವಂತೆ ಪ್ರಧಾನಮಂತ್ರಿ ಹೇಳಿದರು.
ಶ್ರೀ ಅನ್ನ ಯೋಜನೆಯನ್ನು ಉತ್ತೇಜಿಸುವ ಮೂಲಕ ಸಿರಿಧಾನ್ಯಗಳ ಉತ್ಪಾದನೆ, ಸಂಸ್ಕರಣೆ ಮತ್ತು ರಫ್ತು ಹೆಚ್ಚಳವಾಗಿದೆ
ಎಂದು ಅವರು ಹೇಳಿದರು. ತಮ್ಮ ಇತ್ತೀಚಿನ ಅಮೆರಿಕ ಭೇಟಿ ವೇಳೆ ಶ್ವೇತಭವನದ ಅಧಿಕೃತ ಔತಣಕೂಟದಲ್ಲಿ
ಸಿರಿಧಾನ್ಯಗಳ ಖಾದ್ಯಗಳಿದ್ದವು ಎಂದು ಪ್ರಧಾನಮಂತ್ರಿ ಸ್ಮರಿಸಿದರು.
ಚಿತ್ರಕೃಪೆ: @facebook.com/narendramodi