News

ಕೇವಲ 45 ನಿಮಿಷಗಳಲ್ಲಿ ಅಗ್ಗದ ಸಾಲ ನೀಡಲಿದೆ ಬ್ಯಾಂಕ್ SBI

09 May, 2020 6:44 PM IST By:

ಕೊರೋನಾ ವೈರಸ್ ಲಾಕ್‌ಡೌನ‌್ ಅವಧಿಯಲ್ಲಿ ಹಣಕಾಸಿನ ಸಂಕಷ್ಟದಲ್ಲಿರುವವರ ನೆರವಿಗೆ ಮುಂದಾಗಿರುವ ಎಸ್‌ಬಿಐ ತುರ್ತು ಸಾಲದ ಸ್ಕೀಮ್ ಒದಗಿಸಿದೆ. ಈ ಮೂಲಕ 45 ನಿಮಿಷಗಳಲ್ಲಿ 5 ಲಕ್ಷ ರೂ.ಗಳ ವರೆಗೆ ಸಾಲ ಪಡೆಯಬಹುದು.

ಕೊರೋನಾ ವೈರಸ್ ಬಿಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆ ನಿಶ್ಚಲವಾಗಿದೆ. ಲಾಕ್‌ಡೌನ್‌ನಿಂದಾಗಿ ಜನರು ಅತಿ ಹೆಚ್ಚು ಹಣಕಾಸಿನ ತೊಂದರೆಯನ್ನು ಎದುರಿಸುತ್ತಿದ್ದಾರೆ
ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಜನರಿಗೆ ನೆರವಾಗಲು ಮುಂದೆ ಬಂದಿರುವ ಸರಕಾರಿ ಸ್ವಾಮ್ಯದ ಮುಂಚೂಣಿಯ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ತುರ್ತು ಸಾಲ ಸೇವೆಯನ್ನು ಒದಗಿಸುತ್ತಿದೆ.

ಸಾಲ ತೆಗೆದುಕೊಂಡು 6 ತಿಂಗಳ ಬಳಿಕ EMI ಪ್ರಾರಂಭ:

ಎಸ್‌ಬಿಐನ ಈ ತುರ್ತು ಸಾಲ ಯೋಜನೆ ಅಡಿಯಲ್ಲಿ ಸಾಲ ಪಡೆದವರು, ಸಾಲ ಅನುಮೋದಿಸಿದ ಆರು ತಿಂಗಳ ನಂತರ ಸಮನಾದ ಮಾಸಿಕ ಕಂತುಗಳನ್ನು ಪಾವತಿಸಬೇಕಾಗುತ್ತದೆ. ಅಂದರೆ ನಿಮ್ಮ ಇಎಂಐ ಸಾಲ ಪಡೆದು ಆರು ತಿಂಗಳ ಬಳಿಕ ಶುರುವಾಗಲಿದೆ.

ಕೊರೊನಾವೈರಸ್‌ದಿಂದಾಗಿ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದ ಉಂಟಾಗಿರುವ ಹಣಕಾಸಿನ ತೊಂದರೆಗಳನ್ನು ಎದುರಿಸುತ್ತಿರುವ ಗ್ರಾಹಕರಿಗೆ ಈ ತುರ್ತು ಸಾಲ ಯೋಜನೆಯಿಂದ ಸಹಾಯವಾಗುತ್ತದೆ
10.5 ಪರ್ಸೆಂಟ್ ಬಡ್ಡಿದರದಲ್ಲಿ ಸಾಲ ಎಸ್‌ಬಿಐ ತುರ್ತು ಸಾಲ ಯೋಜನೆಯು 10.5 ಪರ್ಸೆಂಟ್ ಬಡ್ಡಿದರದಲ್ಲಿ ಸಾಲ ನೀಡುತ್ತಿದೆ ಮತ್ತು ಸಾಲದ ಇಎಂಐ ಆರು ತಿಂಗಳ ನಂತರ ಪ್ರಾರಂಭವಾಗಲಿದೆ. ಇದು ಇತರ ವೈಯಕ್ತಿಕ ಸಾಲಗಳಿಗೆ ಹೋಲಿಸಿದರೆ ಸಾಕಷ್ಟು ಉತ್ತಮವಾಗಿದೆ.
ನೀವು ಸಾಲ ಪಡೆಯಲು ಅರ್ಹರೆಂದು ತಿಳಿಯಲು ಮೊದಲು SMS ಮಾಡಬೇಕು ಆನ್‌ಲೈನ್‌ನಲ್ಲಿ ಅಥವಾ ಎಸ್‌ಬಿಐನ ಯೋನೊ ಆಪ್ ಮೂಲಕ ಅರ್ಜಿ ಸಲ್ಲಿಸುವ ಮೂಲಕ ನೀವು ಈ ತುರ್ತು ಸಾಲ ಯೋಜನೆಯನ್ನು ಪಡೆಯಬಹುದು. ಆದರೆ ಅದಕ್ಕೂ ಮೊದಲು ನೀವು ಈ ಸಾಲ ಪಡೆಯಲು ಅರ್ಹರೆಂದು ತಿಳಿದುಕೊಳ್ಳಲು ಎಸ್‌ಎಂಎಸ್ ಮಾಡಬೇಕು. ನಿಮ್ಮ ಮೊಬೈಲ್‌ನಲ್ಲಿ 'PAPL' ಎಂದು ಟೈಪ್‌ ಮಾಡಿ ನಿಮ್ಮ ಎಸ್‌ಬಿಐ ಅಕೌಂಟ್ ನಂಬರ್‌ನ ಕೊನೆಯ ನಾಲ್ಕು ಸಂಖ್ಯೆಗಳನ್ನು ಟೈಪ್‌ ಮಾಡಿ 567676 ಗೆ ಕಳುಹಿಸುವ ಮೂಲಕ ನೀವು ಈ ಸಾಲ ಯೋಜನೆಯ ಅರ್ಹತೆಯನ್ನು ಪರಿಶೀಲಿಸಬಹುದು. ನೀವು ಸಾಲಕ್ಕೆ ಅರ್ಹರಾಗಿದ್ದರೆ ಎಸ್‌ಬಿಐ ನಿಮ್ಮ ಎಸ್‌ಎಂಎಸ್‌ಗೆ ಪ್ರತಿಕ್ರಿಯಿಸುತ್ತದೆ. ಜೊತೆಗೆ ಕೆಲವು ನಿಯಮಗಳು ಕೂಡ ಅನ್ವಯವಾಗಲಿದೆ.

ಎಸ್‌ಬಿಐ ತುರ್ತು ಸಾಲ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:

ಯೋನೊ ಎಸ್‌ಬಿಐ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಮತ್ತು 'ಪೂರ್ವ-ಅನುಮೋದಿತ ಸಾಲ'(Pre-approved Loan) ಕ್ಲಿಕ್ ಮಾಡಿ. - ಅಧಿಕಾರಾವಧಿ ಮತ್ತು ಸಾಲದ ಮೊತ್ತವನ್ನು ಸೆಲೆಕ್ಟ್ ಮಾಡಿ. - ನಿಮ್ಮ ಖಾತೆಯ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುವುದು ಮತ್ತು ನೀವು ಅದನ್ನು ಸಲ್ಲಿಸಬೇಕು. - ಎಸ್‌ಬಿಐ ತುರ್ತು ಸಾಲದ ಮೊತ್ತವನ್ನು ತಕ್ಷಣ ನಿಮ್ಮ ಎಸ್‌ಬಿಐ ಉಳಿತಾಯ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಪ್ರಕ್ರಿಯೆಯು ಎಲ್ಲವೂ ಸರಿಯಾಗಿ ನಡೆದರೆ 45 ನಿಮಿಷಗಳಲ್ಲಿ 5 ಲಕ್ಷ ರುಪಾಯಿವರೆಗೆ ಸಾಲವನ್ನು ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ.