News

ರೇಷನ್‌ ಕಾರ್ಡ್‌ದಾರರಿಗೆ ಬಿಗ್‌ ನ್ಯೂಸ್‌: ಈ ರಾಜ್ಯಗಳಲ್ಲಿ ಇನ್ಮುಂದೆ ರೇಷನ್‌ನಲ್ಲಿ ಗೋಧಿ ವಿತರಣೆ ಕ್ಯಾನ್ಸಲ್‌..!

08 May, 2022 4:04 PM IST By: Maltesh

ರೇಷನ್‌ ಕಾರ್ಡ್‌ ಹೊಂದಿರುವವರಿಗೆ ಕೊಂಚ ಕಹಿ ಸುದ್ದಿ ಲಭ್ಯವಾಗಿದ್ದು, ಮುಂದಿನ ತಿಂಗಳಿಂದ ರೇಷನ್‌ ವಿತರಣೆಯಲ್ಲಿ ಭಾರೀ ಬದಲಾವಣೆಯಾಗಲಿವೆ. ಹೌದು ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ, ಮುಂದಿನ ತಿಂಗಳಿನಿಂದ, ಅಂತ್ಯೋದಯ ಕುಟುಂಬಗಳ ಪಡಿತರ ಚೀಟಿದಾರರಿಗೆ  ಗೋಧಿಯನ್ನು ವಿತರಣೆಯಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಇದೆ  ಎಂದು ವರದಿಗಳಾಗಿವೆ.

Pearl-Fish Farming! Profitable Business! ಮಹಿಳೆಯೊಬ್ಬಳು ರೂ 20,00,000 ಕಿಂತ ಹೆಚ್ಚು ಗಾಳಿಸುತ್ತಾಳೆ!

Small Savings ಬಡ್ಡಿ ದರ..ಮಹತ್ವದ ಮಾಹಿತಿ ನೀಡಿದ ಹಣಕಾಸು ಸಚಿವಾಲಯ

ಇತ್ತೀಚಿಗೆ  ದೇಶದ ಕೆಲವು ರಾಜ್ಯಗಳಲ್ಲಿ, ರಬಿ ಋತುವಿನಲ್ಲಿ ಗೋಧಿ ಒಕ್ಕಣೆಯಲ್ಲಿ ಆಗಾಧ ಪ್ರಮಾಣದ  ಕುಸಿತ ಕಂಡುಬಂದಿದೆ, ಇದರಿಂದಾಗಿ  ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY) ಅಡಿಯಲ್ಲಿ  ಕೆಲವು ರಾಜ್ಯಗಳಲ್ಲಿ ಗೋಧಿ ಹಂಚಿಕೆಯನ್ನು ಕಡಿಮೆ ಮಾಡಲು ಮುಂದಾಗಿದೆ ಎನ್ನಲಾಗುತ್ತಿದೆ. ಅಲ್ಲದೇ ದೇಶದ ಕೆಲವು ರಾಜ್ಯಗಳಲ್ಲಿ ಉಚಿತ ಗೋಧಿ ವಿತರಣೆ ಮಾಡದಂತೆ ಆದೇಶವನ್ನೂ ಹೊರಡಿಸಲಾಗಿದೆ.

ಈ ರಾಜ್ಯಗಳಲ್ಲಿ ಪಡಿತರ ವಿತರಣೆಯಲ್ಲಿ ಗೋಧಿ ವಿತರಣೆ ಬಂದ್‌..

ಇತ್ತೀಚಿನ ಮಾಹಿತಿಯ ಪ್ರಕಾರ, ಬಿಹಾರ ,  ಕೇರಳ ಮತ್ತು ಉತ್ತರ ಪ್ರದೇಶದಂತಹ ದೇಶದ ಮೂರು ರಾಜ್ಯಗಳು ಪಿಎಂಜಿಕೆಎವೈ ಯೋಜನೆಯಡಿ ಪಡಿತರದಾರರಿಗೆ ಉಚಿತ ಗೋಧಿ ವಿತರಣೆಯನ್ನು  ಸೌಲಭ್ಯವನ್ನು ಮುಂದುವರೆಸದೆ ತಾತ್ಕಾಲಿಕವಾಗಿ ಬಂದ್‌ ಮಾಡಲಾಗಿದೆ.

ಕೇಂದ್ರ ಸಚಿವ ಪರ್ಷೋತ್ತಮ್ ರೂಪಾಲಾ ಅವರಿಂದ ವಿದ್ಯಾರ್ಥಿಗಳಿಗೆ “ಗೋ ಕಾಶ್ಟ್” ಯಂತ್ರ ವಿತರಣೆ!

ರಸಗೊಬ್ಬರ, ಬೀಜ ಹಾಗೂ ಕೀಟನಾಶಕಗಳ ಆನ್ಲೈನ್ ಡೀಲರ್ಶಿಪ್ ಪರವಾನಗಿ ಪಡೆಯುವ ವಿಧಾನಗಳು!

ಈ ರಾಜ್ಯಗಳಲ್ಲಿ ಗೋಧಿ ವಿತರಣೆಯನ್ನು ಕಡಿತಗೊಳಿಸಲಾಗಿದೆ

ದೆಹಲಿ ,  ಗುಜರಾತ್ ,  ಜಾರ್ಖಂಡ್ ,  ಮಧ್ಯಪ್ರದೇಶ ,  ಮಹಾರಾಷ್ಟ್ರ ,  ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ ಮುಂತಾದ ದೇಶದ ಎಂಟು ರಾಜ್ಯಗಳಲ್ಲಿ ಗೋಧಿ ವಿತರಣೆಯ ಪ್ರಮಾಣವನ್ನು ಸರ್ಕಾರ ಕಡಿಮೆ ಮಾಡಿದೆ . ಇದನ್ನು ಹೊರತುಪಡಿಸಿ , ಇತರ 25 ರಾಜ್ಯಗಳು ಮತ್ತು ಉಳಿದ ಕೇಂದ್ರಾಡಳಿತ ಪ್ರದೇಶಗಳಿಗೆ  ಗೋಧಿ ಹಂಚಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎನ್ನಲಾಗಿದೆ.

ಸದ್ಯ ಗೋಧಿ ಕೊರತೆಯನ್ನು ನೀಗಿಸಲು ಪಡಿತರ ಚೀಟಿದಾರರಿಗೆ ಅಕ್ಕಿ ವಿತರಿಸಲಾಗುವುದು ಎಂದು ಸರ್ಕಾರ ಹೇಳಿದೆ. ಮೇ ನಿಂದ ಸೆಪ್ಟೆಂಬರ್ ವರೆಗೆ ಮುಂಬರುವ ಐದು ತಿಂಗಳ ಕಾಲ ದೇಶದ  ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ  ಅಕ್ಕಿ ಮತ್ತು ಗೋಧಿಯ PMKGAY ಹಂಚಿಕೆಯನ್ನು ಪರಿಷ್ಕರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ .

ಗೋಧಿ ಪೂರೈಕೆ, ದಾಸ್ತಾನು ಮತ್ತು ರಫ್ತಿನ ಪರಿಸ್ಥಿತಿ ಪರಿಶೀಲಿಸಲು ಪ್ರಧಾನಮಂತ್ರಿ ಸಭೆ!

ರಷ್ಯಾದಿಂದ ಅಪಾರ ಬೇಡಿಕೆಯಿದ್ದರೂ 200 ರೂ. ಕುಸಿತ ಕಂಡ ಗೋಧಿ..ಕಾರಣವೇನು..?

ಮುಂದಿನ ತಿಂಗಳಿನಿಂದ ಕೇವಲ ಒಂದು ಕೆಜಿ ಗೋಧಿ ಮಾತ್ರ ಲಭ್ಯವಿರುತ್ತದೆ. ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ, 14 ಲಕ್ಷಕ್ಕೂ ಹೆಚ್ಚು ಬಡ ಕುಟುಂಬಗಳ ಪಡಿತರ ಚೀಟಿದಾರರಿಗೆ   ಮುಂಬರುವ ತಿಂಗಳಿನಿಂದ ಪ್ರತಿ ಯೂನಿಟ್‌ಗೆ ಮೂರು ಕೆಜಿ ಗೋಧಿ ಬದಲಿಗೆ ಒಂದು ಕೆಜಿ ಗೋಧಿ ನೀಡಲಾಗುವುದು, ಆದರೆ ಎರಡು kg ಬದಲಿಗೆ ನಾಲ್ಕು  Kg ಅಕ್ಕಿ ನೀಡಲಾಗುವುದು.