News

Ration Card BPL ರಾಜ್ಯದಲ್ಲಿ ಎರಡು ಮಾದರಿಯ ಬಿಪಿಎಲ್‌ ಕಾರ್ಡ್‌ ಜಾರಿ ಶೀಘ್ರ: ಸಚಿವ ಕೆ.ಎಚ್ ಮುನಿಯಪ್ಪ!

27 July, 2023 3:17 PM IST By: Hitesh
Implementation of two types of BPL cards in the state soon: Minister KH Muniappa

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಜಾರಿ ಬೆನ್ನಲ್ಲೇ ಬಿಪಿಎಲ್‌ (BPL Ration Card ) ಕಾರ್ಡ್‌ನಲ್ಲಿ ಕೆಲವು ನಿರ್ದಿಷ್ಟ ಬದಲಾವಣೆಗೆ ರಾಜ್ಯ ಸರ್ಕಾರ ಮುಂದಾಗಿದೆ.

ರಾಜ್ಯದಲ್ಲಿ ಎರಡು ಮಾದರಿಯ (BPL Card) ಬಿಪಿಎಲ್‌ (Ration card)ಕಾರ್ಡ್‌ಗಳನ್ನು ಜಾರಿ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ

ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್ ಮುನಿಯಪ್ಪ ಅವರು ತಿಳಿಸಿದ್ದಾರೆ.  

ರಾಜ್ಯದಲ್ಲಿ 2017ರಿಂದ ಇಲ್ಲಿಯ ವರೆಗೆ ಬಂದಿರುವ ಬಿಪಿಎಲ್ (BPL Card)  ಕಾರ್ಡ್ ಅರ್ಜಿಗಳನ್ನು

ಪರಿಶೀಲಿಸಿ, ಕಾರ್ಡ್ ಹಂಚಿಕೆ ಮಾಡಲಾಗುವುದು ಎಂದಿದ್ದಾರೆ.  

ಅಲ್ಲದೇ ಬಿಪಿಎಲ್ ಕಾರ್ಡ್ ಎರಡು ಗುಂಪುನ್ನಾಗಿ ವಿಭಜನೆ ಮಾಡುವ ಬಗ್ಗೆಯೂ ಮಹತ್ವದ ಸುಳಿವನ್ನು ನೀಡಿದ್ದಾರೆ.

ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) (BPL) ಪಡಿತರ (Ration card) ಚೀಟಿಗಳನ್ನು ಎರಡು ಮಾದರಿಯಾಗಿ

ಮಾಡುವ ನಿಟ್ಟಿನಲ್ಲಿ ಚರ್ಚೆ ನಡೆದಿರುವುದಾಗಿ ಸಚಿವರು ತಿಳಿಸಿದ್ದಾರೆ.

ಈಗ ಇರುವ ಬಿಪಿಎಲ್ (BPL Cards) ಕಾರ್ಡ್‌ಅನ್ನು ಎರಡು ಮಾದರಿಯಾಗಿ ವಿಭಜನೆ ಮಾಡುವುದು

ಹಾಗೂ ಒಂದು ಕಾರ್ಡ್‌ ಅನ್ನು ವೈದ್ಯಕೀಯ ಹಾಗೂ ಮತ್ತಿತರ ಸರ್ಕಾರಿ ಸೌಲಭ್ಯಗಳನ್ನು ನೀಡಲು ಬಳಸುವುದು

ಹಾಗೂ ಮಾದರಿಯ ಬಿಪಿಎಲ್ (BPL Cards)  ಕಾರ್ಡ್‌ನಲ್ಲಿ (Ration card) ಪಡಿತರದ ಜೊತೆಗೆ ವೈದ್ಯಕೀಯ ಪ್ರಯೋಜನವನ್ನೂ

ನೀಡುವುದು ಎರಡು ಮಾದರಿಯ ಬಿಪಿಎಲ್‌ ಕಾರ್ಡ್‌ ಯೋಜನೆಯ ಉದ್ದೇಶವಾಗಿದೆ.   

ಎರಡು ಮಾದರಿಯ ಬಿಪಿಎಲ್‌ ಕಾರ್ಡ್‌ ನೀಡುವ ಯೋಜನೆಯನ್ನು ಈಗಾಗಲೇ ಆಂಧ್ರಪ್ರದೇಶದಲ್ಲಿ ಪ್ರಯೋಗಿಸಿ,

ಅಲ್ಲಿ ಯಶಸ್ವಿಯಾಗಿದೆ ಎಂದು ಸಚಿವರು ಹೇಳಿದ್ದಾರೆ. 

ಈಗಾಗಲೇ ಆಂಧ್ರಪ್ರದೇಶದಲ್ಲಿ ಬಿಪಿಎಲ್‌ ಕಾರ್ಡ್‌ನಲ್ಲಿ ಎರಡು ಮಾದರಿಯನ್ನು ಸೃಜಿಸಲಾಗಿದೆ.

ಒಂದು ವರ್ಗಕ್ಕೆ ಈ ಕಾರ್ಡ್‌ನಲ್ಲಿ ಆಹಾರ ಮತ್ತು ಧವಸ ಧಾನ್ಯಗಳು ಲಭ್ಯವಾಗುವುದಿಲ್ಲ.

ಆದರೆ, ಅದರಲ್ಲಿ ವೈದ್ಯಕೀಯ, ಮೀಸಲಾತಿ ಹಾಗೂ ಆದಾಯ ಪ್ರಮಾಣಪತ್ರ ಸೇರಿದಂತೆ ಮತ್ತಿತರ

ಸರ್ಕಾರಿ ಯೋಜನೆಗಳಿಗೆ ಈ ಕಾರ್ಡ್‌ (Ration card)ಅನ್ನು ಬಳಸಿಕೊಳ್ಳಬಹುದಾಗಿದೆ.  

ಎರಡನೇ ಮಾದರಿಯ ಪಡಿತರ ಚೀಟಿಗೆ ಆಹಾರ (Ration card) ಧಾನ್ಯಗಳು ಅಲ್ಲದೇ ಇನ್ನಿತರ ಸರ್ಕಾರಿ ಸೌಲಭ್ಯಗಳೂ ಸಹ ಸಿಗಲಿದೆ.

ಮುಖ್ಯಮಂತ್ರಿ (Chief Minister) ಯೊಂದಿಗೆ ಚರ್ಚಿಸಿ ತೀರ್ಮಾನ

ಎರಡು ಮಾದರಿಯ ಬಿಪಿಎಲ್‌ ಕಾರ್ಡ್‌ ನೀಡುವ ಸಂಬಂಧ ಮುಖ್ಯಮಂತ್ರಿ

ಸಿದ್ದರಾಮಯ್ಯ (Chief Minister Siddaramaiah) ಅವರೊಂದಿಗೆ ಚರ್ಚಿಸಿ,

ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು

ಸಚಿವ ಕೆ.ಎಚ್ (Minister KH Muniappa) ಮುನಿಯಪ್ಪ ಅವರು ತಿಳಿಸಿದ್ದಾರೆ.    

ಸಮೀಕ್ಷೆ ನಡೆಸಿ ಜಾರಿ

ಇನ್ನು ಈ ಯೋಜನೆಯ ಜಾರಿಯನ್ನು ಸಮೀಕ್ಷೆ ಮಾಡಿ ಹಾಗೂ ನಿಖರವಾದ ಅಂಕಿ- ಸಂಖ್ಯೆಗಳನ್ನು

ಮಾಡಿದ ನಂತರ ಎರಡು ಮಾದರಿಯ  ಬಿಪಿಎಲ್‌ ಕಾರ್ಡ್‌ಗಳನ್ನು ಜಾರಿ ಮಾಡಲಾಗುವುದು.  

ಮನೆ-ಮನೆಗೆ ಸಮೀಕ್ಷೆಯನ್ನು ಪ್ರಾರಂಭಿಸುವ ಬಗ್ಗೆಯೂ ಚಿಂತನೆ ನಡೆದಿದೆ.

ಅಲ್ಲದೇ ಶೀಘ್ರದಲ್ಲೇ ಹೊಸ ಮಾದರಿಯನ್ನು (Ration card)ಜಾರಿ ಮಾಡುವುದಾಗಿ ಅವರು ಹೇಳಿದ್ದಾರೆ.    

2017ರಿಂದ ರಾಜ್ಯದಲ್ಲಿ 3.90 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ ಅರ್ಜಿಗಳನ್ನು ಸ್ವೀಕರಿಸಲಾಗಿದೆ.

ಈ ಎಲ್ಲ  ಬಿಪಿಎಲ್ ಕಾರ್ಡ್‌ಗಳನ್ನು ಎರಡು ಗುಂಪುಗಳಾಗಿ ವಿಭಜಿಸುವ ಪ್ರಾಯೋಗಿಕ ಪ್ರಯೋಗ ಈಗಾಗಲೇ ಪ್ರಾರಂಭಿಸಿರುವುದಾಗಿ ಅವರು ತಿಳಿಸಿದ್ದಾರೆ. 

ಸರ್ಕಾರಿ ಯೋಜನೆ ನಂತರ ಹೆಚ್ಚಾದ ಬೇಡಿಕೆ

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ (Congress Govt)ವು ಚುನಾವಣೆ ಪೂರ್ವದಲ್ಲಿ ಘೋಷಿಸಿದ್ದ  

5 ಪ್ರಮುಖ ಗ್ಯಾರಂಟಿ (5 Major Guarantee Scheme)ಗಳನ್ನು ಜಾರಿ ಮಾಡುವ ಸಂದರ್ಭದಲ್ಲಿ ಮುಖ್ಯವಾಗಿ

ಗೃಹಲಕ್ಷ್ಮೀ ಹಾಗೂ ಅನ್ನಭಾಗ್ಯ ಯೋಜನೆ (Grilahkshmi, Annabhagya Yojana)ಗಳ

ಜಾರಿಗೆ ಬಿಪಿಎಲ್‌ ಹಾಗೂ ಎಪಿಎಲ್‌ ಕಾರ್ಡ್‌ (BPL,APL Card)ಗಳನ್ನು ಪ್ರಧಾನವಾಗಿ

ಇರಿಸಿಕೊಂಡು ವಿವಿಧ ಯೋಜನೆಗಳನ್ನು ಜಾರಿ ಮಾಡುತ್ತಿದೆ.

ಹೀಗಾಗಿ, ರಾಜ್ಯ ಸರ್ಕಾರವು ಪ್ರಮುಖ ಯೋಜನೆಗಳ ಜಾರಿಗೆ ಮುಂದಾದ ನಂತರದ ದಿನಗಳಲ್ಲಿ

ರಾಜ್ಯದಲ್ಲಿ ಎಪಿಎಲ್‌ ಹಾಗೂ ಬಿಪಿಎಲ್‌ ಕಾರ್ಡ್‌ ಮಾಡಿಸಿಕೊಳ್ಳುವವರ ಪುನರ್‌ ನವೀಕರಣ,

ವಿಳಾಸ ಬದಲಾವಣೆ ಹಾಗೂ ಹೊಸದಾಗಿ ಅರ್ಜಿ ಸಲ್ಲಿಸುವುದು ಸೇರಿದಂತೆ ಹಲವು

ಕಾರಣಕ್ಕಾಗಿ ಸಾರ್ವಜನಿಕರಿಂದ ಬಿಪಿಎಲ್‌ ಹಾಗೂ ಎಪಿಎಲ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೆಚ್ಚಳವಾಗಿದೆ.